ಅಧಿವೇಶನ ಬಳಿಕ ೧೮ ಶಾಸಕರು ಪವಾರ್ ಬಣಕ್ಕೆ ವಾಪಸ್
ಮುಂಬೈ,ಜೂ.೧೮-ಮುಂಬರುವ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದ ನಂತರ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಆಡಳಿತಾರೂಢ ಎನ್‌ಸಿಪಿಯ ೧೮ ರಿಂದ ೧೯ ಶಾಸಕರು ಶರದ್ ಪವಾರ್ ಬಣದ ಎನ್ ಸಿಪಿಗೆ ಸೇರಲಿದ್ದಾರೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎಸ್‌ಪಿ) ನಾಯಕ ರೋಹಿತ್ ಪವಾರ್ ಹೇಳಿದ್ದಾರೆ.
೨೦೨೩ರ ಜುಲೈ ತಿಂಗಳಲ್ಲಿ ಎನ್ ಸಿಪಿ ಬಣ ವಿಭಜನೆಯಾದ ನಂತರ ಪಕ್ಷದ ಸಂಸ್ಥಾಪಕ ಶರದ್ ಪವಾರ್ ಮತ್ತು ಇತರ ಹಿರಿಯ ನಾಯಕರ ವಿರುದ್ಧ ಎಂದಿಗೂ ಕೆಟ್ಟದಾಗಿ ಮಾತನಾಡದ ಹಲವು ಎನ್‌ಸಿಪಿ ಶಾಸಕರು . ಶರದ್ ಪವಾರ್ ಬಣ ಸೇರಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ
ಸುದ್ದಿಗಾರೊಂದಿಗೆ ಮಾತನಾಡಿದ ಅವರು ಮಹಾರಾಷ್ಟ್ರದ ಅಧಿವೇಶನಕ್ಕೆ ಹಾಜರಾಗಬೇಕು ಮತ್ತು ತಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿ ಹಣವನ್ನು ಪಡೆಯಬೇಕು. ಆದ್ದರಿಂದ ಅವರು ಅಧಿವೇಶನ ಮುಗಿಯುವವರೆಗೆ ಕಾಯುತ್ತಾರೆ”, ಆ ಮೇಲೆ ತಮ್ಮ ಬಣಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ
ಪವಾರ್ ಸಾಹೇಬ್ ಅವರೊಂದಿಗೆ ೧೮ ರಿಂದ ೧೯ ಶಾಸಕರು ಸಂಪರ್ಕದಲ್ಲಿದ್ದಾರೆ” ಮತ್ತು ಅವರು ಮುಂಗಾರು ಅಧಿವೇಶನದ ನಂತರ ನಮ್ಮ ಬಣಕ್ಕೆ ಬರುತ್ತಾರೆ ಎಂದು ತಿಳಿಸಿದ್ದಾರೆ
ಶರದ್ ಪವಾರ್ ಮತ್ತು ಇತರ ಎನ್‌ಸಿಪಿ ನಾಯಕರು ಯಾರನ್ನು ಮರಳಿ ಪಕ್ಷಕ್ಕೆ ತೆಗೆದುಕೊಳ್ಳಬೇಕು ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ .೨೦೧೯ ರ ಚುನಾವಣೆಯಲ್ಲಿ ಅವಿಭಜಿತ ಎನ್‌ಸಿಪಿ ೫೪ ವಿಧಾನಸಭಾ ಸ್ಥಾನಗಳನ್ನು ಗೆದ್ದಿತ್ತು. ಜುಲೈ ೨೦೨೩ ರಲ್ಲಿ ಪಕ್ಷ ವಿಭಜನೆಯಾದಾಗ, ಅಜಿತ್ ಪವಾರ್ ನೇತೃತ್ವದ ಬಣ ಸುಮಾರು ೪೦ ಶಾಸಕರ ಬೆಂಬಲ ಇದೆ ಎಂದು ಹೇಳಿಕೊಂಡಿತ್ತು.
ವಿಧಾನಮಂಡಲದ ಮುಂಗಾರು ಅಧಿವೇಶನ ಜೂನ್ ೨೭ ರಂದು ಆರಂಭವಾಗಿ ಜುಲೈ ೧೨ ರಂದು ಕೊನೆಗೊಳ್ಳಲಿದೆ. ಅಕ್ಟೋಬರ್‍ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ನಡೆಯಲಿದೆ