ಮೂರನೇ ಮಗುವಿಗೆ ಎಲೋನ್ ರಹಸ್ಯ ಸ್ವಾಗತ
ನವದೆಹಲಿ,ಜೂ.೨೫- ತಂತ್ರಜ್ಞಾನ ದಿಗ್ಗಜ ಶತಕೋಟ್ಯಾಧೀಶ್ವರ ಎಲೋನ್ ಮಸ್ಕ್ ಮತ್ತು ನ್ಯೂರಾಲಿಂಕ್‌ನ ವಿಶೇಷ ಯೋಜನೆಗಳ ನಿರ್ದೇಶಕಿ ಶಿವೋನ್ ಜಿಲಿಸ್ ಅವರಿಂದ ಮೂರನೇ ಮಗುವನ್ನು ವಿವೇಚನೆಯಿಂದ ರಹಸ್ಯವಾಗಿ ಸ್ವಾಗತಿಸಿದ್ದು ಒಟ್ಟಾರೆ ಅವರ ೧೨ನೇ ಮಗು ಎಂದು ವರದಿಯಾಗಿದೆ.
ಟೆಕ್ ದಿಗ್ಗಜ ಎಲೋನ್ ಮಸ್ಕ್ ಈ ವರ್ಷದ ಆರಂಭದಲ್ಲಿ ನ್ಯೂರಾಲಿಂಕ್ ಕಾರ್ಯನಿರ್ವಾಹಕ ಶಿವೋನ್ ಜಿಲಿಸ್ ಅವರೊಂದಿಗೆ ಮೂರನೇ ಮಗುವನ್ನು ಸ್ವಾಗತಿಸಿದ್ದಾರೆ ಎಂದು ಬ್ಲೂಮ್‌ಬರ್ಗ್‌ನ ಇತ್ತೀಚಿನ ವರದಿ ತಿಳಿಸಿದೆ.
ತಂತ್ರಜ್ಞಾನ ಮತ್ತು ವ್ಯವಹಾರದಲ್ಲಿ ತಮ್ಮ ನಾವೀನ್ಯತೆಗೆ ಹೆಸರುವಾಸಿಯಾದ ದಂಪತಿಗಳು ತಮ್ಮ ಹೊಸ ಕುಟುಂಬದ ಸದಸ್ಯರ ಆಗಮನವನ್ನು ಮುಚ್ಚಿಡಲು ಹಲವು ದಿನಗಳಿಂದ ಪ್ರಯತ್ನ ಮಾಡಿದ್ದರು. ಅದು ಕೊನೆಗೂ ಬಹಿರಂಗಗೊಂಡಿದೆ ಎಂದು ಹೇಳಲಾಗಿದೆ.
ಟೆಸ್ಲಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಗಾಗಲೇ ನವೆಂಬರ್ ೨೦೨೧ ರಲ್ಲಿ ಜನಿಸಿದ ಜಿಲಿಸ್‌ನೊಂದಿಗೆ ಅವಳಿ ಮಕ್ಕಳಾದ ಸ್ಟ್ರೈಡರ್ ಮತ್ತು ಅಜೂರ್‍ಗೆ ತಂದೆಯಾಗಿದ್ದು, ಅವರ ಒಟ್ಟು ಮಕ್ಕಳ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ, ಆದರೂ ಅವರು ೧೧ ಮಕ್ಕಳನ್ನು ಹೊಂದಿದ್ದಾರೆಂದು ಎಂದು ಹೇಳಲಾಗಿದೆ.
ನ್ಯೂರಾಲಿಂಕ್‌ನ ವಿಶೇಷ ಯೋಜನೆಗಳ ನಿರ್ದೇಶಕ ಜಿಲಿಸ್ ಇತ್ತೀಚಿನ ವರದಿಯ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿಲ್ಲ. ಈ ವಿಷಯ ನಿಜವಾಗಿದ್ದರೆ, ಎಲೋನ್ ಮಸ್ಕ್ ಮತ್ತೊಂದು ಮಗುವನ್ನು ಬರಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಎಲನ್ ಮಸ್ಕ್ ಒಟ್ಟು ಮಕ್ಕಳ ಸಂಖ್ಯೆ ೧೨ ಕ್ಕೆ ಏರಿಕೆಯಾಗಿದೆ ಎಂದು ಸಾರ್ವಜನಿಕ ದಾಖಲೆಗಳು ತೋರಿಸುತ್ತವೆ, ಈಗಾಗಲೇ ಜಿಲಿಸ್‌ನೊಂದಿಗೆ ಅವಳಿ ಮಕ್ಕಳನ್ನು ಹೊಂದಿರುವ ಮಸ್ಕ್, ಮಕ್ಕಳ ಹೆಸರನ್ನು ಬಹಿರಂಗ ಮಾಡದಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿ ಸ್ಪೇಕ್ಸ್ ಎಕ್ಸ್ ನಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತ ಸಂಬಂಧ ಹೊಂದಿದೆ ಎಂದು ಹೇಳಿದ ಕೆಲವೇ ದಿನಗಳಲ್ಲಿ ಮೂರನೇ ಮಗುವಿನ ಪ್ರಕಟಣೆ ಹೊರಬಿದ್ದಿದೆ.