ಸೂಪರ್ 8 ಆಸೀಸ್ ಶುಭಾರಂಭ
ಆಂಟಿಗುವಾ.ಜೂ.೨೧- ವೇಗಿ ಪ್ಯಾಟ್ ಕಮಿನ್ಸ್ ಅವರ ಹ್ಯಾಟ್ರಿಕ್ ವಿಕೆಟ್ ಹಾಗೂ ಡೇವಿಡ್ ವರ್ನಾರ್ ಅವರ ಅರ್ಧ ಶತಕದ ನೆರವಿನಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ಧ ಡಕ್ವರ್ಥ್‌ಲೂಯಿಸ್ ನಿಯಮದಡಿ ೨೮ ರನ್‌ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ಸೂಪರ್ ೮ರಲ್ಲಿ ಶುಭಾರಂಭ ಪಡೆದಿದೆ.
ಇಲ್ಲಿನ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಮಳೆಯ ಕಣ್ಣಾಮುಚ್ಚಾಲೆಯಲ್ಲಿ ನಡೆದ ಟಿ೨೦ ವಿಶ್ವಕಪ್ ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ೨೦ ಓವರ್‌ಗಳಲ್ಲಿ
೮ ವಿಕೆಟ್ ನಷ್ಟಕ್ಕೆ ೧೪೦ ರನ್ ಕಲೆ ಹಾಕಿತು. ಆಸ್ಟ್ರೇಲಿಯಾ ೧೧.೨ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೧೦೦ ರನ್ ಪೇರಿಸಿತು.
ಬಾಂಗ್ಲಾದೇಶ ತಂಡಕ್ಕೆ ಆಸೀಸ್ ಸ್ಪಿನ್ ದಾಳಿಗೆ ತತ್ತರಿಸಿತು. ತನಜಿದ್ ಹಸನ್ ೦, ಲಿಟನ್ ದಾಸ್ ೧೬, ನಾಯಕ ನಜ್ಮುಲ್ ೪೧, ರಶೀದ್ ಹೊಸೇನ್ ೨,
ತೌಹಿದ್ ಹೃದಯ್ ೪೦,ಶಕೀಬ್ ಅಲ್ ಹಸನ್ ೮ ರನ್ ಗಳಿಸಿದರು. ತೌಹಿದ್ ಹೃದಯ್ (೪೦ ರನ್), ಮೊಹ್ಮದ್‌ಹುಲ್ಲಾ ೨, ಮೆಹದಿ ಹಸನ್ (೦ ರನ್)
ಅವರುಗಳ ವಿಕೆಟ್ ಪಡೆದು ವೇಗಿ ಕಮಿನ್ಸ್ ಹ್ಯಾಟ್ರಿಕ್ ವಿಕೆಟ್ ಪಡೆದು ಸಾಧನೆ ಮಾಡಿದರು.
ಆಸೀಸ್ ಪರ ಕಮಿನ್ಸ್ ೨೯ಕ್ಕೆ೩, ಜಂಪಾ ೨೪ಕ್ಕೆ ೨, ಸ್ಟಾರ್ಕ್, ಸ್ಟೋಯ್ನಿಸ್ ಹಾಗೂ ಮ್ಯಾಕ್ಸ್‌ವೆಲ್ ತಲಾ ೧ ವಿಕೆಟ್ ಪಡೆದರು.
ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ( ಅಜೇಯ ೫೩) ಮತ್ತು ಟ್ರಾವಿಸ್ ಹೆಡ್ (೩೧ ರನ್) ಮೊದಲ ವಿಕೆಟ್‌ಗೆ ೬೫ ರನ್‌ಗಳ ಭರ್ಜರಿ
ಆರಂಭ ನೀಡಿದರು.
ಈ ವೇಳೆ ದಾಳಿಗಿಳಿದ ರಿಷಾದ್ ಹೊಸೇನ್ ಟ್ರಾವಿಸ್ ಹೆಡ್ ಹಾಗೂ ನಾಯಕ ಮಿಚೆಲ್ ಮಾರ್ಷ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.
ಬಿರುಸಿನ ಬ್ಯಾಟಿಂಗ್ ಮಾಡಿದ ವಾರ್ನರ್ ೩೪ ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಮ್ಯಾಕ್ಸ್‌ವೆಲ್ ಅಜೇಯ ೧೪ ರನ್ ಗಳಿಸಿದ್ದಾಗ ಜೋರಾಗಿ ಮಳೆ ಸುರಿಯಿತು. ನಂತರ ಮಳೆ ನಿಲ್ಲದ ಕಾರಣ ಪಂದ್ಯಕ್ಕೆ ಡಕ್ವರ್ಥ್‌ಲೂಯಿಸ್ ನಿಯಮ ಅಳವಡಿಸಿದಾಗ ಆಸ್ಟ್ರೇಲಿಯಾ ೨೮ ರನ್ ಮುಂದಿತ್ತು. ಆಸ್ಟ್ರೇಲಿಯಾ
ಕೊನೆಯಲ್ಲಿ ೧೪ ಎಸೆತಗಳಲ್ಲಿ ೩೦ ರನ್ ಹೊಡೆದಿದ್ದು ಗೆಲುವಿಗೆ ಪ್ರಮುಖ ಕಾರಣವಾಯಿತು.
ನಾಳೆ ಬಾಂಗ್ಲಾದೇಶ ತಂಡ ಟೀಮ್ ಇಂಡಿಯಾವನ್ನು ಎದುರಿಸಲಿದೆ.