ನರೇಂದ್ರ ಮೋದಿ 3ನೇ ಇನ್ನಿಂಗ್ಸ್ ಶುರು, 72 ಮಂದಿ ಮಂತ್ರಿ ಮಂಡಲ ಅಸ್ತಿತ್ವಕ್ಕೆ
ನವದೆಹಲಿ:ನರೇಂದ್ರ ದಾಮೋದರ್ ದಾಸ್ ಮೋದಿ ದೇಶದ ಮೂರನೇ ಬಾರಿ ಪ್ರಧಾನ‌ ಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ದೇಶದಲ್ಲಿ‌ ಮತ್ತೊಮ್ಮೆ ನರೇಂದ್ರ ಮೋದಿ ಪರ್ವ ಆರಂಭವಾಗಿದೆ.
ಒಟ್ಟು ಮೋದಿ‌ ನೇತೃತ್ವದಲ್ಲಿ ಮೂವತ್ತು ಮಂದಿ ಸಂಪುಟ ದರ್ಜೆ ಸಚಿಚರು, ಐವರು ಸ್ವತಂತ್ರ ಖಾತೆ ರಾಜ್ಯ ಸಚಿವರು ಹಾಗೂ 36 ಮಂದಿ ರಾಜ್ಯ ಸಚಿವರನ್ನೊಳಗೊಂಡ 72 ನೂತನ ಸಚಿವರನ್ನೊಳಗೊಂಡ ಎನ್ ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.
ರಾಷ್ಟ್ರಪತಿ ಭವನದಲ್ಲಿ ಭಾನುವಾರ ನಡೆದ ವಿದೇಶಿ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನರೇಂದ್ರಮೋದಿಯವರಿಗೆ ಪ್ರತಿಜ್ಞಾವಿಧಿ ಭೋಧಿಸಿದರು. ಮೋದಿಯವರು ಈಶ್ವರನ ಹೆಸರಲ್ಲಿ ಪ್ತಮಾಣವಚನ ಸ್ವೀಕರಿಸಿದರು.
32 ಮಂದಿ ಸಂಪುಟ ದರ್ಜೆ ಸಚಿವರು,
ಸಂಪುಟ ದರ್ಜೆ ಸಚಿವರಾಗಿ
ರಾಜನಾಥ್ ಸಿಂಗ್,
ಅಮಿತ್ ಶಾ,
ನಿತಿನ್ ಗಡ್ಕರಿ,
ಜಗತ್ ಪ್ರಕಾಶ್ ನಡ್ಡಾ,
ಶಿವರಾಜ್ ಸಿಂಗ್ ಚೌಹಾಣ್,
ನಿರ್ಮಲಾ ಸೀತಾರಾಮನ್,
ಡಾ.ಸುಬ್ರಮಣ್ಯಂ ಜೈ ಶಂಕರ್,
ಮನೋಹರ್ ಲಾಲ್ ಖಟ್ಟರ್,
ಎಚ್.ಡಿ . ಕುಮಾರಸ್ವಾಮಿ,
ಪಿಯೂಷ್ ಗೊಯಲ್,
ಧರ್ಮೇಂದ್ರ ಪ್ರಧಾನ್,
ಜಿತನ್ ರಾಮ್ ಮಾಂಜಿ,
ರಾಜೀವ್ ರಂಜನ್ ಸಿಂಗ್,
ಸರ್ಬಾನಂದ ಸೋನಾವಲ್,
ಡಾ. ವೀರೇಂದ್ರ ಕುಮಾರ್,
ರಾಮ್ ಮೋಹನ್ ನಾಯ್ಡು,
ಪ್ರಲ್ಹಾದ್ ಜೋಶಿ,
ಜುವೆಲ್ ಓರಮ್,
ಗಿರಿರಾಜ್ ಸಿಂಗ್,
ಅಶ್ವಿನಿ ವೈಷ್ಣವ್,
ಜ್ಯೋತಿರಾಧಿತ್ಯ ಮಾಧವರಾವ್ ಸಿಂಧ್ಯಾ,
ಭೂಪೇಂದ್ರ ಯಾದವ್,
ಗಜೇಂದ್ರ ಸಿಂಗ್ ಶೇಖಾವತ್,
ಅನ್ನಪೂರ್ಣ ದೇವಿ,
ಕಿರಣ್ ರಜಿಜು,
ಹರ್ದೀಪ್ ಸಿಂಗ್ ಪುರಿ,
ಮನ್ಸೂಖ್ ಮಾಂಡವಿಯಾ,
ಕಿಶನ್ ರಡ್ಡಿ,
ಚಿರಾಗ್ ಪಾಸ್ವಾನ್,
ಸಿ.ಆರ್.ಪಾಟೀಲ್,
ರಾಜ್ ಭೂಷಣ್ ಚೌಧರಿ,
ತೋಖನ್ ಸಾಹು,
ಭೂಪತಿ ರಾಜು ಶ್ರೀನಿವಾಸ್ ವರ್ಮಾ
ಸ್ವತಂತ್ರ ಖಾತೆ,
ಇಂದ್ರಜಿತ್ ಸಿಂಗ್,
ಜಿತೇಂದ್ರ ಸಿಂಗ್,
ಅರ್ಜುನ್ ರಾಮ್ ಮೇಘ್ ವಾಲ್,
ಪ್ರತಾಪ್ ರಾವ್,
ರಾಜ್ಯ ಮಂತ್ರಿ
ಜಿತಿನ್ ರಾವ್,
ಶ್ರೀಪಾದ ನಾಯಕ್,
ಪಕಂಜ್ ಚೌಧರಿ,
ಗಣಪತ್ ರಾವ್ ಜಯಂತ್ ಚೌಧರಿ,
ಕೃಷನ್ ಪಾಲ್,
ರಾಮ್ ದಾಸ್ ಅಠಾವಳೆ,
ರಾಮ್ ನಾಥ್ ಠಾಕೂರ್,
ನಿತ್ಯಾನಂದ್ ರಾಯ್,
ಅನುಪ್ರಿಯಾ ಪಟೇಲ್,
ವಿ.ಸೋಮಣ್ಣ,
ಡಾ.ಚಂದ್ರಶೇಖರ್ ಪೆಮ್ಮಸಾನಿ,
ಎಸ್.ಪಿ.ಸಿಂಗ್ ಬಘೇಲ್,
ಶೋಭಾ ಕರಂದ್ಲಾಜೆ,
ಕೀರ್ತಿ ವರ್ಧನ್ ಸಿಂಗ್,
ಬನ್ವಾರಿ ಲಾಲ್ ವರ್ಮಾ,
ಶಾಂತನೂ ಠಾಕೂರ್,
ಸುರೇಶ್ ಗೋಪಿ,
ಡಾ.ಎಲ್.ಮುರುಗನ್,
ಅಜಯ್ ತಮ್ಟಾ,
ಬಂಡಿ ಸಂಜಯ್ ಕುಮಾರ್,
ಕಮಲೇಶ್ ಪಾಸ್ವಾನ್,
ಭಾಗಿರಥ್ ಚೌಧರಿ,
ಸತೀಶ್ ಚಂದ್ರ ದುಬೆ,
ಸಂಜಯ್ ಸೇಠ್,
ರವನೀತ್ ಸಿಂಗ್,
ದುರ್ಗಾದಾಸ್ ವಿ.ಕೆ.
ರಕ್ಷಾ ನಿಖಿಲ್,
ಇಂದಿರಾಪುರ್ ರಾಮ್ ಮೋಹನ್ ನಾಯ್ಡು,
ಸಾವಿತ್ರಿ ಠಾಕೂರ್,
ಸುಕಾಂತ ಮಜುಂದಾರ್,
ಹರ್ಷ್ ಮಲ್ಹೋತ್ರ ಜಯಂತಿ ಭಾಯಿ,
ಮುರಳೀಧರ್ ಮೋಹನ್,
ಗಣಪತ್ ರಾವ್ ಜಯಂತ್ ಚೌಧರಿ,
ಕೃಷನ್ ಪಾಲ್,
ರಾಮ್ ದಾಸ್ ಅಠಾವಳೆ,
ಜಾರ್ಜ್ ಕುರಿಯನ್,
ಪವಿತ್ರೋ ಮಾರ್ಗರೇಟ್
ವಿದೇಶಿ ಗಣ್ಯರ ಸಮಾಗಮ
ಭಾರತದ ಸಾವಿರಾರು ಗಣ್ಯರ ಜತೆಗೆ ನೆರೆ ರಾಷ್ಟ್ರಗಳ ನಾಯಕರು ಕೂಡ ಭಾಗವಹಿಸಿದ್ದರು. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿದ್ದರು.
ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 293 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ 272ರ ಮ್ಯಾಜಿಕ್‌ ನಂಬರ್‌ ಗೆರೆಯನ್ನು ದಾಟಿದೆ. ಇನ್ನು, ಕಳೆದ ಬಾರಿ 303 ಕ್ಷೇತ್ರಗಳಲ್ಲಿ ಜಯಿಸಿದ್ದ ಬಿಜೆಪಿಯ ಕ್ಷೇತ್ರಗಳು ಈ ಬಾರಿ 240ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ, 10 ವರ್ಷಗಳ ಬಳಿಕ ದೇಶದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಂತಾಗಿದೆ. ಇಂಡಿಯಾ ಒಕ್ಕೂಟವು 232 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ 99 ಕ್ಷೇತ್ರಗಳಲ್ಲಿ ಜಯ ಕಂಡು, ಎರಡನೇ ಬೃಹತ್‌ ಪಕ್ಷ ಎನಿಸಿದೆ.
ಬಾಲಿವುಡ್ ನಟರಾದ ಶಾರೂಖ್ ಖಾನ್, ಅಕ್ಷಯ್ ಕುಮಾರ್ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, ರವೀನಾ ತಂಡನ್‌ ದಂಪತಿ ಸೇರಿದಂತೆ 8000 ಕ್ಕೂ ಮಂದಿ ಗಣ್ಯರು ಉಪಸ್ಥಿತರಿದ್ದರು.