ಬಿಸಿಗಾಳಿ ದೆಹಲಿಯಲ್ಲಿ ಹಳದಿ ಅಲರ್ಟ್
ನವದೆಹಲಿ,ಜೂ.೧೦- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಸಿಗಾಳಿ ಮುನ್ಸೂಚನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರತೀಯ ಹವಾಮಾನ ಇಲಾಖೆ ಹಳದಿ ಅಲರ್ಟ್ ನೀಡಿದೆ.
ದೆಹಲಿಯಲ್ಲಿ ಗುರುವಾರದ ತನಕ ಬಿಸಿಗಾಳಿ ವಾತಾವರಣ ಮುಂದುವರಿಯಲಿದ್ದು ಹೀಗಾಗಿ ದೆಹಲಿಯ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಮನವಿ ಮಾಡಲಾಗಿದೆ.
ಸಫ್ದರ್ ಜಂಗ್‌ನಲ್ಲಿ ಗರಿಷ್ಠ ತಾಪಮಾನ ೪೨.೫ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಜೊತೆಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೊತೆಗೆ ದೆಹಲಿಯ ವಿವಿಧ ಭಾಗಳಲ್ಲಿ ಹೆಚ್ಚುತ್ತಿರುವ ತಾಪಮಾನ ಜನರನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ.
ವಾಯುವ್ಯ ಭಾರತದಲ್ಲಿ ಚಾಲ್ತಿಯಲ್ಲಿರುವ ಪಾಶ್ಚಿಮಾತ್ಯ ಅಡಚಣೆಯ ಪರಿಣಾಮ ಮತ್ತು ಶುಷ್ಕ ಪಶ್ಚಿಮ ಮಾರುತದಿಂದ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ ಪ್ರತ್ಯೇಕ ಭಾಗಗಳಲ್ಲಿ ಶಾಖದ ಅಲೆ ಹೆಚ್ಚಾಗಿದೆ.
ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಮತ್ತಷ್ಟು ಬಿಸಿಗಾಳಿಯ ವಾತಾವರಣ ಹೆಚ್ಚಾಗಲಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ತಿಳಿಸಿದೆ.
ಗುರುವಾರದವರೆಗೆ ಬಿಸಿಗಾಳಿ ವಾತಾವರಣ ಜಾರಿಯಲ್ಲಿದ್ದು ಜಾರಿಯಲ್ಲಿರುವ ಶಾಖದ ಅಲೆಗಳ ಹಳದಿ ಎಚ್ಚರಿಕೆಯನ್ನು ದೀರ್ಘಶ್ರೇಣಿಯ ಮುನ್ಸೂಚನೆಗಳನ್ನು ಅವಲಂಬಿಸಿ ಮತ್ತಷ್ಟು ವಿಸ್ತರಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿ, ಶುಷ್ಕ ಮತ್ತು ಬಿಸಿ ವಾತಾವರಣದ ಮರಳುವಿಕೆಯನ್ನು ನೋಡುತ್ತೇವೆ, ಮುಂಬರುವ ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ಯಾವುದೇ ಮಳೆಯಾಗುವ ಸಾಧ್ಯತೆಯಿಲ್ಲ. ಗಾಳಿಯಲ್ಲಿ ತೇವಾಂಶ ಕಡಿಮೆಯಾಗಬಹುದು ಎಂದಿದ್ದಾರೆ.
ಬಯಲು ಪ್ರದೇಶದಲ್ಲಿ ಗರಿಷ್ಠ ೪೦ಸೆಲ್ಸಿಯಸ್ ಗಿಂತ ಹೆಚ್ಚಾದಾಗ Iಒಆ ಇದನ್ನು ಶಾಖದ ಅಲೆ ಎಂದು ವರ್ಗೀಕರಿಸುತ್ತದೆ ಮತ್ತು ತಾಪಮಾನ ೪೫ ಡಿಗ್ರಿ ಸೆಲ್ಸಿಯಸ್ ತನಕ ಹೆಚ್ಚಾಗಬಹುದು ಎಂದು ಅಂದಾಜು ಮಾಡಲಾಗಿದೆ.
ಮೇ ೧೭ ರಿಂದ ೨೦ ರವರೆಗೆ ದೆಹಲಿಯು ಮೊದಲ ಬಾರಿಗೆ ಬಿಸಿಗಾಳಿ ಹೊಡೆತಕ್ಕೆ ಸಿಲುಕಿತ್ತು ಸತತ ೧೨ ದಿನ ಸತತ ಬಿಸಿಗಾಳಿ ವಾತಾವರಣದಿಂದ ಜನರು ತತ್ತರಿಸಿ ಹೋಗಿದ್ದರು. ಮೇ ೨೫ ಮತ್ತು ಜೂನ್ ೫ ರ ನಡುವೆ ದಾಖಲಾಗಿವೆ.
ಮೇ ೨೯ ರಂದು ಸಫ್ದರ್‍ಜಂಗ್‌ನಲ್ಲಿ ಗರಿಷ್ಠ ೪೬.೮ ಸೆಲ್ಸಿಯಸ್ ದಾಖಲಾಗಿತ್ತು. ಮೇ ತಿಂಗಳಲ್ಲಿ ನಿಲ್ದಾಣದ ಎರಡನೇ ಅತಿ ಹೆಚ್ಚು ಗರಿಷ್ಠ ತಾಪಮಾನ ಇದಾಗಿದೆ, ೧೯೪೪ರ ಮೇ ೨೯ ರಂದು ಸಾರ್ವಕಾಲಿಕ ಗರಿಷ್ಠ ೪೭.೨ ಸೆಲ್ಸಿಯಸ್ ದಾಖಲಾಗಿದೆ.