ಅಥ್ಲೆಟಿಕ್ಸ್ : ಸೌರಭ್ ಶರ್ಮಾಗೆ 2 ಚಿನ್ನ
ಹರ್ಮಿಪುರ್(ಹಿಮಾಚಲ ಪ್ರದೇಶ): ಭಾರತದ ಅಥ್ಲೀಟ್ ಕ್ಸ್ ಸೌರಭ್ ಶರ್ಮಾ ವಿಶ್ವ ಪ್ಯಾರಾ ಅಥ್ಲೆಟಿ ಗ್ರ್ಯಾಂಡ್ ಪ್ರಿಕ್ಸ್‍ನಲ್ಲಿ ಎರಡು ಚಿನ್ನ ಗೆದ್ದಿದ್ದಾರೆ.
ಸ್ವೀಟ್ಜರ್ ಲ್ಯಾಂಡ್ನ ನಾಟ್‍ವಿಲ್‍ನಲ್ಲಿ ನಡೆಯುತ್ತಿರುವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸೌರಭ್ ಶರ್ಮಾ 155 ಮೀ. ಮತ್ತು 5 ಸಾವಿರ ಮೀ. ರೇಸ್‍ನಲ್ಲಿ ಗೆಲುವು ಸಾಧಿಸಿದರು.
ಹಿಮಾಚಲ ಪ್ರದೇಶದ ಹರ್ಮಿಪುರ್ ಜಿಲ್ಲೆಯ ಸೌರಭ್ ಶರ್ಮಾ ಭಾರತ ತಂಡದಲ್ಲಿ ಟಿ12 ವಿಭಾಗವನ್ನು ಪ್ರತಿನಿಧಿಸುತ್ತಿದ್ದಾರೆ. ಸೌರಭ್ ಶರ್ಮಾ ಈ ಹಿಂದೆ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ 7 ಚಿನ್ನ ಗೆದ್ದ ಸಾಧನೆ ಮಾಡಿದ್ದರು.