ಭಾರ್ತಿ ಏರ್‌ಟೆಲ್ ರೀಚಾರ್ಜ್ ದರ ಏರಿಕೆ
ನವದೆಹಲಿ, ಜೂ. ೨೮- ಭಾರ್ತಿ ಏರ್‌ಟೆಲ್‌ನ ರೀಚಾರ್ಜ್ ದರವನ್ನು ಹೆಚ್ಚಳ ಮಾಡಿದೆ. ಪರಿಷ್ಕೃತ ದರಗಳು ಜುಲೈ ೩ ರಿಂದ ಜಾರಿಗೆ ಬರಲಿದೆ.
ಮುಖೇಶ್ ಅಂಬಾನಿ ಒಡೆತನದ ರೀಲೆಯನ್ಸ್ ಜಿಯೋ ತನ್ನ ವಿವಿಧ ಪ್ಲಾನ್ ಗಳ ದರವನ್ನು ಪರಿಷ್ಕರಿಸಿದ ಬೆನ್ನಲ್ಲೇ ಭಾರ್ತಿ ಏರ್‌ಟೆಲ್ ದರವು ಹೆಚ್ಚಳವಾಗಿದೆ. ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಟೆಲಿಕಾಮ್ ಕಂಪನಿಗಳು ದರ ಏರಿಕೆ ಮಾಡಿದೆ.
ಭಾರ್ತಿ ಏರ್‌ಟೆಲ್ ಶೇ. ೧೦.೨೧ರಷ್ಟು ಹೆಚ್ಚಳ ಮಾಡಿದೆ. ಜಿಯೋ ಶೇ. ೧೨ರಿಂದ ೨೭ರವರೆಗೆ ಏರಿಕೆ ಮಾಡಿದೆ. ಅನ್‌ಲಿಮಿಟೆಡ್ ವಾಯ್ಸ್ ಪ್ಲಾನಿನ ೧೭೯ ರೂ. ಯಿಂದ ೧೯೯ ರೂ. ವರೆಗೆ (೨೮ ದಿನ ವ್ಯಾಲಿಡಿಟಿ) ಹೆಚ್ಚಿಸಿದೆ.
೪೫೫ ರಿಂದ ೫೦೯ ರೂ. (೮೪ ದಿನ ವ್ಯಾಲಿಡಿಟಿ), ಹೆಚ್ಚಿಸಿದರೆ ೧,೭೯೯ರೂ. ಯಿಂದ ೧೯೯೯ ರೂ.ಗೆ ಹೆಚ್ಚಿಸಿದೆ. (೩೬೫ ದಿನ ವ್ಯಾಲಿಡಿಟಿ).