ಲಿಪ್‌ಸ್ಟಿಕ್ ಹಚ್ಚಿದ ಆರೋಪ ಮಹಿಳಾ ದಫೆದಾರ್ ವರ್ಗಾವಣೆ
ಚೆನ್ನೈ,ಸೆ.೨೫-ಚೆನ್ನೈ ಮಹಾನಗರ ಪಾಲಿಕೆಯ ಮೊದಲ ಮಹಿಳಾ ದಫೆದಾರ್ ಮಾಧವಿ ಅವರನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಗಾಢ ಬಣ್ಣದ ಲಿಪ್ ಸ್ಟಿಕ್ ಹಚ್ಚಿದ ಆರೋಪದ ಮೇಲೆ ವರ್ಗಾವಣೆ ಮಾಡಲಾಗಿದೆ.
ಆದರೆ, ವರ್ಗಾವಣೆಗೂ ಲಿಪ್ ಸ್ಟಿಕ್ ಗೂ ಯಾವುದೇ ಸಂಬಂಧವಿಲ್ಲ ಎಂದು ಮೇಯರ್ ಪ್ರಿಯಾ ಹೇಳಿದ್ದಾರೆ. ಕಳೆದ ತಿಂಗಳು ನಡೆದ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಲಿಪ್‌ಸ್ಟಿಕ್ ಹಚ್ಚಬಾರದು ಸೂಚನೆಯನ್ನು ಅವರು ಪಾಲಿಸಲಿಲ್ಲ ಎಂದು ವರದಿಯಾಗಿದೆ. ಮಾಧವಿ (೫೦)ಎಂಬ ಮಹಿಳಾ ದಫೆದಾರ್ ಅವರನ್ನು ಮೇಯರ್ ಕಚೇರಿಯಿಂದ ಮನಾಲಿ ವಲಯ ಕಚೇರಿಗೆ ವರ್ಗಾಯಿಸಲಾಗಿದೆ. ಆದರೆ, ಮೇಯರ್ ಪ್ರಿಯಾ, ವರ್ಗಾವಣೆಗೂ ಲಿಪ್ ಸ್ಟಿಕ್ ಹಚ್ಚಿಕೊಂಡಿದ್ದ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ .
ಮೇಯರ್ ಕಚೇರಿಗೆ ಸಚಿವರು ಮತ್ತು ರಾಯಭಾರ ಕಚೇರಿ ಅಧಿಕಾರಿಗಳು ಆಗಾಗ್ಗೆ ಭೇಟಿ ನೀಡುತ್ತಿರುವ ಕಾರಣ, ತಮ್ಮ ಆಪ್ತ ಸಹಾಯಕರು ಲಿಪ್‌ಸ್ಟಿಕ್ ಹಚ್ಚದಂತೆ ಕೇಳಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಾಧವಿ ವರ್ಗಾವಣೆ ಬಳಿಕ ಚೆನ್ನೈ ಮೇಯರ್ ಕಚೇರಿಯಲ್ಲಿ ದಫದಾರ್ ಹುದ್ದೆ ಖಾಲಿ ಇದೆ.
ಮೇಯರ್ ಆರ್.ಪ್ರಿಯಾ ಅವರ ಆಪ್ತ ಸಹಾಯಕ ಶಿವಶಂಕರ್ ಅವರನ್ನು ಲಿಪ್ ಸ್ಟಿಕ್ ಹಚ್ಚಬಾರದು ಎಂದು ನೀಡಿರುವ ಆದೇಶಕ್ಕೆ ಸಮರ್ಥನೆ ನೀಡಿ ಪ್ರಶ್ನಿಸಿದ ನಂತರ ಅವರನ್ನು ವರ್ಗಾವಣೆ ಮಾಡಲಾಗಿದೆ.
ಲಿಪ್‌ಸ್ಟಿಕ್ ಹಚ್ಚಬೇಡಿ ಎಂದು ನೀವು ನನಗೆ ಸಲಹೆ ನೀಡಿದ್ದೀರಿ. ಆದರೆ ನಾನು ಹಚ್ಚುತ್ತೇನೆ ಅದು ಅಪರಾಧವಾಗಿದ್ದರೆ, ಲಿಪ್‌ಸ್ಟಿಕ್ ಹಚ್ಚುವುದನ್ನು ನಿಷೇಧಿಸಿದ ಸರ್ಕಾರದ ಆದೇಶವನ್ನು ತೋರಿಸಿ ಎಂದು ಮಾಧವಿ ಆಗಸ್ಟ್ ೬ ರಂದು ಶಂಕರ್ ಅವರ ನೋಟಿಸ್‌ಗೆ ಉತ್ತರಿಸಿದ್ದಾರೆ.
ಕರ್ತವ್ಯ ಲೋಪ, ಕೆಲಸದ ವೇಳೆಯಲ್ಲಿ ಹಾಜರಾಗದಿರುವುದು ಮತ್ತು ಮೇಲಧಿಕಾರಿಗಳ ಆದೇಶವನ್ನು ಪಾಲಿಸದಿರುವುದು ಮುಂತಾದ ಕಾರಣಗಳನ್ನು ನೋಟಿಸ್‌ನಲ್ಲಿ ನೀಡಲಾಗಿದೆ. ಹಾಗಾಗಿ ದಫೇದಾರ್ ಹುದ್ದೆ ಖಾಲಿ ಇದ್ದ ಮನಾಲಿ ವಲಯಕ್ಕೆ ಮಾಧವಿ ಅವರನ್ನು ವರ್ಗಾವಣೆ ಮಾಡಲಾಗಿದೆ.