ಕುವೈತ್ ದುರಂತ:ಕೊಚ್ಚಿಗೆ ಬಂದ ೩೧ ಮೃತದೇಹ
ನವದೆಹಲಿ,ಜೂ.೧೪- ಕಳೆದ ಎರಡು ದಿನಗಳ ಹಿಂದೆ ಕೊಲ್ಲಿ ರಾಷ್ಟ್ರ ಕುವೈತ್‌ನಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಮೃತಪಟ್ಟ ೪೫ ಭಾರತೀಯರ ಮೃತದೇಹಗಳ ಪೈಕಿ ೩೧ ಮೃತದೇಹಗಳನ್ನು ಹೊತ್ತ ವಾಯುಸೇನೆಯ ವಿಶೇಷ ವಿಮಾನ ಕುವೈತ್‌ನಿಂದ ಕೊಚ್ಚಿಗೆ ಆಗಮಿಸಿವೆ.ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೃತಕುಟುಂಬಗಳ ಸ್ಥಳಗಳಿಗೆ ರವಾನೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಏರ್ನಾಕುಲಂ ವಲಯದ ಡಿಐಜಿ ಪುಟ್ಟ ವಿಮಾಲಾದಿತ್ಯ ಹೇಳಿದ್ದಾರೆ.
೪೫ ಭಾರತೀಯರ ಮೃತದೇಹಗಳಲ್ಲಿ ಕೇರಳ ಮತ್ತು ತಮಿಳುನಾಡು, ಕರ್ನಾಟಕ ಸೇರಿದಂತೆ ಆಯಾ ರಾಜ್ಯಗಳಿಗೆ ರವಾನಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ, ಕುವೈತ್‌ನ ವಸತಿ ಕಟ್ಟದಲ್ಲಿದ್ದ ೧೭೬ ಭಾರತೀಯ ಕಾರ್ಮಿಕರಲ್ಲಿ ೪೫ ಮಂದಿ ಸಾವನ್ನಪ್ಪಿದ್ದಾರೆ ಮತ್ತು ೩೩ ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿ ವರ್ದನ್ ಸಿಂಗ್ ಅವರು ಕುವೈತ್‌ನಲ್ಲಿ ಗಾಯಗೊಂಡ ಭಾರತೀಯರಿಗೆ ಚಿಕಿತ್ಸೆ ಕೊಡಿಸುವ ಕೆಲಸದಲ್ಲಿ ನಿರತರಾಗುವ ಜೊತೆಗೆ ಮೃತಪಟ್ಟ ಭಾರತೀಯರ ಶವದೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ೪೫ ಭಾರತೀಯರ ಮೃತದೇಹಗಳನ್ನು ಹೊತ್ತ ವಿಶೇಷ ಐಎಎಫ್ ವಿಮಾನ ಕೊಚ್ಚಿಗೆ ಟೇಕಾಫ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ೪೫ ಭಾರತೀಯರ ಮೃತದೇಹಗಳನ್ನು ಹೊತ್ತ ವಿಶೇಷ ವಿಮಾನ ಕೊಚ್ಚಿಗೆ ಟೇಕಾಫ್ ಆಗಿದೆ. ಕುವೈತ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿ ವರ್ದನ್ ಕೂಡ ಆಗಮಿಸಲಿದ್ದಾರೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಅಂಬುಲೆನ್ಸ್ ಸಜ್ಜು
ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಆಂಬ್ಯುಲೆನ್ಸ್‌ಗಳು ಮೂಲಕ ಮೃತದೇಹಗಳನ್ನು ಆಯಾ ನತದೃಷ್ಠರ ನಿವಾಸದತ್ತ ತೆರಳಿವೆ ಎಂದು ವಿದೇಶಾಂಗ ಅಧಿಕಾರಿಗಳು ತಿಳಿಸಿದ್ದಾರೆ
ಕುವೈತ್‌ನ ಮಂಗಾಫ್ ನಗರದ ಆರು ಅಂತಸ್ತಿನ ಕಟ್ಟಡದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ ೪೮ ಜನರು ಸಾವನ್ನಪ್ಪಿದ್ದರು. ವಸತಿ ಸೌಲಭ್ಯದಲ್ಲಿರುವ ೧೭೬ ಭಾರತೀಯ ಕಾರ್ಮಿಕರಲ್ಲಿ ೪೫ ಮಂದಿ ಸಾವನ್ನಪ್ಪಿದ್ದಾರೆ ಮತ್ತು ೩೩ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಉಳಿದವರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ಕುವೈತ್‌ನಲ್ಲಿ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ ಕೇರಳದ ೨೩, ತಮಿಳುನಾಡಿನ ಏಳು, ಉತ್ತರ ಪ್ರದೇಶದ ಮೂವರು, ಒಡಿಶಾದ ಇಬ್ಬರು ಮತ್ತು ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಹರಿಯಾಣದಿಂದ ತಲಾ ಒಬ್ಬರು ಸೇರಿದ್ದಾರೆ. ಗಾಯಗೊಂಡ ಭಾರತೀಯ ಕಾರ್ಮಿಕರು ಚಿಕಿತ್ಸೆ ಪಡೆಯುತ್ತಿರುವ ಐದು ಆಸ್ಪತ್ರೆಗಳಿಗೆ ಭೇಟಿ ನೀಡಿ ಶೀಘ್ರ ಗುಣಮುಖರಾಗಲು ಹಾರೈಸಿದ್ದಾರೆ