ಅಮರನಾಥ ಯಾತ್ರಿಕರಿಗೆ ಅದ್ಧೂರಿ ಸ್ವಾಗತ: ಬಿಗಿಭದ್ರತೆ
ಶ್ರೀನಗರ,ಜೂ.೨೯-ಜಮ್ಮು ಮತ್ತು ಕಾಶ್ಮೀರದ ಪವಿತ್ರ ಅಮರನಾಥ ಯಾತ್ರೆ ಕೈಗೊಂಡಿರುವ ಮೊದಲ ತಂಡದಲ್ಲಿ ೪,೬೦೩ ಯಾತ್ರಾರ್ಥಿಗಳು ಕಾಶ್ಮೀರ ಕಣಿವೆ ತಲುಪಿದ್ದು ಜಿಲ್ಲಾಡಳಿತ ಮತ್ತು ಜನರಿಂದ ಅದ್ಧೂರಿ ಸ್ವಾಗತ ದೊರೆತಿದೆ. ಈ ನಡುವೆ ಯಾತ್ರಾರ್ಥಿಗಳಿಗೆ ಬಾರಿ ಬಿಗಿ ಭದ್ರತೆ ಒದಗಿಸಲಾಗಿದೆ.
ಬಾಲ್ಟಾಲ್‌ನಿಂದ ಪವಿತ್ರ ಗುಹೆಗೆ ಹೋಗುವ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಯಾತ್ರಿಕರು ಸೇರಿದ್ದು ಕುಲ್ಗಾಮ್, ಅನಂತನಾಗ್, ಶ್ರೀನಗರ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ಯಾತ್ರಾರ್ಥಿಗಳನ್ನು ಹಾರ ಹಾಕಿ ಸ್ವಾಗತಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಜಾನೆ ಭಗವತಿ ನಗರ ಜಮ್ಮು ಬೇಸ್ ಕ್ಯಾಂಪ್‌ನಿಂದ ಧ್ವಜಾರೋಹಣ ಮಾಡಿದ ಯಾತ್ರಿಗಳನ್ನು ಸ್ವಾಗತಿಸಲು ಸ್ಥಳೀಯ ಮುಸ್ಲಿಮರು ಹಲವಾರು ಸ್ಥಳಗಳಲ್ಲಿ ಪೊಲೀಸ್ ಮತ್ತು ನಾಗರಿಕ ಆಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಸೇರಿಕೊಂಡು ಯಾತ್ರಾರ್ಥಿಗಳನ್ನು ಬರಮಾಡಿಕೊಂಡರು.
೫೨ ದಿನಗಳ ಅಮರನಾಥ ಯಾತ್ರೆ ಆಗಸ್ಟ್ ೧೯ರಂದು ಮುಕ್ತಾಯವಾಗಲಿದೆ.ಅನಂತನಾಗ್‌ನ ಸಾಂಪ್ರದಾಯಿಕ ೪೮-ಕಿಮೀ ನುನ್ವಾನ್-ಪಹಲ್ಗಾಮ್ ಮಾರ್ಗ ಮತ್ತು ಗಂಡರ್‍ಬಾಲ್‌ನ ೧೪-ಕಿಮೀ ಬಾಲ್ಟಾಲ್ ಮಾರ್ಗ ದ ಪ್ರಯಾಣ ಆಗಸ್ಟ್ ೧೯ ರಂದು ಮುಕ್ತಾಯಗೊಳ್ಳಲಿದೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಖಾಜಿಗುಂಡ್ ಪ್ರದೇಶದ ನವಯುಗ್ ಸುರಂಗದ ಮೂಲಕ ೨೩೧ ಲಘು ಮತ್ತು ಭಾರೀ ವಾಹನಗಳ ಅಶ್ವದಳದ ಮೂಲಕ ಕಣಿವೆ ತಲುಪಿದ ಯಾತ್ರಾರ್ಥಿಗಳು ಅವರನ್ನು ಜಿಲ್ಲಾಧಿಕಾರಿ ಅಥರ್ ಅಮೀರ್ ಖಾನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಿವಿಲ್ ಸದಸ್ಯರು ಸ್ವಾಗತಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಅಮೀರ್ ಖಾನ್ ಮಾತನಾಡಿ , ಯಾತ್ರಾರ್ಥಿಗಳಿಗೆ ಅಗತ್ಯ ಸಿದ್ದತೆ ಮತ್ತು ಭದ್ರತೆ ಒದಗಿಸಲಾಗಿದೆ.
ಯಾತ್ರಿಗಳ ಬೆಂಗಾವಲು ಪಡೆಗಳು ಬಾಲ್ಟಾಲ್ ಮತ್ತು ಪಹಲ್ಗಾಮ್‌ನಲ್ಲಿರುವ ಬೇಸ್ ಕ್ಯಾಂಪ್‌ಗಳಿಗೆ ಪ್ರತ್ಯೇಕವಾಗಿ ಹೊರಟು ಅಲ್ಲಿಂದ ೩,೮೮೦ ಮೀಟರ್ ಎತ್ತರದ ಪವಿತ್ರ ಗುಹೆ ದೇಗುಲಕ್ಕೆ ತಲುಪಿವೆ ಎಂದು ಹೇಳಿದ್ದಾರೆ.
ಪಹಲ್ಗಾಮ್ ಅಕ್ಷವನ್ನು ತೆಗೆದುಕೊಳ್ಳುವ ಯಾತ್ರಾರ್ಥಿಗಳನ್ನು ಉಪ ಆಯುಕ್ತ ಸೈಯದ್ ಫಕ್ರುದೀನ್ ಹಮೀದ್ ಮತ್ತು ಇತರ ಅಧಿಕಾರಿಗಳು ಅನಂತನಾಗ್‌ನಲ್ಲಿ ಸ್ವಾಗತಿಸಿದರು. ಬಾಲ್ಟಾಲ್ ಅಕ್ಷದ ಮೂಲಕ ಗುಹಾ ದೇಗುಲಕ್ಕೆ ತೆರಳುತ್ತಿದ್ದ ಯಾತ್ರಿಗಳನ್ನು ಶ್ರೀನಗರದ ಪಂಥಾ ಚೌಕ್‌ನಲ್ಲಿ ಜಿಲ್ಲಾಧಿಕಾರಿ ಬಿಲಾಲ್ ಮೊಹಿ-ಉದ್ದೀನ್ ಭಟ್ ಸ್ವಾಗತಿಸಿದರು. ಮತ್ತು ಸ್ಥಳೀಯರು ಸೇರಿದಂತೆ ಇತರರು ಬರಮಾಡಿಕೊಂಡರು.
ಸಂಚಾರ ನಿರ್ಬಂಧ
ಅಮರನಾಥ ಯಾತ್ರೆ ಹಿನ್ನೆಲೆಯಲ್ಲಿ “ಜೂನ್ ೨೮ ರಿಂದ ಆಗಸ್ಟ್ ೧೯ ರವರೆಗೆ ವಿವಿಧ ಮಾರ್ಗಗಳಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗುವುದು, ಅನಾನುಕೂಲತೆ ಕಡಿಮೆ ಮಾಡಲು ದೈನಂದಿನ ಸಲಹೆ ನೀಡಲಾಗುತ್ತದೆ” ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ವರ್ಷದ ಯಾತ್ರೆಗೆ ೩.೫೦ ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ಗುಹಾ ದೇಗುಲಕ್ಕೆ ಎರಡು ಮಾರ್ಗಗಳಲ್ಲಿ ೧೨೫ ಸಮುದಾಯ ಅಡುಗೆಮನೆಗಳನ್ನು ಸ್ಥಾಪಿಸಲಾಗಿದೆ ಮತ್ತು ೬,೦೦೦ ಕ್ಕೂ ಹೆಚ್ಚು ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗಿದೆ.