ಹಣದುಬ್ಬರ ಶೇ. ೪ಕ್ಕೆ ತಗ್ಗಿಸುವ ಗುರಿ
ಮುಂಬೈ, ಜೂ.೨೬-ದೇಶದಲ್ಲಿ ಹಣದುಬ್ಬರವನ್ನು ಶೇಕಡ ೪ಕ್ಕೆ ತಗ್ಗಿಸುವ ಗುರಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಹೊಂದಿದ್ದಾರೆ.
ಭಾರತದ ವಾರ್ಷಿಕ ಚಿಲ್ಲರೆ ಹಣದುಬ್ಬರ ಮೇ ತಿಂಗಳಲ್ಲಿ ಶೇಕಡಾ ೪.೭೫ ಕ್ಕೆ ಇಳಿದಿದೆ, ಏಪ್ರಿಲ್ ತಿಂಗಳಲ್ಲಿ ಶೇಕಡಾ ೪.೮೩ರಿಂದ ರಿಂದ ಕಡಿಮೆಯಾಗಿದೆ,ಇದೀಗ ಅದನ್ನು ಶೇಕಡಾ ೪ಕ್ಕೆ ತರುವ ಗುರಿ ಹೊಂದಿದ್ದು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
“ಹಣದುಬ್ಬರದ ಸವಾಲು ಎದುರಿಸುವುದು ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಲಾಗಿದೆ ಹಣದುಬ್ಬರನ್ನು ಶೇಕಡಾ ೪ಕ್ಕೆ ತರುವ ಎಲ್ಲಾ ಪ್ರಯತ್ನ ನಡೆದಿದೆ ಎಂದು ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ.
ಮೇ ತಿಂಗಳಿನಲ್ಲಿ ಹಣದುಬ್ಬರ ಮಿತವಾಗಿದ್ದರೂ, ಯಾವುದೇ ತೀವ್ರ ಹವಾಮಾನ ಸಂಬಂಧಿತ ಆಘಾತದಿಂದ ಹಣದುಬ್ಬರ ಶೇಕಡಾ ೫ರಷ್ಟು ಇತ್ತು. ಇದರಿಂದ ಬೆಳವಣಿಗೆಯು ದೃಢವಾಗಿ ಉಳಿದಿರುವ ಕಾರಣ,ಆರ್ ಬಿಐ ಗುರಿಯತ್ತ ದೃಢವಾಗಿ ತರುವತ್ತ ಗಮನಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಾರತದ ಬೆಳವಣಿಗೆಯ ವೇಗ ಬಲವಾಗಿ ಉಳಿದಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಮತ್ತಷ್ಟು ಸುಧಾರಿಸಬಹುದು ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರ್ಚ್‌ನಿಂದ ಶೇಕಡಾ ೭.೨ ರಷ್ಟು ಆರ್ಥಿಕತೆ ಬೆಳೆಯುವ ವಿಶ್ವಾಸವಿದೆ,ದಕ್ಷಿಣ ಏಷ್ಯಾದ ದೇಶ ನಿರಂತರ ಆಧಾರದ ಮೇಲೆ ಶೇಕಡಾ ೮ ರಷ್ಟು ಬೆಳವಣಿಗೆ ಸಾಧಿಸುವ ಹಾದಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಖಾಸಗಿ ವಲಯದ ಬಂಡವಾಳ ವೆಚ್ಚಗಳು ಹೆಚ್ಚಾಗಲು ಪ್ರಾರಂಭಿಸಿವೆ ಮತ್ತು ಅದರ ಸ್ಪಷ್ಟ ಪುರಾವೆಗಳಿವೆ, ಇದು ಮತ್ತಷ್ಟು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶವಿದೆ, ವಿಶೇಷವಾಗಿ ಪೂರೈಕೆ ಮತ್ತು ಮೌಲ್ಯ ಸರಪಳಿಗಳಿಗೆ ಸಂಬಂಧಿಸಿದೆ ಎಂದು ತಿಳಿಸಿದ್ದಾರೆ.