ಸೆಂಥಿಲ್ ಬಾಲಾಜಿಗೆ ಸುಪ್ರೀಂ ಜಾಮೀನು
ನವದೆಹಲಿ,ಸೆ.೨೬-ಉದ್ಯೋಗಕ್ಕಾಗಿ ನಗದು ಹಗರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಸಚಿವ ಸೆಂಥಿಲ್ ಬಾಲಾಜಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ
ವಾರಕ್ಕೆ ಎರಡು ಬಾರಿ ಪೊಲೀಸ್ ಠಾಣೆಗೆ ಹಾಜರಾಗಬೇಕು, ಸಾಕ್ಷ್ಯ ಅಥವಾ ಸಾಕ್ಷಿಗಳನ್ನು ನಾಶ ಮಾಡಬಾರದು ಮತ್ತು ಪಾಸ್‌ಪೊ?ರ್ಟ್ ಅನ್ನು ಒಪ್ಪಿಸಬೇಕು ಎನ್ನುವ ಷರತ್ತಿನೊಂದಿಗೆ ಜಾಮೀನು ನೀಡಲಾಗಿದೆ
ಹಿಂದಿನ ಎಐಎಡಿಎಂಕೆ ಆಡಳಿತದಲ್ಲಿ ಸಾರಿಗೆ ಸಚಿವರಾಗಿದ್ದಾಗ ಸೇಂಥಿಲ್ ಬಾಲಾಜಿ ಉದ್ಯೋಗಕ್ಕಾಗಿ ನಗದು ಹಗರಣ ’ಹಗರಣ’ಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ೨೦೨೩ರ ಜೂನ್ ೧೪, ರಂದು ಬಾಲಾಜಿ ಅವರನ್ನು ಬಂಧಿಸಿತ್ತು.
ಸೆಂಥಿಲ್ ಬಾಲಾಜಿ ಅವರು ೨೦೧೧-೨೦೧೬ ರ ಹಿಂದಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಎಐಎಡಿಎಂಕೆ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದಾಗ ಹಣ ಲೇವಾದೇವಿ ಆರೋಪ ಹೊತ್ತಿದ್ದರು
ಸರ್ವೋಚ್ಚ ನ್ಯಾಯಾಲಯ ಜಾಮೀನು ನೀಡಿದ ನಂತರ ಮಾತನಾಡಿ ಸೆಂಥಿಲ್ ಬಾಲಾಜಿ ಪರ ವಕೀಲ ಎನ್‌ಆರ್ ಎಲಾಂಗೋ, “ದೀರ್ಘ ವಿಳಂಬ ಪೂರ್ವಭಾವಿ ಅಪರಾಧ ಮತ್ತು ಪಿಎಂಎಲ್‌ಎ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ ಎಂದಿದ್ದಾರೆ
ಬಂಧನವಾಗಿದ್ದ ಗಂಟೆಗಳ ವಿಚಾರಣೆಯ ಎದೆ ನೋವಿನ ನೆಪವೊಡ್ಡಿ ಚೆನ್ನೈ ಆಸ್ಪತ್ರೆಗೆ ದಾಖಲಾಗಿದ್ದರು ಆಸ್ಪತ್ರೆಯಲ್ಲಿ ಆಂಜಿಯೋಗ್ರಾಮ್‌ಗೆ ಒಳಗಾದ ಕೆಲವೇ ಗಂಟೆಗಳ ನಂತರ ಅವರು ಎದೆನೋವಿನ ಬಗ್ಗೆ ದೂರು ನೀಡಿದ್ದರು ನಂತರ ವೈದ್ಯರು ಪರಿಧಮನಿಯ ಬೈಪಾಸ್ ಶಸ್ತ್ರಚಿಕಿತ್ಸೆಗೆ “ಆರಂಭದಲ್ಲಿ” ಸಲಹೆ ನೀಡಿದ್ದರು