ಒಲಿಂಪಿಯಾಡ್ ಪ್ರಶಸ್ತಿ, ಬೆಂಗಳೂರು ವಿದ್ಯಾರ್ಥಿಗಳ ಸಾಧನೆ
ಬೆಂಗಳೂರು, ಜೂ.೭: ೨೦೨೩-೨೪ನೇ ಸಾಲಿನ ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಪ್ರೆಸಿಡೆನ್ಸಿ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿ ಪ್ರೀತಮ್ ಸಹಾ ರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್‌ನಲ್ಲಿ ಪ್ರಥಮ ರ್ಯಾಂಕ್ ಪಡೆದು ಅಂತರಾಷ್ಟ್ರೀಯ ಚಿನ್ನದ ಪದಕ ಮತ್ತು ಮೆರಿಟ್ ಪ್ರಮಾಣಪತ್ರವನ್ನು ಗಳಿಸಿದ್ದಾರೆ. ಇಂದಿರಾನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಆರನೇ ತರಗತಿಯ ವಿದ್ಯಾರ್ಥಿ ರಿಷಬ್ ಶುಭಂಕರ್ ಅಂತರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ ಪ್ರಥಮ ರ್ಯಾಂಕ್ ಪಡೆದು ಅಂತರಾಷ್ಟ್ರೀಯ ಚಿನ್ನದ ಪದಕ ಮತ್ತು ಮೆರಿಟ್ ಪ್ರಮಾಣಪತ್ರವನ್ನು ಪಡೆದಿದ್ದಾರೆ. ದೆಹಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು-ನಾರ್ತ್‌ನ ಒಂಬತ್ತನೇ ತರಗತಿಯ ವಿದ್ಯಾರ್ಥಿ ರೋನಿತ್ ಪಾಲ್ ಅಂತರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ ಎರಡನೇ ರ್ಯಾಂಕ್ ಗಳಿಸಿ ಅಂತರಾಷ್ಟ್ರೀಯ ಬೆಳ್ಳಿ ಪದಕ ಮತ್ತು ಮೆರಿಟ್ ಪ್ರಮಾಣಪತ್ರವನ್ನು ಪಡೆದರು.
ಈ ವರ್ಷದ ಎಸ್‌ಓಎಫ್ ಒಲಿಂಪಿಯಾಡ್‌ನಲ್ಲಿ ಬೆಂಗಳೂರಿನ ೪,೩೪,೯೫೦ ವಿದ್ಯಾರ್ಥಿಗಳು ಸೇರಿದಂತೆ ೭೦ ದೇಶಗಳ ಲಕ್ಷಾಂತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
೨೦೨೩-೨೪ರ ಶೈಕ್ಷಣಿಕ ವರ್ಷಕ್ಕೆ ವಿಜೇತರು, ಅವರ ಶಿಕ್ಷಕರು ಮತ್ತು ಪ್ರಾಂಶುಪಾಲರನ್ನು ಗೌರವಿಸಲು ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ನವದೆಹಲಿಯಲ್ಲಿ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಿತ್ತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಇಸ್ರೋದ ವಿಕ್ರಮ್‌ಸಾರಾಭಾಯ್ ಸಂಸ್ಥೆಯ ನಿವೃತ್ತ ಪ್ರೊಫೆಸರ್ .ವೈ.ಎಸ್.ರಾಜನ್, ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ (ಐಸಿಎಸ್‌ಐ)ದ ಕಾರ್ಯದರ್ಶಿ, ಲೇಖಕ, ತಂತ್ರಜ್ಞ, ಸಿಎಸ್ ಆಶಿಶ್ ಮೋಹನ್, ಮತ್ತು ಬೆಂಗಳೈರು ಎಪಿಯನ್ಸ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ಸಮಸ್ಥೆಯ ಸಿಇಓ ಆರ್.ರವಿ, ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಖ್ಯಾತ ನಟ ಮತ್ತು ಚಿತ್ರಕಥೆ ರಚನೆಗಾರ ಚೇತನ್ ಭಗತ್ ಭಾಗವಹಿಸಿದ್ದರು.