ಕೈಗಾ ವಿದ್ಯುತ್ ಯೋಜನೆಗೆ ಅವಕಾಶ ಪಡೆದ ಎಂಇಐಎಲ್
ಬೆಂಗಳೂರು, ಜೂನ್ ೨೯: ನ್ಯೂಕ್ಲಿಯರ್ ಪವರ್ ಕಾರ್ಪೂರೇಷನ್ ಆಫ್ ಇಂಡಿಯಾ (ಎನ್‌ಪಿಸಿಐಎಲ್) ಶುದ್ಧ ಮತ್ತು ಸುರಕ್ಷಿತ ಅಣು ವಿದ್ಯುತ್ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದು, ರಾಜ್ಯದ ಕೈಗಾ ಸ್ಥಾವರದಲ್ಲಿ ೨,೭೦೦ ಮೆಘಾ ವ್ಯಾಟ್ ವಿದ್ಯುತ್ ಉತ್ಪಾದನೆ ಯೋಜನೆ ರೂಪಿಸಿದೆ.
ಇದಕ್ಕಾಗಿ ಎನ್‌ಪಿಸಿಎಲ್ ತನ್ನ ಈವರೆಗಿನ ಬೃಹತ್ ಮೊತ್ತ ಎನ್ನಬಹುದಾದದ ೧೨,೭೯೯ ಕೋಟಿ ರೂಪಾಯಿಗಳ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ದೇಶದ ಪ್ರಖ್ಯಾತ ಮೂಲಸೌಕರ್ಯ ಸಂಸ್ಥೆ ಎಂ.ಇ.ಐ.ಎಲ್ ಈ ವಿದ್ಯುತ್ ಸ್ವಾವಲಂಬಿ ನಿರ್ಮಾಣ ಟೆಂಡರ್ ಅನ್ನು ತನ್ನದಾಗಿಸಿಕೊಂಡಿದೆ.
ಅಣುಶಕ್ತಿ ಇಲಾಖೆಯ ಅಧೀನದಲ್ಲಿರುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ ಪಿಸಿಐಎಲ್) ನಡೆಸುವ ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ (ಇಪಿಸಿ) ಗುತ್ತಿಗೆಗೆ ಮೇಘಾ ಎಂಜಿನಿಯರಿಂಗ್ ಮತ್ತು ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಅತ್ಯಂತ ಕಡಿಮೆ ಬಿಡ್ದಾರನಾಗಿ ಹೊರಹೊಮ್ಮಿದೆ.
ಈ ಪ್ರತಿಷ್ಠಿತ ಯೋಜನೆಯು ಕರ್ನಾಟಕದ ಕೈಗಾದಲ್ಲಿ ನಿರ್ಮಾಣವಾಗಲಿದ್ದು, ಶುದ್ಧ ಮತ್ತು ವಿಶ್ವಾಸಾರ್ಹ ಪರಮಾಣು ಶಕ್ತಿಯತ್ತ ಭಾರತದ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಗಲಿದೆ.
‘ಈ ಒಪ್ಪಂದವು ಎಂಇಐಎಲ್ ಗೆ ಮಹತ್ವದ ಯೋಜನೆ ಜತೆಗೆ ಪರಮಾಣು ಇಂಧನ ಕ್ಷೇತ್ರದ ಪ್ರವೇಶಕ್ಕೆ ಸಮರ್ಥ ವೇದಿಕೆಯಾಗಿದೆ ” ಎಂದು ಎಂಇಐಎಲ್ ನಿರ್ದೇಶಕ ಸಿ.ಎಚ್.ಸುಬ್ಬಯ್ಯ ಹೇಳಿದರು. “ಉತ್ಕೃಷ್ಟತೆ ಮತ್ತು ನಾವೀನ್ಯತೆಗೆ ಹೆಸರುವಾಸಿಯಾಗಿರುವ ಎಂಇಐಎಲ್ ಈಯೋಜನೆ ಮೂಲಕ ದೇಶದ ಶುದ್ಧ ಇಂಧನ ಪರಿಹಾರ ಮತ್ತು ಸ್ವಾವಲಂಬನೆಗೆ ಕೊಡುಗೆ ನೀಡಲು ಉತ್ಸುಕವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.