ನಾಳೆ ಅರ್ಜುನ್ ಸರ್ಜಾ ಪುತ್ರಿ ವಿವಾಹ
ಬೆಂಗಳೂರು.ಜೂ.೯- ನಟ ಅರ್ಜುನ್ ಸರ್ಜಾ ಮನೆಯಲ್ಲಿ ಮದುವೆ ತಯಾರಿ ಆರಂಭವಾಗಿದ್ದು ಸರ್ಜಾರ ಪುತ್ರಿ ಐಶ್ವರ್ಯಾ ಮದುವೆ ಸಂಭ್ರಮ ಮನೆಮಾಡಿದೆ.
ಹಳದಿ ಶಾಸ್ತ್ರದ ಹಾಗೂ ಮೆಹಂದಿ ಕಾರ್ಯಕ್ರಮವನ್ನು ನೆರವೇರಿದೆ. ಐಶ್ವರ್ಯ ಸರ್ಜಾ ಮೆಹಂದಿ ಹಾಕಿಸಿಕೊಂಡು ಸಂಭ್ರಮಿಸಿದ್ದಾರೆ.
ಐಶ್ವರ್ಯಾ ಸರ್ಜಾ ಅವರು ತಮಿಳು ನಟ ಉಮಾಪತಿ ರಾಮಯ್ಯ ಅವರನ್ನು ವಿವಾಹವಾಗಲಿದ್ದಾರೆ. ಉಮಾಪತಿ ರಾಮಯ್ಯ, ತಮಿಳಿನ ಹಿರಿಯ ನಟ ತಂಬಿ ರಾಮಯ್ಯ ಅವರ ಪುತ್ರ.ನಾಳೆ ಐಶ್ವರ್ಯಾ ಸರ್ಜಾ ಮನೆಯಲ್ಲಿ ಮದುವೆ ಸಂಭ್ರಮ ಜೋರಿದ್ದು ಹಳದಿ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ.
ನಾಳೆ ಚೆನ್ನೈ ನಲ್ಲಿರುವ ಅರ್ಜುನ್ ಸರ್ಜಾ ಅವರೇ ಕಟ್ಟಿಸಿರುವ ಆಂಜನೇಯ ದೇವಸ್ಥಾನದಲ್ಲಿ ಇವರಿಬ್ಬರ ವಿವಾಹ ನೆರವೇರಲಿದೆ.ಜೂನ್ ೧೪ರಂದು ಚೆನ್ನೈನ ಲೀಲಾ ಪ್ಯಾಲೇಸ್‌ನಲ್ಲಿ ನವ ಜೋಡಿಯ ಆರತಕ್ಷತೆ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಲವು ಸಿನಿಮಾ ತಾರೆಯರು ಭಾಗಿಯಾಗಲಿದ್ದಾರೆ.