ಚಂದ್ರಬಾಬು ಸಂಪತ್ತು ೧,೨೨೫ ಕೋಟಿಗೆ ಏರಿಕೆ
ವಿಶಾಖಪಟ್ಟಣ,ಜೂ.೧೦- ಆಂಧ್ರ ಪ್ರದೇಶದ ವಿಧಾನಸಭೆಯಲ್ಲಿ ಭಾರಿ ಮಹುಮತದೊಂದಿಗೆ ಇದೇ ೧೨ ರಂದು ಅಧಿಕಾರ ಹಿಡಿಯಲು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಸಿದ್ಧತೆ ನಡೆಸಿರುವಾಗಲೇ ಅವರ ಕುಟುಂಬದ ಸಂಪತ್ತು ೧,೨೨೫ ಕೋಟಿ ರೂ. ಏರಿಕೆಯಾಗಿದೆ.
ಹೆರಿಟೇಜ್ ಫುಡ್ಸ್ ನಲ್ಲಿ ಆದಾಯ ಕಳೆದ ೧೨ ದಿನಗಳಲ್ಲಿ ದ್ವಿಗುಣವಾಗಿದೆ. ಷೇರುಗಳ ಮೌಲ್ಯ ೧೦೫ ರಷ್ಟು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವರ ಕುಟುಂಬದ ಆಸ್ತಿ ಮತ್ತಷ್ಟು ಹೆಚ್ಚಾಗಿದೆ.
ಆಂಧ್ರಪ್ರದೇಶ ಚುನಾವಣೆಯಲ್ಲಿ ನಾಯ್ಡು ಅವರ ಪಕ್ಷ ತೆಲುಗು ದೇಶಂ ಪಕ್ಷ ಭರ್ಜರಿ ಜಯಗಳಿಸಿದೆ, ನಾಡಿದ್ದು ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಅವರು ಪ್ರಮಾಣ ವಚನ ಸ್ವೀಕಾರ ಮಾಡಲು ಸಜ್ಜಾಗಿರುವಾಗಲೇ ಅವರ ಸಂಪತ್ತು ದ್ವಿಗುಣವಾಗಿದೆ,
ಎನ್ ಚಂದ್ರಬಾಬು ನಾಯ್ಡು ಅವರ ಕುಟುಂಬದ ಸಂಪತ್ತಿನಲ್ಲಿ ಗಮನಾರ್ಹ ಏರಿಕೆ ಕಂಡಿದೆ, ಆಂಧ್ರಪ್ರದೇಶ ಮೂಲದ ಹೆರಿಟೇಜ್ ಫುಡ್ಸ್ ಷೇರುಗಳು ಕಳೆದ ೧೨ ಟ್ರೇಡಿಂಗ್ ಸೆಷನ್‌ಗಳಲ್ಲಿ ಶೇಕಡಾ ೧೦೫ ಕ್ಕಿಂತ ಹೆಚ್ಚು ಗಮನಾರ್ಹ ಏರಿಕೆ ಕಂಡಿದೆ. ಇದರಿಂದ ಕುಟುಂಬದ ಸಂಪತ್ತಿನಲ್ಲಿ ೧,೨೨೫ ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ
ಹೆರಿಟೇಜ್ ಫುಡ್ಸ್ ಷೇರುಗಳು ಬಿಎಸ್‌ಇಯಲ್ಲಿ ೫೨ ವಾರಗಳ ಗರಿಷ್ಠ ೭೨೭.೯ ರೂ.ಗಳನ್ನು ತಲುಪಿದವು, ಶೇಕಡಾ ೧೦ ರಷ್ಟು ಹೆಚ್ಚಾಗಿದೆ. ಅಪ್ಪರ್ ಸಕ್ರ್ಯೂಟ್‌ನಲ್ಲಿ ಲಾಕ್ ಆಗಿದ್ದು ಮತ್ತೆ ಏರಿಕೆ ಕಂದಿದೆ.
ಕೇವಲ ಎರಡು ವಾರಗಳ ಹಿಂದೆ, ಮೇ ೨೩ ರಂದು, ಸ್ಟಾಕ್ ರೂ ೩೫೪.೫ ಕ್ಕೆ ಕೊನೆಗೊಂಡಿತ್ತು. ಗಮನಾರ್ಹವಾಗಿ, ಜೂನ್ ೩ ರಿಂದ ಜೂನ್ ೧೦ ರವರೆಗೆ, ಷೇರು ಬೆಲೆಯು ಅಜೇಯ ದಾಖಲೆಯಲ್ಲಿ ಮುಂದುವರಿದಿದೆ.