ಅಮೆರಿಕದಲ್ಲಿ ಭಾರತೀಯ ವೈದ್ಯರೇ ಮೇಲುಗೈ
ಮುಂಬೈ,ಜೂ.೧೫- ಅಮೆರಿಕಾದಲ್ಲಿ ಕೆಲಸ ಮಾಡುವ ವಲಸೆ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ಮತ್ತು ನೋಂದಾಯಿತ ದಾದಿಯರ ಪೈಕಿ ಭಾರತ ಎರಡನೇ ಅತಿದೊಡ್ಡ ದೇಶವಾಗಿದೆ.
ಇದರ ಜೊತೆಗೆ ಗೃಹ ಆರೋಗ್ಯ ಸಹಾಯಕರು ಮತ್ತು ಶುಶ್ರೂಷಾ ಸಹಾಯಕರು ಸೇರಿದಂತೆ ಅಮೆರಿಕಾದಲ್ಲಿ ಕೆಲಸ ಮಾಡುವ ವಲಸೆ ಆರೋಗ್ಯ ವೃತ್ತಿಪರರ ಒಟ್ಟು ಸಂಖ್ಯೆಯ ಪ್ರಕಾರ, ಫಿಲಿಪೈನ್ಸ್ ಮತ್ತು ಮೆಕ್ಸಿಕೋ ನಂತರ ಭಾರತ ಮೂರನೇ ಸ್ಥಾನಕ್ಕೆ ಇಳಿದಿದೆ.
ಅಮೆರಿಕಾದಲ್ಲಿರುವ ೯.೯ ಲಕ್ಷ ವೈದ್ಯರಲ್ಲಿ, ಸುಮಾರು ಶೇಕಡಾ ೨೬.೫ ರಷ್ಟು ಅಥವಾ ೨.೬ ಲಕ್ಷ ವಲಸಿಗರು. ಇತರ ದೇಶಗಳಿಗಿಂತ ಭಾರತೀಯರು ಹೆಚ್ಚಿನ ಮಂದಿ ವೈದ್ಯರಾಗಿ ಕೆಲಸ ಮಾಡಲು ಅಮೇರಿಕಾಕ್ಕೆ ತೆರಳಿದ್ದಾರೆ ಎಂದು ಅದ್ಯಯನದಲ್ಲಿ ಈ ವಿಷಯ ತಿಳಿಸಿದೆ.
ಅಮೆರಿಕಾದಲ್ಲಿ ೫೯,೦೦೦ ಭಾರತೀಯ ವೈದ್ಯರಿದ್ದಾರೆ ಎಲ್ಲಾ ವಲಸೆ ವೈದ್ಯರಲ್ಲಿ ಐವರಲ್ಲಿ ಒಬ್ಬರು ಅಥವಾ ಶೇಕಡಾ ೨೨ ರಷ್ಟು ಭಾರತೀಯರು ವೈದ್ಯರು ಇದ್ದಾರೆ.
ಚೀನಾ ಮತ್ತು ಹಾಂಗ್ ಕಾಂಗ್‌ನಲ್ಲಿ ಜನಿಸಿದ ೧೬,೦೦೦ ವೈದ್ಯರು ಅಥವಾ ವಲಸಿಗ ವೈದ್ಯರ ಜನಸಂಖ್ಯೆಯ ಶೇಕಡಾ ೬ ರಷ್ಟು ಪ್ರಸ್ತುತ ಅಮೇರಿಕಾದಲ್ಲಿ ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಪಾಕಿಸ್ತಾನದ ೧೩,೦೦೦ ವಲಸಿಗ ವೈದ್ಯರೊಂದಿಗೆ ಅಗ್ರ ಮೂರು ಸ್ಥಾನಗಳನ್ನು ಹೊಂದಿದೆ
ವಲಸಿಗ ವೈದ್ಯರ ಜನಸಂಖ್ಯೆಗೆ ಶೇಕಡಾ ೫ ರಷ್ಟಿದೆ ನ್ಯೂಜೆರ್ಸಿ, ಫ್ಲೋರಿಡಾ ಮತ್ತು ನ್ಯೂಯಾರ್ಕ್ ವಲಸಿಗ ವೈದ್ಯರಿಗೆ ಅಮೆರಿಕನ್ ರಾಜ್ಯಗಳ ಪ್ರಮುಖ ತಾಣಗಳಾಗಿವೆ.
ಡಿಜಿಟಲ್ ಹಣಕಾಸು,ರವಾನೆ ಸೇವೆಗಳನ್ನು ಒದಗಿಸುವ ಅಮೇರಿಕಾ ಆಧಾರಿತ ಕಂಪನಿಯಾದ ರೆಮಿಲ್ಟಿ, ವಲಸೆ ನೀತಿ ಸಂಸ್ಥೆ ಮತ್ತು ಅಮೆರಿಕಾದ ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್‌ನ ದತ್ತಾಂಶದ ವಿಶ್ಲೇಷಣೆಯ ಆಧಾರದ ಮೇಲೆ ಇತ್ತೀಚೆಗೆ ತನ್ನ “ವಲಸಿಗರ ಆರೋಗ್ಯ ಸೂಚ್ಯಂಕ” ಬಿಡುಗಡೆ ಮಾಡಿದೆ.
೩೪.೧ ಲಕ್ಷ ಸಕ್ರಿಯವಾಗಿ ಉದ್ಯೋಗದಲ್ಲಿರುವ ನೋಂದಾಯಿತ ನರ್ಸ್‌ಗಳಲ್ಲಿ ೫.೪ ಲಕ್ಷ ಅಥವಾ ಸುಮಾರು ಶೇಡಕಾ ೧೬ ರಷ್ಟು ವಲಸಿಗರು ಎಂದು ಡೇಟಾ ತೋರಿಸುತ್ತದೆ. ಗಮನಾರ್ಹ ಸಂಖ್ಯೆ – ೧.೪ ಲಕ್ಷ ಫಿಲಿಪಿನೋ ನೋಂದಾಯಿತ ದಾದಿಯರು – ಪ್ರಸ್ತುತ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ,
ಅಂದರೆ ಶೇಕಡಾ ೨೬ ರಷ್ಟು ವಲಸೆ ನೋಂದಾಯಿತ ದಾದಿಯರು ಫಿಲಿಪೈನ್ಸ್‌ನಲ್ಲಿ ಜನಿಸಿದರು. ಭಾರತೀಯರು ವಲಸಿಗ ನೋಂದಾಯಿತ ನರ್ಸ್ ವರ್ಕ್‌ಫೊರ್ಸ್‌ನಲ್ಲಿ ೩೨,೦೦೦, ಅಥವಾ ಶೇಕಡಾ ೬ ರಷ್ಟು ಮಂದಿ ಇದ್ದಾರೆ ಎಂದು ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ.