ಜುಲೈಯಿಂದ ಸಿ.ಎಂ. ಜನತಾ ದರ್ಶನ ಪುನರ್ ಆರಂಭ ಹಿನ್ನೆಲೆ ಜಿಲ್ಲಾ-ತಾಲೂಕಾ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸಿ:ಕೃಷ್ಣ ಬೈರೇಗೌಡ
ಕಲಬುರಗಿ:ಜೂ.24:ಚುನಾವಣೆ ಕಾರಣ ಸ್ಥಗಿತಗೊಂಡಿದ್ದ ಜನತಾ ದರ್ಶನ ಕಾರ್ಯಕ್ರಮ ವಿಧಾನಮಂಡಲ ಅಧಿವೇಶನ ವೇಳಾಪಟ್ಟಿ ನೋಡಿಕೊಂಡು ಬರುವ ಜುಲೈ ಮಾಹೆಯಿಂದ ಪುನರ್ ಪ್ರಾರಂಭಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಿರ್ಧರಿಸಿದ್ದು, ಇದಕ್ಕೆ ಪೂರಕವಾಗಿ ಜಿಲ್ಲಾ-ತಾಲೂಕಾ ಹಂತದಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಬೇಕೆಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಸೋಮವಾರ ಇಲ್ಲಿನ ಡಿ.ಸಿ.ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜನತಾ ದರ್ಶನದಲ್ಲಿ ಬರುವ ಅರ್ಜಿಗಳಿಗೆ ಆದ್ಯತೆ ಮೇಲೆ ಬಗೆಹರಿಸಬೇಕು. ಸಣ್ಣ-ಪುಟ್ಟ ಸಮಸ್ಯೆಗಳ ಪರಿಹಾರಕ್ಕೆ ಜನ ಇಲ್ಲಿಂದ ಬೆಂಗಳೂರಿಗೆ ಸಿ.ಎಂ. ಅವರನ್ನು ಕಾಣಲು ಬರಬಾರದು. ಇಲ್ಲಿಯೇ ಸಮಸ್ಯೆ ಬಗೆಹರಿಸಬೇಕು ಎಂದರು.
ಪಹಣಿಗಳ ಆಟೋ ಮುಟೇಷನ್ ಕಾರಣ ಆರ್.ಐ., ವಿ.ಎ ಕೆಲಸದ ಕಾರ್ಯಭಾರ ಕಡಿಮೆಯಾಗಿದೆ. ಕಳೆದ ಏಪ್ರಿಲ್ 20 ರಿಂದ ಜೂನ್ 20ರ ವರೆಗೆ ರಾಜ್ಯದಲ್ಲಿ 28 ಲಕ್ಷ ಪಹಣಿ ಮುಟೇಷನ್ ಆಗಿದ್ದು, ಇದರಲ್ಲಿ 16 ಲಕ್ಷ ಆಟೋ ಮುಟೇಷನ್ ಮೂಲಕ ಆಗಿವೆ. ಇದರಲ್ಲಿ ಕಲಬುರಗಿ ವಿಭಾಗದಲ್ಲಿ ಅಟೋ ಮೋಟೇಷನ್ ಒಳಗಾದ ಸಂಖ್ಯೆ 46,854 ರಷ್ಟಿದೆ ಎಂದರು.
ತಹಶೀಲ್ದಾರ ಮತ್ತು ಸಹಾಯಕ ಆಯುಕ್ತರ ಹಂತದಲ್ಲಿರುವ ಕಂದಾಯ ನ್ಯಾಯಾಲಯ ಪ್ರಕರಣಗಳ ವಿಲೇವಾರಿ ತೀವ್ರಗೊಳಿಸಬೇಕು. 180 ದಿನಕ್ಕಿಂತ ಹೆಚ್ಚಿನ ಅವಧಿಯ ಪ್ರಕರಣಗಳು ಕೂಡಲೆ ಪೂರ್ಣಗೊಳಿಸಬೇಕು. ವಿಚಾರಣೆಗೆ ವಕೀಲರು ಬಂದಿಲ್ಲ ಅಂತ ಪ್ರಕರಣ ಮುಂದೂಡಿದರೆ ಜನರಿಗೆ ನ್ಯಾಯ ಕೊಡಿಸೋದು ಯಾವಾಗ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿ ಇಲ್ಲಿ ಜನರಿಗೆ ನಾವು ಉತ್ತರದಾಯಿತ್ವ ಇರಬೇಕಿದೆ. ಹೀಗಾಗಿ ಪ್ರಕರಣ ಬೇಗ ವಿಲೇವಾರಿ ಮಾಡಿದರೆ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ ಎಂದರು. ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ ಮಾತನಾಡಿ ತಿಂಗಳಿನಲ್ಲಿ ಎರಡ್ಮೂರು ಬಾರಿ ವಿಚಾರಣೆ ಕರೆದು ಇದಕ್ಕೆ ವೇಗ ನೀಡಬೇಕು ಎಂದರು.
ತಾಂಡಾಗಳನ್ನು ಕಂದಾಯ ಗ್ರಾಮ ಘೋಷಿಸಿ ಹಕ್ಕು ಪತ್ರ ವಿತರಣೆಗೆ ಗಣಕೀಕರಣ ಕಾರ್ಯಕ್ಕೆ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಮುಗಿಸಬೇಕು. ಪಹಣಿ ಪೆÇೀಡಿಗೆ ಕಲಬುರಗಿ ವಿಭಾಗದಲ್ಲಿ ಸ್ಕೆಚ್, ಸರ್ವೆ ಕಾರ್ಯದ ಪ್ರಕರಣಗಳು ಬಹಳಷ್ಟು ಬಾಕಿ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಇದನ್ನು ಕೂಡಲೆ ವಿಲೇವಾರಿಗೊಳಿಸಬೇಕು. ಆರ್.ಟಿ.ಸಿ ಮಿಸ್‍ಮ್ಯಾಚ್ ಸರಿಪಡಿಸಬೇಕು ಎಂದು ಡಿ.ಡಿ.ಎಲ್.ಆರ್. ಅವರಿಗೆ ಸೂಚಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತೆ ಡಾ.ಬಿ.ಆರ್.ಮಮತಾ ಮಾತನಾಡಿ ಜಿ.ಐ.ಎಸ್. ಆಧಾರಿತ ಮಾರ್ಗದರ್ಶಿ ಮೌಲ್ಯ ತರ್ಕಬದ್ಧಗೊಳಿಸುವಿಕೆ ಸಂಬಂಧ ರಾಜ್ಯದ ರಾಜಾಜಿನಗರ, ಎಚ್.ಎ.ಎಲ್. ಪ್ರದೇಶ ಕಲಬುರಗಿ ವಾರ್ಡ್ ನಂ-1 ನಿಜಾಮಪುರ ಪ್ರದೇಶವನ್ನು ಪ್ರಾಯೋಗಿಕ ಪಡೆದು ಇಲ್ಲಿ ಕಾರ್ಯೋನ್ಮುಖವಾಗಿದ್ದೇವೆ ಎಂದು. ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಈಗಿನ ಪರಿಸ್ಥಿತಿಯಲ್ಲಿ ಒಂದು ಪ್ರತಿಷ್ಟಿತ ಪ್ರದೇಶದಲ್ಲಿ ಮುಖ್ಯ ರಸ್ತೆ ಪಾಶ್ ಏರಿಯಾಗಳಿದಲ್ಲಿ ಅದರ ಹಿಂಭಾಗ ಸ್ಲಮ್ ಇದ್ದರೆ ಒಂದೇ ಮೌಲ್ಯ ನಿಗದಿಯಾಗಿದೆ. ಇದು ವೈಜ್ಞಾನಿಕವಲ್ಲ, ಮೌಲ್ಯ ದರ ಪ್ರತ್ಯೇಕವಾಗಬೇಕು ಎಂದರು.
ಕಚೇರಿ ಆವರಣದಲ್ಲಿ ಗಿಡ ನೆಡಿ: ಕಲ್ಯಾಣ ಕರ್ನಾಟಕ ಭಾಗ ಬಿಸಿಲಿಗೆ ಹೆಸರುವಾಸಿ. ಸುತ್ತ ಗಿಡ ಬೆಳದಲ್ಲಿ 2-3 ಪ್ರಮಾಣ ಉμÁ್ಣಂಶ ಕಡಿಮೆ ಮಾಡಬಹುದು. ಹೀಗಾಗಿ ಎ.ಸಿ, ತಹಶೀಲ್ದಾರ ಕಚೇರಿ ಅವರಣದಲ್ಲಿ ಜಾಗ ಇದ್ದರೆ ಮಳೆಗಾಲ ಇರುವುದರಿಂದ ಕೂಡಲೆ ಅರಣ್ಯ ಇಲಾಖೆ ನೆರವಿನಿಂದ ಗಿಡ ನೆಡಬೇಕು. ಅದು ಬದುಕುವಂತೆ ಕಾಳಜಿ ಸಹ ವಹಿಸಬೇಕೆಂದು ಕಂದಾಯ ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಪಿಂಚಣಿದಾರರ ಇ-ಕೆ.ವೈ.ಸಿ. ಮಾಡಿಸಲು ಡಿ.ಸಿ.ಗಳು ಮುತುವರ್ಜಿ ವಹಿಸಿ: ರಾಜ್ಯದಲ್ಲಿ 78 ಲಕ್ಷ ಜನರಿಗೆ ವಿವಿಧ ರೀತಿಯ ಸಾಮಾಜಿಕ ಭದ್ರತೆಯ ಪಿಂಚಣಿ ನೀಡಲಾಗುತ್ತಿದೆ. ಇದರಲ್ಲಿ 2 ಲಕ್ಷ ಪಿಂಚಣಿದಾರರಿಗೆ ಇ-ಕೆ.ವೈ.ಸಿ ಅಪಡೇಟ್ ಇಲ್ಲ ಕಾರಣ ಕಳೆದ ಕೆಲವು ತಿಂಗಳಿನಿಂದ ಪಿಂಚಣಿ ತಲುಪುತ್ತಿಲ್ಲ. ಇದರಲ್ಲಿ ಬಹುತೇಕರು ಅನಕ್ಷರಸ್ಥರು ಇರಬಹುದು. ನಿಜವಾದ ಕಡು ಬಡವರಿಗೆ ಪಿಂಚಣಿ ದೊರಕಬೇಕೆಂಬ ಉದ್ದೇಶ ನಮ್ಮದು. ಆದರೆ ಇಲ್ಲಿ ನಿಜವಾದ ಫಲಾನುಭವಿಗಲೇ ಹೊರೆಗುಳಿದರೆ ಯೋಜನೆ ಸಾಕಾರವಾಗಲ್ಲ. ಪಂಚ ಗ್ಯಾರಂಟಿ ಯೋಜನೆಗಳು ಸಹ ಇದೇ ಉದ್ದೇಶದಿಂದ ಎಲ್ಲರಿಗೂ ನೀಡಲಾಗುತ್ತಿದೆ ಎಂದು ಸರ್ಕಾರದ ಜನಪರ ಯೋಜನೆಗಳ ಮಹತ್ವವನ್ನು ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.
ಕಡತಗಳ ವರ್ಗಿಕರಣ ಮಾಡಿ: ಕಂದಾಯ ದಾಖಲೆ ಡಿಜಿಟಲೀಕರಣ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ತಿಂಗಳ ಒಳಗಾಗಿ ಎಲ್ಲಾ ಕಂದಾಯ ಇಲಾಖೆ ಕಚೇರಿಗಳಲ್ಲಿ ಎ, ಬಿ, ಸಿ, ಡಿ, ಇ ಎಂದು ಕಡತ ವರ್ಗಿಕರಿಸಬೇಕು. ತದನಂತರ ಕಡತಗಳ ಪ್ರಾಮುಖ್ಯತೆ ಅನುಗುಣವಾಗಿ ಸ್ಕ್ಯಾನ್ ಮಾಡಲು ಸಹಾಯವಾಗಲಿದೆ ಎಂದು ಸಚಿವರು ತಿಳಿಸಿದರು.
ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆಯ ಆಯುಕ್ತ ಪಿ. ಸುನೀಲಕುಮಾರ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್, ಯಾದಗಿರಿ ಡಿ.ಸಿ. ಡಾ.ಸುಶೀಲಾ ಬಿ., ಬೀದರ ಡಿ.ಸಿ. ಗೋವಿಂದರೆಡ್ಡಿ, ರಾಯಚೂರು ಡಿ.ಸಿ. ಚಂದ್ರಶೇಖರ ನಾಯಕ್, ಕೊಪ್ಪಳ ಡಿ.ಸಿ. ನಳಿನ್ ಅತುಲ್, ಬಳ್ಳಾರಿ ಡಿ.ಸಿ. ಪ್ರಶಾಂತಕುಮಾರ ಮಿಶ್ರಾ, ಸಾಮಾಜಿಕ ಪಿಂಚಣಿ ವಿಭಾಗದ ನಿರ್ದೇಶಕ ರಂಗಪ್ಪಾ, ಕರ್ನಾಟಕ ಪಬ್ಲಿಕ್ ಲ್ಯಾಂಡ್ ಕಾಪೆರ್Çೀರೇಷನ್ ಎಂ.ಡಿ ವಸಂತಕುಮಾರ, ಅಪರ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಸೇರಿದಂತೆ ವಿಭಾಗದ ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತಹಶೀಲ್ದಾರರು, ಡಿ.ಡಿ.ಎಲ್.ಆರ್ ಗಳು ಇದ್ದರು.