ರಾಜೀನಾಮೆ ಬೇಡ:ಫಡ್ನವೀಸ್‌ಗೆ ಆರ್‌ಎಸ್‌ಎಸ್ ಸೂಚನೆ
ನಾಗ್ಪುರ,ಜೂ.೭-ಮಹಾರಾಷ್ಟ್ರದಲ್ಲಿ ಲೋಕಸಭೆಯ ಚುನಾವಣೆಯಲ್ಲಿ ಸೋಲಿಗೆ ನೈತಿಕ ಹೊಣೆ ಹೊತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಲು ಮುಂದಾದ ಬೆನ್ನಲ್ಲೇ ರಾಜೀನಾಮೆ ನೀಡದಂತೆ ಆರ್ ಎಸ್ ಎಸ್ ಸೂಚನೆ ನೀಡಿದೆ
ರಾಜ್ಯದಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಅಲ್ಲಿಯ ತನಕ ಉಪ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ದೇವೇಂದ್ರ ಪಡ್ನವಿಸ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ
ಆರೆಸ್‌ಎಸ್ ಪದಾಧಿಕಾರಿಗಳು ಅವರ ನಾಗ್ಪುರ ನಿವಾಸಕ್ಕೆ ಕರೆಸಿಕೊಂಡು ಈ ಸೂಚನೆ ನಿಡಿದ್ಧಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಉಪ ಮುಖ್ಯಮಂತ್ರಿ ನಿವಾಸದಲ್ಲಿ ನೂಕುನುಗ್ಗಲು ದೃಢಪಡಿಸಿವೆ ಆದರೆ ಇದು ಸೌಜನ್ಯದ ಭೇಟಿ ಎಂದು ಹೇಳಲಾಗಿದೆ.
ಆರೆಸ್ಸೆಸ್ ಹಿರಿಯ ಕಾರ್ಯಕಾರಿ ಅತುಲ್ ಲಿಮಯೆ ಅವರು ಸಭೆಯಲ್ಲಿ ಭಾಗಿಯಾಗಿದ್ದರು. ಬಿಜೆಪಿಯಲ್ಲಿ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ
ಈಗ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ರಾಜ್ಯದಲ್ಲಿ ಸದ್ಯದಲ್ಲಿಯೇ ನಡೆಯಲಿರುವ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಅಲ್ಲದೆ. ರಾಜ್ಯ ಸರ್ಕಾರವನ್ನು ಮುನ್ನಡೆಸಲು ಸಂಘ ಅವರಿಗೆ ನೀಡಿದ ಸ್ಪಷ್ಟ ಸಲಹೆ ನೀಡಿದೆ ಎನ್ನಲಾಗಿದೆ
ಇದಕ್ಕೂ ಮೊದಲು, ಫಡ್ನವಿಸ್ ಅವರು ಬಿಜೆಪಿ ರಾಜ್ಯ ಮುಖ್ಯಸ್ಥ ಚಂದ್ರಶೇಖರ ಬವಾಂಕುಲೆ ಅವರೊಂದಿಗೆ ನಾಗಪುರದಲ್ಲಿ ಚರ್ಚೆ ನಡೆಸಲಾಗಿದೆ. ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಉದ್ದೇಶಿಸಿದ್ದರು ಎನ್ನಲಾಗಿದೆ
ಬಿಜೆಪಿಯ ಕಳಪೆ ಪ್ರದರ್ಶನದ ನಂತರ ನಿರಾಶೆ ಅನುಭವಿಸುವುದು ಸಹಜವಾದರೂ ಫಡ್ನವೀಸ್ ಅವರ ಸ್ಥಾನದಲ್ಲಿ ಉಳಿಯಲು ಪಕ್ಷ ಕೂಡ ಮನವಿ ಮಾಡಿದೆ ಎನ್ನಲಾಗಿದೆ