ರಷ್ಯಾದಲ್ಲಿ ಉಗ್ರರ ದಾಳಿ ೧೫ ಮಂದಿ ಸಾವು
ಮಾಸ್ಕೋ,ಜೂ.೨೪- ರಷ್ಯಾದ ಉತ್ತರ ಕಾಕಸಸ್ ಗಣರಾಜ್ಯವಾದ ಡಾಗೆಸ್ತಾನ್‌ನಲ್ಲಿ ಹಬ್ಬದ ಸಂಭ್ರಮದಲ್ಲಿದ್ದ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಅಧಿಕಾರಿಗಳು, ಚರ್ಚ್‌ಗಳು ಮತ್ತು ಸಿನಗಾಗ್‌ಗಳ ಮೇಲೆ ನಡೆದ ಮಾರಣಾಂತಿಕ ದಾಳಿಯಲ್ಲಿ ಕನಿಷ್ಠ ೧೫ ಪೊಲೀಸರು, ಪಾದ್ರಿ ಸೇರಿದಂತೆ ಅನೇಕ ಮಂದಿ ಬಲಿಯಾಗಿರುವ ಘಟನೆ ನಡೆದಿದೆ.
ಘಟನೆಯಲ್ಲಿ ೧೨ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಮೃತರಲ್ಲಿ ಕನಿಷ್ಠ ೧೫ ಪೊಲೀಸ್ ಅಧಿಕಾರಿಗಳು, ಒಬ್ಬ ಪಾದ್ರಿ ಮತ್ತು ಭದ್ರತಾ ಸಿಬ್ಬಂದಿ ಸೇರಿದ್ದಾರೆ. ದಾಳಿಕೋರರ ಪೈಕಿ ಆರು ಮಂದಿ ಮೃತಪಟ್ಟಿದ್ದು, ಇತರರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ದಾಳಿಕೋರರು ಯಾರು ಎನ್ನುವುದು ಸದ್ಯಕ್ಕೆ ತಿಳಿದು ಬಂದಿಲ್ಲ, ಅವರಿಗೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಷ್ಯಾ ದಾಳಿಯಲ್ಲಿ ಬೆಂಕಿ ಹೊತ್ತಿಕೊಂಡ ಕಾರುಗಳು ಮತ್ತು ಕಟ್ಟಡಗಳ ಮೇಲೆ ಬಂದೂಕುಧಾರಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಇದರ ಪರಿಣಾಮ ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.
ದಾಳಿಕೋರರು ಯಾರು ಎನ್ನುವುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಹಿಂದೆ ಡಾಗೆಸ್ತಾನ್ ಹಿಂದೆ ಇಸ್ಲಾಮಿಸ್ಟ್ ಉಗ್ರರ ದಾಳಿಯ ಕೈವಾಡವಿತ್ತು. ಈ ಬಾರಿಯೂ ಅವರ ಕೈವಾಡವಿರಬಹುದು ಎಂದು ಶಂಕಿಸಲಾಗಿದೆ
ದುಷ್ಕರ್ಮಿಗಳು ಎರಡು ಚರ್ಚ್‌ಗಳು ಮತ್ತು ಎರಡು ಸಿನಗಾಗ್‌ಗಳನ್ನು ಗುರಿಯಾಗಿಸಲಾಗಿದೆ. ಡಾಗೆಸ್ತಾನ್‌ನ ಅತಿದೊಡ್ಡ ನಗರವಾದ ಮಖಚ್ಕಲಾದಲ್ಲಿ ಆರ್ಥೊಡಾಕ್ಸ್ ಚರ್ಚ್ ಪಾದ್ರಿಯನ್ನು ಹತ್ಯೆ ಮಾಡಲಾಗಿದೆ
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ದೃಶ್ಯಾವಳಿಗಳು ತುರ್ತು ಸೇವಾ ವಾಹನಗಳ ಬೆಂಗಾವಲು ಘಟನಾ ಸ್ಥಳಕ್ಕೆ ಬರುವ ಮೊದಲು ಕಪ್ಪು ಬಟ್ಟೆಗಳನ್ನು ಧರಿಸಿದ ಜನರು ಪೊಲೀಸ್ ಕಾರುಗಳ ಮೇಲೆ ಗುಂಡು ಹಾರಿಸುವುದನ್ನು ತೋರಿಸಲಾಗಿದೆ.
ಡರ್ಬೆಂಟ್‌ನಲ್ಲಿ ಪುರಾತನ ಯಹೂದಿ ಸಮುದಾಯದ ನೆಲೆಯಾಗಿದೆ. ಬಂದೂಕುಧಾರಿಗಳು ಸಿನಗಾಗ್ ಮತ್ತು ಚರ್ಚ್ ಮೇಲೆ ದಾಳಿ ಮಾಡಿ ನಂತರ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಸೆರ್ಗೋಕಲ್ ಗ್ರಾಮದಲ್ಲಿ ಪೊಲೀಸ್ ವಾಹನದ ಮೇಲೆ ದಾಳಿ ನಡೆದಿದೆ.ದಾಳಿ ನಡೆಸಿದವರಲ್ಲಿ ಅವರ ಇಬ್ಬರು ಪುತ್ರರೂ ಇದ್ದಾರೆ ಎಂಬ ವರದಿಗಳ ನಂತರ ಮಖಚ್ಕಲಾ ಬಳಿಯ ಸೆರ್ಗೊಕಾಲಿನ್ಸ್ಕಿ ಜಿಲ್ಲೆಯ ಮುಖ್ಯಸ್ಥ ಮಾಗೊಮೆಡ್ ಒಮರೊವ್ ತಿಳಿಸಿದ್ದಾರೆ.
೨೦೦೭ ಮತ್ತು ೨೦೧೭ ರ ನಡುವೆ, ಕಾಕಸಸ್ ಎಮಿರೇಟ್ ಎಂದು ಕರೆಯಲ್ಪಡುವ ಜಿಹಾದಿಸ್ಟ್ ಸಂಘಟನೆ, ಮತ್ತು ನಂತರ ಕಾಕಸಸ್ ಇಸ್ಲಾಮಿಕ್ ಎಮಿರೇಟ್, ಡಾಗೆಸ್ತಾನ್ ಮತ್ತು ನೆರೆಯ ರಷ್ಯಾದ ಗಣರಾಜ್ಯಗಳಾದ ಚೆಚೆನ್ಯಾ, ಇಂಗುಶೆಟಿಯಾ ಮತ್ತು ಕಬಾರ್ಡಿನೋ-ಬಲ್ಕೇರಿಯಾದಲ್ಲಿ ದಾಳಿ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.