ಸೂಪರ್ ೮ಕ್ಕೆ ಕಾಂಗರೂ ಲಗ್ಗೆ
ಆಂಟಿಗುವಾ.ಜೂ.೧೨- ಕ್ರಿಕೆಟ್ ಶಿಶು ನಮೀಬಿಯಾ ವಿರುದ್ಧ ೯ ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ ಸೂಪರ್ ೮ ಪ್ರವೇಶಿಸಿದೆ. ಇಲ್ಲಿನ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆದ ಟಿ೨೦ ವಿಶ್ವಕಪ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ ತಂಡ ೧೭ ಓವರ್‌ಗಳಲ್ಲಿ ೭೨ರನ್‌ಗಳಿಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ ಕ್ರಿಕೆಟ್ ತಂಡ ೫.೪ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೭೪ ರನ್ ಪೇರಿಸಿ ಸುಲಭ ಗೆಲುವು ಪಡೆಯಿತು.
೭೩ ರನ್‌ಗಳ ಸುಲಭ ಗೆಲುವು ಪಡೆದ ಆಸ್ಟ್ರೇಲಿಯಾಕ್ಕೆ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಮೊದಲ ವಿಕೆಟ್‌ಗೆ ೨೧ ರನ್ ಸೇರಿಸಿದರು.
೨೦ ರನ್‌ಗಳಿಸಿದ್ದ ವಾರ್ನರ್ ವೇಗಿ ವೀಸೆಗೆ ಬಲಿಯಾದರು. ಟ್ರಾವಿಸ್ ಹೆಡ್ ಅಜೆಯ ೩೪, ಮಿಚೆಲ್ ಮಾರ್ಷ್ ಅಜೇಯ ೧೮ ರನ್ ಗಳಿಸಿ ತಂಡವನ್ನು ಗೆಲುವಿನ
ದಡ ಸೇರಿಸಿದರು. ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ ಸ್ಪಿನ್ನರ್ ಆಡಮ್ ಜಂಪಾ ಸ್ಪಿನ್ ದಾಳಿಗೆ ತತ್ತರಿಸಿತು. ಮೈಕಲ್ ವಾನ್ ೧೦, ನಿಕೊಲಾಸ್ ಡಾವಿನ್ ೨, ಜಾನ್ ಫ್ರೈಲಿಂಗ್ ೧, ನಾಯಕ ಗೆರಾರ್ಡ್ ಎರಾಸ್ಮಾಸ್ ತಂಡದ ಪರ ೩೬ ರನ್ ಹೊಡೆದು ಗರಿಷ್ಠ ಮೊತ್ತ ದಾಖಲಿಸಿದರು.
ನಂತರ ಬಂದ ಬ್ಯಾಟರ್‌ಗಳು ವಿಫಲರಾಗಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಜೆಜೆ ಸ್ಮಿತ್ ೩, ಗೀನ್, ವೀಸೆ ತಲಾ ತಲಾ ೧ ರನ್, ರೂಬೆನ್ ೭, ಜಾಕ್ ಬ್ರಾಸೆಲ್
ಅಜೇಯ ೨ ರನ್ ಗಳಿಸಿದರು. ಆಸೀಸ್ ಪರ ಆಡಾಮ್ ಜಂಪಾ ೧೨ಕ್ಕೆ ೪, ಹೇಜಲ್‌ವುಡ್ ಹಾಗೂ ಸ್ಟೋಯ್ನಿಸ್ ತಲಾ ೨ ವಿಕೆಟ್, ಕಮಿನ್ಸ್ ಮತ್ತು ನೆಲ್ಲಿಸ್ ತಲಾ ೧ ವಿಕೆಟ್ ಪಡೆದರು.