ಯುವಕನ ವಿರುದ್ಧ ಎಫ್‌ಐಆರ್
ಜೈಪುರ,ಜೂ.೨೫-ಜೈಪುರದಲ್ಲಿ ವಿದೇಶಿ ಮಹಿಳಾ ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸಿದ ಯುವಕನ ವಿರುದ್ಧ ಜೈಪುರ ಎಫ್‌ಐಆರ್ ದಾಖಲಿಸಿದ್ದಾರೆ.
ಜೈಪುರದ ಅಮೇರ್ ಕೋಟೆಯ ಬದಿಯಲ್ಲಿ ಚಿತ್ರೀಕರಿಸಲಾದ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೋಲಿಸರು ಕ್ರಮ ತೆಗೆದುಕೊಂಡಿದ್ದಾರೆ .ಆರೋಪಿಗಳು ಇನ್‌ಸ್ಟಾಗ್ರಾಮ್ ರೀಲ್‌ಗಳಿಗಾಗಿ ಮಹಿಳಾ ಪ್ರವಾಸಿಗರಿಗೆ ಕಿರುಕುಳ ನೀಡಿದ್ದಲ್ಲದೆ, ನಿರ್ದಿಷ್ಟ ಅಂಗಡಿಗಳಿಂದ ವಸ್ತುಗಳ ಖರೀದಿ ಮಾಡುವಂತೆ ಒತ್ತಾಯಿಸಿದ್ದಾರೆ.
ಆರೋಪಿ ಯುವಕ ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾನೆ.
ಇದನ್ನು ನೋಡಿದ ನಂತರ ಅನೇಕ ಬಳಕೆದಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋವೊಂದರಲ್ಲಿ ಆರೋಪಿಗಳು ವಿದೇಶಿ ಮಹಿಳಾ ಪ್ರವಾಸಿಗರನ್ನು ಸಮೀಪಿಸಿ,ಅವರು ೧೫೦ ರೂ.ಗೆ ಲಭ್ಯವಿದ್ದಾರೆ ಎಂದು ಹೇಳುತ್ತಿರುವುದನ್ನು ಕಾಣಬಹುದು.
ಇದಲ್ಲದೇ ಇನ್ನೂ ಹಲವು ವಿದೇಶಿ ಮಹಿಳಾ ಪ್ರವಾಸಿಗರ ಕಡೆಗೆ ಯುವಕ ಕೈ ತೋರಿಸಿ, ಇದು ೧೫೦ ರೂ.ಗೆ ಸಿಗುತ್ತದೆ, ಇದು ೨೦೦ ರೂ.ಗೆ ಸಿಗುತ್ತದೆ ಮತ್ತು ೫೦೦ ರೂ.ಗೆ ಸಿಗುತ್ತದೆ ಎನ್ನುತ್ತಾನೆ. ಹಿಂದಿ ಅರ್ಥವಾಗದ ಈ ಮಹಿಳಾ ಪ್ರವಾಸಿ ಕ್ಯಾಮೆರಾದತ್ತ ಕೈ ಬೀಸುತ್ತಿರುವುದು ಕಂಡುಬಂದಿದೆ.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಲವಾರು ಬಳಕೆದಾರರು ವೀಡಿಯೊವನ್ನು ಹಂಚಿಕೊಂಡ ನಂತರ, ಜೈಪುರ ಪೊಲೀಸರು ಕ್ರಮ ಕೈಗೊಂಡು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೫೪ (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಕ್ಕೆ ಸಂಬಂಧಿಸಿದ) ಮತ್ತು ೫೦೫ (೨) ಐಟಿ ಕಾಯ್ದೆಯ ೬೬ ಡಿ ಮತ್ತು ರಾಜಸ್ಥಾನ ಪ್ರವಾಸೋದ್ಯಮ ವ್ಯವಹಾರದ ಸೆಕ್ಷನ್ ೧೩ (೧), ೧೩ (೨) ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ಕಾಯಿದೆ ದಾಖಲಿಸಲಾಗಿದೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಜೈಪುರ ಪೊಲೀಸರು, ಇನ್‌ಸ್ಟಾಗ್ರಾಮ್ ಮೂಲಕ ಅಂತರ್ಜಾಲದಲ್ಲಿ ರೀಲ್ ವೈರಲ್ ಆಗುತ್ತಿದೆ, ಇದರಲ್ಲಿ ಕೆಲವು ವಿದೇಶಿ ಮಹಿಳಾ ಪ್ರವಾಸಿಗರನ್ನು ಮೈ-ಕೈ ಮುಟ್ಟಿದ ಆರೋಪದ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.