ವಿವಸ್ತ್ರವಾಗಲು ಹೇಳುತ್ತಿದ್ದ ಪ್ರಜ್ವಲ್: ಸಂತ್ರಸ್ತೆ ದೂರು
ಬೆಂಗಳೂರು,ಜೂ.೨೬-ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕನೇ ಪ್ರಕರಣ ದಾಖಲಾಗಿದ್ದು, ಆರೋಪಿಯ ಕುರಿತು ಇನ್ನಷ್ಟು ವಿಕೃತಿಯ ದೂರುಗಳು ದಾಖಲಾಗಿವೆ.
ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನನ್ವಯ ಪ್ರಜ್ವಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ,ಇದು ನಾಲ್ಕನೆಯ ಪ್ರಕರಣವಾಗಿದೆ. ಈ ಪ್ರಕರಣದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಹೆಸರು ಕೂಡ ತಳುಕು ಹಾಕಿಕೊಂಡಿದೆ.
ಸಂತ್ರಸ್ತೆಯು ನೀಡಿರುವ ದೂರಿನಲ್ಲಿ ಮಗನ ಶಾಲೆ ವಿಚಾರಕ್ಕೆ ಭೇಟಿ ವೇಳೆಯ ಮೊಬೈಲ್ ಫೋನ್ ನಂಬರ್ ಪಡೆದಿದ್ದ ಪ್ರಜ್ವಲ್ ನನಗೆ ವಿಡಿಯೊ ಕಾಲ್ ಮಾಡಿ ದಿನ ನಿತ್ಯ ಮಾತಾಡುತ್ತಿದ್ದ.
ವಿಡಿಯೊ ಕಾಲ್ ಮಾಡಿ ವಿವಸ್ತ್ರವಾಗುವಂತೆ ಒತ್ತಾಯಿಸಿ ಬೆತ್ತಲಾಗುತ್ತಿದ್ದ ನನ್ನನ್ನು ನೋಡುತ್ತ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ವಿವಸ್ತ್ರವಾಗಲು ಒಪ್ಪದಿದ್ದಾಗ ವಿಡಿಯೊ ಸೇವ್ ಮಾಡಿಕೊಂಡಿರುವುದಾಗಿಯೂ, ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ ಎಂದು ಉಲ್ಲೇಖಿಸಿದ್ದಾರೆ.
ನಂತರ ಏಕಾಏಕಿ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊ ವೈರಲ್ ಆಗಿರುವ ವಿಚಾರ ನನ್ನ ಗಮನಕ್ಕೆ ಬಂದು ಪ್ರಜ್ವಲ್‌ನನ್ನು ಸಂಪರ್ಕ ಮಾಡಿದೆ.
ಆಗಸ್ಟೇ ತಂದಿದ್ದೇನೆ, ಏನೂ ಆಗಲ್ಲ ಎಂದಿದ್ದರಂತೆ. ಎರಡನೇ ಬಾರಿ ಫೋಟೊ ವೈರಲ್ ಆದಾಗ ಸಂತ್ರಸ್ತೆ ದೂರು ನೀಡಲು ಮುಂದಾಗಿದ್ದರು.
ವೈರಲ್ ಆದ ಕೆಲವು ಫೋಟೊಗಳನ್ನು ಕಿರಣ್, ಶರತ್ ಹಾಗೂ ಪ್ರೀತಂ ಗೌಡ ವೈರಲ್ ಮಾಡಿಸಿರುವ ಆರೋಪವಿದೆ. ಈ ಹಿನ್ನೆಲೆಯಲ್ಲಿ ನಾಲ್ವರು ಮೇಲೆ ದೂರು ನೀಡಲು ಮಹಿಳೆ ಮುಂದಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಎಸ್‌ಐಟಿ ಅಧಿಕಾರಿಗಳಿಂದ ತನಿಖೆ ಚುರುಕು ಪಡೆದುಕೊಂಡಿದೆ.
ಜಾಮೀನು ಅರ್ಜಿ :
ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಯ ವಿಚಾರಣೆಗೆ ಇಂದು ಬರಲಿದೆ. ಈ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಪ್ರಜ್ವಲ್‌ಗೆ ಬಿಡುಗಡೆ ಇಲ್ಲ. ಎಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರೂ ಆರೋಪಿಗಳಾಗಿರುವ ಪ್ರಕರಣದಲ್ಲಿ ೮೨ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಎಚ್.ಡಿ. ರೇವಣ್ಣ ಈಗಾಗಲೇ ಜಾಮೀನು ಪಡೆದಿದ್ದಾರೆ. ಮೊದಲು ಲೈಂಗಿಕ ದೌರ್ಜನ್ಯ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ನಂತರ ಅತ್ಯಾಚಾರ ಆರೋಪವನ್ನು ಸೇರಿಸಲಾಗಿತ್ತು.