ಭಾರತದ ಗೆಲುವಿಗೆ ವಿದ್ಯಾರ್ಥಿಗಳ ಪ್ರಾರ್ಥನೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ. ೨೯- ಇಂದು ವೆಸ್ಟ್ ಇಂಡೀಸ್ ನ ಬರ್ಬಡಾಸ್ ಮೈದಾನದಲ್ಲಿ ನಡೆಯುತ್ತಿರುವ ಟಿ ೨೦ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ವಿಜಯ ಸಾಧಿಸಲಿ ಎಂದು ನಗರದ ವಾಸವಿ ಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದ್ದಾರೆ.
ಬ್ಯಾಟ್ ಬಾಲ್ ವಿಕೆಟ್ ಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ ಕೈಯಲ್ಲಿ ಬ್ಯಾಟ್ ಬಾಲ್ ಹಿಡಿದು ಕೊಂಡು ಪುಟ್ಟ ಪುಟ್ಟ ಮಕ್ಕಳು.. ಭಾರತ ಗೆದ್ದು ಬರಲಿ ಎಂದು ಹಾರೈಸಿದರು. ಏಕಕಾಲದಲ್ಲಿ ಪ್ಲೇಯರ್ ಪೋಟೋ ಹಿಡಿದು ಪಂದ್ಯ ಗೆಲ್ಲುವಂತೆ. ರಣರೋಚಕ ಪಂದ್ಯ ವೀಕ್ಷಿಸಲು ಕಾತುರದಿಂದ ಕಾಯ್ತಾ ಕುಳಿತಿದ್ದಾರೆ ಶಾಲೆಯ ಕ್ರೀಡಾಭಿಮಾನಿ ವಿದ್ಯಾರ್ಥಿಗಳು.
ಕಳೆದ ವರ್ಷ ಕೈತಪ್ಪಿದ್ದ ೫೦ ಓವರ್ ಗಳ ವಿಶ್ವಕಪ್ ಈ ಬಾರಿ ೨೦ ಓವರ್ ಗಳ ಕಪ್ ಯಾವುದೇ ಕಾರಣಕ್ಕೂ ಕೈತಪ್ಪಲ್ಲ. ಎರಡು ಬಲಿಷ್ಠ ತಂಡಗಳು ಮದಗಜಗಳಂತೆ ಹೋರಾಟ ಮಾಡ್ತಿವೆ. ಈ ಪಂದ್ಯದಲ್ಲಿ ಭಾರತ ತಂಡ ಗೆದ್ದು ದೊಡ್ಡದೊಂದು ಇತಿಹಾಸ ಬರೆಯಲಿದೆ ಎಂದು ಶಾಲೆಯ ಉಪನ್ಯಾಸಕ ವೀರೇಶ ಹೇಳಿದರು.