ಪ್ರೊ ಹಾಕಿ:ಭಾರತ ವನಿತೆಯರಿಗೆ ಸತತ ಎಂಟನೆ ಸೋಲು
ಲಂಡನ್: ವೈಫಲ್ಯ ಮುಂದುವರೆಸಿದ ಭಾರತ ಮಹಿಳಾ ಹಾಕಿ ತಂಡ ಎಫ್ಐಎಚ್ ಪ್ರೊ ಹಾಕಿ ಲೀಗ್‍ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 2-3 ಗೋಲುಗಳಿಂದ ಸೋಲು ಕಂಡಿದೆ. ಇದರೊಂದಿಗೆ ಭಾರತ ವನಿತೆಯರ ತಂಡ ಸತತ ಎಂಟು ಪಂದ್ಯಗಳನ್ನು ಸೋತಿದೆ.
ಪ್ರೊ ಲೀಗ್‍ನಲ್ಲಿ ಭಶರತ ಆಘಾತಕಾರಿ ಸೋಲಿನೊಂದಿಗೆ ತವರಿಗೆ ಮರಳಲಿದೆ. ಗ್ರೇಟ್ ಬ್ರಿಟನ್ ಪರ ಗ್ರೇಸ್ ಬಾಲ್ಸ್ಡನ್ (56 ಮತ್ತು 58 ನಿಮಿಷ) ಗೋಲುಗಳನ್ನು ಹೊಡೆದರು.
ಎರಡು ಮನವಿಗಳು ಮತ್ತು ಒಂದು ವಿಡಿಯೋ ಮನವಿ ಇಂಗ್ಲೆಂಡ್ ಪರ ತೀರ್ಪು ಹೋಗಿದ್ದು ಭಾರತಕ್ಕೆ ಹಿನ್ನಡೆಯಾಯಿತು. ಭಾರತ ಪರ 14ನೇ ನಿಮಿಷದಲ್ಲಿ ಲಾಲ್ರೆಂಸಿಯಾಮಿ ಫೀಲ್ಡ್ ಗೋಲು ಹೊಡೆದರು. ನಂತರ 23ನೇ ನಿಮಿಷದಲ್ಲಿ ಕೌರ್ ನವನೀತ್ ಗೋಲು ಹೊಡೆದರು. 2-2 ಸಮಗೊಂಡಿದ್ದಾಗ ಡ್ರ್ಯಾಗ್ ಫ್ಲಿಕ್ಕರ್ ಗ್ರೇಸ್ ಬಾಲ್ಸ್ಡನ್ ಮತ್ತೊಂದು ಗೋಲು ಹೊಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.