ಸ್ವಾಮಿನಾರಾಯಣ ದೇವಾಲಯ ಧ್ವಂಸ ಹಿಂದೂ ವಿರೋಧಿ ಕಾರಣ
ಕ್ಯಾಲಿಪೋರ್ನಿಯಾ,ಸೆ.೨೬- ಅಮೆರಿಕಾದ ಕ್ಯಾಲಿಫೋರ್ನಿಯಾದ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರವನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದ್ದು ‘ಹಿಂದೂ ವಿರೋಧಿ’ ಕಾರಣವೇ ಈ ರೀತಿ ಘಟನೆಗೆ ಕಾರಣ ಎನ್ನುವ ಸಂಗತಿ ಬಯಲಾಗಿದೆ.
ನ್ಯೂಯಾರ್ಕ್‌ನಲ್ಲಿ ಬಿಎಪಿಎಸ್ ನಾರಾಯಣಸ್ವಾಮಿ ದೇವಾಲಯವನ್ನು ಧ್ವಂಸ ಮಾಡಿರುವ ಘಟನೆ ಬೆನ್ನಲ್ಲೇ ಕಳೆದ ೧೦ ದಿನಗಳ ಅಂತರದಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಮತ್ತೆ ದೇವಾಲಯ ಧ್ವಂಸ ಮಾಡಿದ್ದು ಭಾರತೀಯ ಸಮುದಾಯದ ಆಸ್ತಿಕರಲ್ಲಿ ಆತಂಕ ಹೆಚ್ಚು ಮಾಡಿದೆ.
ದೇವಾಲಯ ಧ್ವಂಸ ಮಾಡಿರುವ ಘಟನೆಗೆ ಭಾರತೀಯ ದೂತಾವಾಸ ತೀವ್ರವಾಗಿ ಖಂಡಿಸಿದ್ದು ಈ ರೀತಿಯ ಘಟನೆಗಳನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದೆ.
“ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರವನ್ನು ಅಪವಿತ್ರಗೊಳಿಸಿದ ೧೦ ದಿನಗಳ ನಂತರ, ಕ್ಯಾಲಿಫೊನಿಯಾದ ಸ್ಯಾಕ್ರಮೆಂಟೊದಲ್ಲಿರುವ ಮಂದಿರವನ್ನು ಅಪವಿತ್ರಗೊಳಿಸಲಾಗಿದೆ ಇದು ದ್ವೇಷಪೂರಿತ ಸಂದೇಶಗಳಿಂದ ಕೂಡಿದೆ. ಈ ರೀತಿಯ ಘಟನೆ ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ ಎಂದಿದ್ದಾರೆ.
ದ್ವೇಷದಿಂದ ಕೂಡಿದ ಈ ರೀತಿಯ ಘಟನೆಗಳನ್ನು ತೀವ್ರವಾಗಿ ಖಂಡಿಸಲಾಗುವುದು.ಹೃದಯದಲ್ಲಿ ದ್ವೇಷವನ್ನು ಹೊಂದಿರುವವರು ಆಲೋಚನೆಗಳು ಬದಲಾಗಲಿ ಎಂದು ಹೇಳಿದೆ.
ಅಮೆರಿಕಾ ಹೌಸ್‌ನಲ್ಲಿ ಸ್ಯಾಕ್ರಮೆಂಟಾ ಕೌಂಟಿ ಪ್ರತಿನಿಧಿಸುವ ಅಮಿ ಬೆರಾ ಅವರು ಘಟನೆಯನ್ನು ಖಂಡಿಸಿದ್ದು ಮತ್ತು ಅಸಹಿಷ್ಣುತೆಯ ವಿರುದ್ಧ ನಿಲ್ಲುವಂತೆ ಜನರಿಗೆ ಕರೆ ನೀಡಿದ್ದಾರೆ.
ಧಾರ್ಮಿಕ ಮತಾಂಧತೆ ಮತ್ತು ದ್ವೇಷಕ್ಕೆ ಸ್ಥಳವಿಲ್ಲ. ಸಮುದಾಯದಲ್ಲಿ ನಡೆಯುತ್ತಿರುವ ವಿಧ್ವಂಸಕ ಕೃತ್ಯವನ್ನು ಬಲವಾಗಿ ಖಂಡಿಸುತ್ತೇನೆ. ನಾವೆಲ್ಲರೂ ಅಸಹಿಷ್ಣುತೆಯ ವಿರುದ್ಧ ನಿಲ್ಲಬೇಕು ಮತ್ತು ನಮ್ಮ ಸಮುದಾಯದ ಪ್ರತಿಯೊಬ್ಬರೂ ನಂಬಿಕೆಯನ್ನು ಲೆಕ್ಕಿಸದೆ ಸುರಕ್ಷಿತವಾಗಿ ಮತ್ತು ಗೌರವಾನ್ವಿತರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ನಡುವೆ ಹಿಂದೂ ಅಮೆರಿಕನ್ ಫೌಂಡೇಶನ್ ಸೆನೆಟ್ ನ್ಯಾಯಾಂಗ ಸಮಿತಿಗೆ “ಹಿಂದೂ ವಿರೋಧಿ ದ್ವೇಷದ ಇತಿಹಾಸ ಮತ್ತು ಆತಂಕಕಾರಿ ಏರಿಕೆ, ವಿಶೇಷವಾಗಿ” ಹಿಂದೂ ಪೂಜಾ ಸ್ಥಳಗಳ ವಿರುದ್ಧ ನಡೆಯುತ್ತಿರುವ ಘಟನೆಯನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ.