ಕಲ್ಬುರ್ಗಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ಕಲ್ಬುರ್ಗಿ, ಜೂ. ೨೪- ಕಲ್ಬುರ್ಗಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಸುದ್ಧಿ ತಿಳಿದ ತಕ್ಷಣವೇ ರಾಜ್ಯ ಕೈಗಾರಿಕಾ ಸಿಬ್ಬಂದಿ ಶ್ವಾನದಳ ಸ್ಳಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಆದರೆ ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.
ಇಂದು ಬೆಳಿಗ್ಗೆ ೭ ಗಂಟೆಗೆ ಸುಮಾರು ವಿಮಾನ ನಿಲ್ದಾಣ ಕಟ್ಟಡದಲ್ಲಿ ಬಾಂಬ್ ಇರಿಸಲಾಗಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ಚಿಲಕ ರಮೇಶ್ ಅವರಿಗೆ ಇಮೇಲ್ ಬಂದಿದೆ. ತಕ್ಷಣ ಪೊಲೀಸರಿಗೆ ನೀಡಿದರು.
ಬಾಂಬ್ ಬಂದ ಕರೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬಂದಿದ್ದ ಸಚಿವ ಕೃಷ್ಣಬೈರೇಗೌಡ ಹಾಗೂ ಇತರ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕೆಳಗೆ ಇಳಿಸದೆ ತಪಾಸಣೆ ನಡೆಸಲಾಯಿತು. ಆ ಬಳಿಕ ವಿಮಾನದಿಂದ ಕೆಳಗೆ ಇಳಿದರು. ಶ್ವಾನದಳ ಹೆಚ್ಚಿನ ಪೊಲೀಸರ ನಿಯೋಜನೆ ಬ್ಯಾಗ್‌ಗಳ ತಪಾಸಣೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ವಿಮಾನ ನಿಲ್ದಾಣಗಳಲ್ಲಿ ಮೂಲೆ ಮೂಲೆಗಳಲ್ಲೂ ತಪಾಸಣೆ ನಡೆಸಿದ ಬಳಿಕ ಯಾವುದೇ ವಸ್ತುಗಳು ಸ್ಫೋಟಕಗಳು ಕಂಡು ಬಂದಿಲ್ಲ. ಇದೊಂದು ಹುಸಿ ಬೆದರಿಕೆಯೆಂಬುದು ದೃಢಪಟ್ಟಿದೆ.