ರೈಲು ಅಪಘಾತ: ತನಿಖೆಗೆ ಆದೇಶ
ಕೊಲ್ಕತ್ತಾ, ಜೂ,೧೮- ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಬಳಿ ಸರಕು ಸಾಗಾಣೆ ರೈಲಿಗೆ ಡಿಕ್ಕಿ ಹೊಡೆದು ಒಂಬತ್ತು ಜನರು ಸಾವನ್ನಪ್ಪಿ ಮತ್ತು ಹಲವಾರು ಮಂದಿ ಗಾಯಗೊಂಡ ಪ್ರಕರಣವನ್ನು ರೈಲ್ವೆ ಸುರಕ್ಷಾತಾ ಆಯುಕ್ತರಿಂದ ತನಿಖೆಗೆ ಆದೇಶಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಾತನಾಡಿದ ಅವರು ವರದಿ ಬಂದ ನಂತರ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ನಡುವೆ ಕಾಂಚನಾಜುಂಗಾ ರೈಲು ಅಪಘಾತ ಪ್ರಕರಣಕ್ಕೆ ಎಕ್ಸ್‌ಪ್ರೆಸ್‌ನ ರೈಲಿನ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರರವರ ಸ್ಥಳಗಳಿಗೆ ತಲುಪಿಸುವ ಕೆಲಸ ಮಾಡಲಾಗಿದೆ ಎಂದು ಪೂರ್ವ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಬಂಗಾಳದಲ್ಲಿ ಸೋಮವಾರ ಬೆಳಿಗೆ ಮಳೆ ಬಂದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯ ವಿಳಂಬವಾಗಿತ್ತು. ಜಲ್ಪೈಗುರಿ ನಿಲ್ದಾಣದಿಂದ ಸುಮಾರು ೧೦ ಕಿಲೋಮೀಟರ್ ದೂರದಲ್ಲಿರುವ ರಂಗಪಾಣಿಯಲ್ಲಿ ಘರ್ಷಣೆಯಲ್ಲಿ ರೈಲಿನ ಹಿಂಭಾಗದಲ್ಲಿ ಕನಿಷ್ಠ ನಾಲ್ಕು ಬೋಗಿಗಳು ತೀವ್ರವಾಗಿ ಹಾನಿಗೊಳಗಾಗಿದ್ದು ಅವುಗಳನ್ನು ತೆರವು ಮಾಡಲಾಗಿದೆ ಎಂದಿದ್ದಾರೆ.ಕೊಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಪ್ರತಿಕ್ರಿಯೆ ನೀಡಿ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಸ್ನೇಹಸಿಸ್ ಚಕ್ರವರ್ತಿ ಮತ್ತು ಸೀಲ್ದಾ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ದೀಪಕ್ ನಿಗಮ್ ಅವರು ಪ್ರಯಾಣಿಕರನ್ನು ಅವರ ಮನೆಗಳಿಗೆ ತಲುಪುಸಲು ಎಲ್ಲಾ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ತ್ರಿಪುರಾ ರಾಜಧಾನಿ ಅಗರ್ತಲಾದಿಂದ ೧೩೧೭೪ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್, ಸಂಜೆ ೭.೨೦ ಕ್ಕೆ ಸೀಲ್ದಾಹ್ ತಲುಪಬೇಕಾಗಿತ್ತು, ನಿಗದಿತ ಸಮಯಕ್ಕಿಂತ ಎಂಟು ಗಂಟೆಗಳ ಹಿಂದೆ ೩.೧೬ ಕ್ಕೆ ತನ್ನ ಗಮ್ಯಸ್ಥಾನ ತಲುಪಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಪ್ರಯಾಣಿಕರಿಗೆ ಮಾಲ್ಡಾ ಪಟ್ಟಣ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಸೀಲ್ದಾದಲ್ಲಿ ವೈದ್ಯಕೀಯ ಸೌಲಭ್ಯಗಳು, ಆಹಾರ ಮತ್ತು ನೀರನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.