ಸಿರಿಧಾನ್ಯಗಳ ಬಳಕೆಗೆ ಒತ್ತು ನೀಡಿ: ಸಚಿವ ಮುನಿಯಪ್ಪ
ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯುತ್ತಿರುವ ‘ಇನ್ ಕ್ರೆಡಿಬಲ್ ಚೆಫ್ ಚಾಲೆಂಜ್ ಕಾರ್ಯಕ್ರಮದಲ್ಲಿ ಏರ್ಪಡಿಸಿರುವ ಪ್ರದರ್ಶನವನ್ನು ಸಚಿವರಾದ ಕೆ.ಹೆಚ್. ಮುನಿಯಪ್ಪ, ಎನ್. ಚಲುವರಾಯಸ್ವಾಮಿ ಹಾಗೂ ಅಧಿಕಾರಿಗಳು ವೀಕ್ಷಿಸಿದರು.
ಬೆಂಗಳೂರು.ಜೂ.೧೩- ಫಾಸ್ಟ್‌ಫುಡ್ ತ್ಯಜಸಿ ಸಿರಿಧಾನ್ಯಗಳ ಬಳಕೆಗೆ ಸಾರ್ವಜನಿಕರು ಹೆಚ್ಚಿನ ಒತ್ತನ್ನು ನೀಡಬೇಕೆಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದರು. ನಗರದ ಅರಮನೆ ಮೈದಾನದಲ್ಲಿ “ಇನ್ ಕ್ರೆಡಿಬಲ್ ಚೆಫ್ ಚಾಲೆಂಜ್ ಸಮಾರಂಭದಲ್ಲಿ ಭಾರತೀಯ ಆತಿಥ್ಯ ಉದ್ಯಮ ಕ್ಷೇತ್ರದ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಜನರು ಪಾಸ್ಟ್ ಪುಡ್ ಕಡೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ. ಆಹಾರ ಶೈಲಿಯಲ್ಲಿ ವಿಧ ವಿಧವಾದ ಪದಾರ್ಥಗಳ ಬಳಕೆ ಹೆಚ್ಚಾಗಿದ್ದರಿಂದ ಆಹಾರ ಪದ್ದತಿ ವಿಭಿನ್ನವಾಗಿದ್ದು ಆರೋಗ್ಯ ಹಾಳಾಗಿದೆ ಎಂದರು. ಪಾಲೀಶ್ ಬರಿತ ಅಕ್ಕಿಯ ಬಳಕೆಯಿಂದ ಸಾರ್ವಜನರಲ್ಲಿ ಮಧುಮೇಹ ದಂತಹ ಕಾಯಿಲೆ ಗಳು ಹೆಚ್ಚಾಗುತ್ತಿವೆ ಇವನ್ನು ತಡೆಯಲು ಹೆಚ್ಚಾಗಿ ರಾಗಿಯನ್ನು ಬಳಸಬೇಕೆಂದು ಕರೆ ನೀಡಿದರು.
ಅಂದಿನ ಕಾಲದ ಜನರು ರಾಗಿ,ನವಣೆ ,ಸಜ್ಜೆ ಆರ್ಕಾ,ಮೊದಲಾದ ಧಾನ್ಯಗಳ ಬಳಕೆಯಿಂದ ಆರೋಗ್ಯ ಉತ್ತಮವಾಗಿತ್ತು. ಸಿರಿದಾನ್ಯಗಳ ಬಳಕೆಗೆ ಸಾರ್ವಜನಿಕರು ಹೆಚ್ಚಿನ ಒತ್ತನ್ನು ನೀಡಬೇಕೆಂದರು. ಹಳೆಯ ಪೂರ್ವಿಕರ ಆಹಾರ ಜೀವನ ಶೈಲಿಯನ್ನು ನಗರ ವಾಸಿಗಳುಸಹ ಬಳಸಲು ಉತ್ಸುಕರಾಗಿದ್ದಾರೆ ಎಂದರು.
ಜನರು ಆಹಾರವನ್ನು ವ್ಯರ್ಥಮಾಡಬಾರದು, ಐಶಾರಾಮಿ ಹೋಟಲ್‌ಗಳಲ್ಲಿ ಮದುವೆ ಮಂಟಪಗಳು, ಸಾರ್ವಜನಿಕ ಸಮಾರಂಭದಲ್ಲಿ ಜನರು ಆಹಾರವನ್ನು ಶೇಕಡಾ ೧೦ ರಷ್ಟು ಪದಾರ್ಥಗಳನ್ನು ಬಿಟ್ಟು ವ್ಯರ್ಥ ಮಾಡುತ್ತಿದ್ದಾರೆ ಅದನ್ನು ತಡಯಲು ನಾವು ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದ್ದೇವೆ ಎಂದರು.ಹೋಟಲ್ ಮಾಲೀಕರು ತಮ್ಮ ತಮ್ಮ ಹೋಟೆಲ್ ಗಳಲ್ಲಿ ನಾಮ ಫಲಕಗಳ ನ್ನು ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಎಚ್ಚರಿಸಿ ಎಂದು ಸಲಹೆ ನೀಡಿದರು. ಆತಿಥ್ಯ, ಸಾರಿಗೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಇನ್ನೊಂದೇ ಹೆಸರೇ ನಮ್ಮ ಕರ್ನಾಟಕ ನಮ್ಮ ರಾಜ್ಯದ ಮುಕುಟ ಮಣಿಯಂತಿರುವ ಬೆಂಗಳೂರಿನಲ್ಲಿ ಐತಿಹಾಸಿಕ ಸಮ್ಮೇಳನಕ್ಕೆ ಸಾಕ್ಷಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ದಕ್ಷಿಣ ಭಾರತ ಬಾಣಸಿಗರ ಸಂಘದ ಅಧ್ಯಕ್ಷ ಸೆಲೆಬ್ರಿಟಿ ಚೆಫ್ ದಾಮೋದರನ್ ಕೆ ಮಾತನಾಡಿ ಹೊಸ ಭಕ್ಷ್ಯಗಳ ತಯಾರಿ ಒಂದು ಕಲೆ. ಅದು ಒಂದು ಕಲಾತ್ಮಕ ಅಭಿವ್ಯಕ್ತಿ. ರುಚಿ, ಪರಿಮಳ, ಟೆಕಶ್ಚರ್ ಮತ್ತು ಸಾಮಗ್ರಿಗಳ ಸರಿಯಾದ ಬಳಕೆ ಮೂಲಕ ತಮ್ಮ ಸೃಜನಶೀಲತೆ ಪ್ರಸ್ತುತಪಡಿಸಲು ಬಾಣಸಿಗರಿಗೆ ದೊರೆಯುವ ವೇದಿಕೆ ಅದಾಗಲಿದೆ ಎಂದರು. ಸಮಾರಂಭದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ರಮೇಶ್ ಚಂದ್ರ ಲಹೋಟೆ ಅಧ್ಯಕ್ಷರು ಎಫ್ ಕೆಸಿಸಿ ,ಧಾಮೋದರ್,ಪಂಕಜ್ ಕೊರಾಠಿ,ಪಿಸಿ ರಾವ್ ಅಧ್ಯಕ್ಷರು ಬಿ.ಬಿ.ಎಚ್ ಎ ಮುಂತಾದವರು ಉಪಸ್ಥಿತರಿದ್ದರು.