ಪಾಕ್‌ಗೆ ಆಹ್ವಾನವಿಲ್ಲ
ನವದೆಹಲಿ,ಜೂ, ೯ – ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಮಗೆ ಆಹ್ವಾನಿಸಲಾಗಿಲ್ಲ, ಹೀಗಾಗಿ ರಾತ್ರಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸುತ್ತೇನೆ” ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ
ನೆರೆಯ ರಾಷ್ಟ್ರಗಳ ಮುಖ್ಯಸ್ಥರನ್ನು ಆಹ್ವಾನಿಸಿದ್ದರೂ, ಪಾಕಿಸ್ಯಾನಕ್ಕೆ ಆಹ್ವಾನ ನೀಡದಿರುವುದು ವಿಷಾದದ ಸಂಗತಿ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ನೆರೆಯ ದೇಶಗಳನ್ನು ಆಹ್ವಾನಿಸುವ ಉತ್ತಮ ಸಂಪ್ರದಾಯ ಇದು ಎಂದು ನಾನು ಭಾವಿಸುತ್ತೇನೆ. ಆದರೆ ಈ ಬಾರಿ ಒಂದು ಕಡಿಮೆಯಾಗಿದೆ. ಅವರು ಪಾಕಿಸ್ತಾನವನ್ನು ಆಹ್ವಾನಿಸಿಲ್ಲ ಎಂದು ತಿಳಿಸಿದ್ದಾರೆ.