ಜನರಿಗೆ ಹೊಸ ತಂತ್ರ ಜ್ಞಾನ ವಿಸ್ತರಣೆ
ನ್ಯೂಯಾರ್ಕ್, ಸೆ.೨೬- ಹೊಸ ಹೊಸ ತಂತ್ರಜ್ಞಾನ ಪ್ರಪಂಚದಾದ್ಯಂತದ ಜನರಿಗೆ ಅವಕಾಶಗಳನ್ನು ವಿಸ್ತರಿಸಿದೆ ಎಂದು ಗೂಗಲ್ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚ್ಚೈ ಹೇಳಿದ್ದಾರೆ.
ಜೊತೆಗೆ “ತಂತ್ರಜ್ಞಾನ ಜೀವನವನ್ನು ಅರ್ಥಪೂರ್ಣ ರೀತಿಯಲ್ಲಿ ಸುಧಾರಿಸಿದೆ ಎನ್ನುವ ಕುರಿತು ಹಲವು ಉದಾಹರಣೆ ಸಮೇತ ಅವರು ಮಾಹಿತಿ ನೀಡಿದ್ದಾರೆ
೭೯ ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದ ಅವರು ತಂತ್ರಜ್ಞಾನ ಪ್ರಗತಿಯ ಅಡಿಪಾಯವನ್ನು ಸಕ್ರಿಯಗೊಳಿಸುತ್ತದೆ.ಇಂಟರ್ನೆಟ್ ಮತ್ತು ಮೊಬೈಲ್ ಸಾಧನಗಳಂತೆಯೇ ಪ್ರಗತಿಯನ್ನು ವೇಗಗೊಳಿಸಲು ಕೃತಕ ಬುದ್ದಿಮತ್ತೆ-ಎಐ ನೀಡಲು ಸಿದ್ಧವಾಗಿದೆ ಎಂದು ಹೇಳಿದರು.
ಚೆನ್ನೈನಲ್ಲಿ ಬೆಳೆದಾಗ, ತನಗೆ ಮತ್ತು ಕುಟುಂಬಕ್ಕೆ ಆಗ ಪ್ರತಿಯೊಂದು ತಂತ್ರಜ್ಞಾನ ಗಂಟೆಗಳ ಪ್ರಯಾಣ ಉಳಿಸಿತು ಮತ್ತು ಪರಸ್ಪರ ಹೆಚ್ಚು ಸಮಯ ಕಳೆಯಲು ಅನುವು ಮಾಡಿಕೊಟ್ಟಿತು ಎಂದು ಹೇಳಿದ್ದಾರೆ
“ಭಾರತದ ಚೆನ್ನೈನಲ್ಲಿ ನನ್ನ ಕುಟುಂಬದೊಂದಿಗೆ ಬೆಳೆದು, ಪ್ರತಿ ಹೊಸ ತಂತ್ರಜ್ಞಾನದ ಆಗಮನ ಜೀವನವನ್ನು ಅರ್ಥಪೂರ್ಣ ರೀತಿಯಲ್ಲಿ ಸುಧಾರಿಸಿದೆ. ಮೊದಲ ರೋಟರಿ ಫೊ?ನ್ ಪರೀಕ್ಷಾ ಫಲಿತಾಂಶಗಳನ್ನು ಪಡೆಯಲು ಆಸ್ಪತ್ರೆಗೆ ಪ್ರಯಾಣದ ಗಂಟೆಗಳ ಸಮಯ ಉಳಿಸಿದೆ. ಮೊದಲ ರೆಫ್ರಿಜರೇಟರ್ ಕುಟುಂಬವಾಗಿ ಕಳೆಯಲು ಹೆಚ್ಚಿನ ಸಮಯವನ್ನು ನೀಡಿತು ಎಂದು ಹಳೆಯ ದಿನಗಳನ್ನು ನೆನೆಪು ಮಾಡಿಕೊಂಡಿದ್ದಾರೆ
ತಮ್ಮ ಜೀವನವನ್ನು ಹೆಚ್ಚು ಬದಲಿಸಿದ ತಂತ್ರಜ್ಞಾನವೆಂದರೆ ಕಂಪ್ಯೂಟರ್ ಎಂದು ಹೇಳಿದ ಅವರು ಅಮೇರಿಕದಲ್ಲಿ ಪದವಿಗೆ ಸೇರ್ಪಡೆಯಾದಾಗ ಯಾವಾಗ ಬೇಕಾದರೂ ಬಳಸಬಹುದಾದ ಯಂತ್ರಗಳಿಂದ ತುಂಬಿದ ಲ್ಯಾಬ್‌ಗಳು ಇದ್ದವು – ಅದು ಮನಸ್ಸಿಗೆ ಮುದ ನೀಡಿತು. ಕಂಪ್ಯೂಟಿಂಗ್‌ಗೆ ಪ್ರವೇಶ ಹೆಚ್ಚಿನ ಜನರಿಗೆ ತಂತ್ರಜ್ಞಾನ ತರಬಹುದಾದ ವೃತ್ತಿಜೀವನವನ್ನು ಮುಂದುವರಿಸಲು ಪ್ರೇರೇಪಿಸಿದೆ ಎಂದಿದ್ದಾರೆ.
ಪ್ರಪಂಚದ ಮಾಹಿತಿ ಸಂಘಟಿಸುವುದು ಮತ್ತು ಅದನ್ನು ಸಾರ್ವತ್ರಿಕವಾಗಿ ಪ್ರವೇಶಿಸಬಹುದಾದ ಮತ್ತು ಉಪಯುಕ್ತವಾಗಿಸಲು ಕಂಪ್ಯೂಟರ್ ಸಹಕಾರಿಯಾಗಿದೆ ಎಂದು ಅವರು ಮಾಹಿತಿ ಹಂಚಕೊಂಡಿದ್ದಾರೆ