ಟಿ೨೦ ವಿಶ್ವಕಪ್: ಶ್ರೀಲಂಕಾ ಬಹುತೇಕ ಹೊರಕ್ಕೆ
ಲಾಡರ್‌ಹಿಲ್ (ಯುಎಸ್‌ಎ).ಜೂ.೧೨ – ಶ್ರೀಲಂಕಾ ಕ್ರಿಕೆಟ್ ತಂಡ ಟಿ೨೦ ವಿಶ್ವಕಪ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ.ನೇಪಾಳ ವಿರುದ್ಧ ನಡೆಯಬೇಕಿದ್ದ ಟಿ೨೦ ಪಂದ್ಯ ಮಳೆಯಿಂದಾಗಿ ಒಂದು ಎಸೆತವನ್ನು ಕಾಣದೇ ರದ್ದಾಗಿದೆ. ಲಂಕಾ ತಂಡಕ್ಕೆ ಈ ಕದನ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು.
ಜೂ.೧೬ರಂದು ಲಂಕಾ ತಂಡ ತನ್ನ ಕೊನೆಯ ಲೀಗ್ ಪಂದ್ಯವನ್ನು ನೆದರ್‌ಲ್ಯಾಂಡ್ಸ್ ತಂಡದ ವಿರುದ್ಧ ಆಡಲಿದೆ. ಡಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಶ್ರೀಲಂಕಾ ಬ್ಯಾಟಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಸಾಕಷ್ಟು ಸುಧಾರಿಸಿಕೊಳ್ಳಬೇಕಿದೆ. ಆಡಿದ್ದ ಮೂರು ಪಂದ್ಯಗಳಲ್ಲಿ ಲಂಕಾ ೨ ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.