ಹರಿಯುವ ನೀರಿಗೆ ಅಡ್ಡಲಾಗಿ ಸಣ್ಣ ಅಣೆಕಟ್ಟೆಗಳ ಮೂಲಕಸಿರಪೂರ ಮಾದರಿ ಅಂತಜರ್ಲ ಕಾಮಗಾರಿಗೆ ಪ್ರಸ್ತಾವನೆ ಸಿದ್ಧತೆಭೀಮಾನದಿ ನೀರು ಅಮರ್ಜಾ ಅಣೆಕಟ್ಟೆಗೆ ತುಂಬಿಸುವ ಕಾರ್ಯ ವಿಳಂಬ
ಆಳಂದ:ಜೂ.30: ಕ್ಷೇತ್ರದ ಶಾಸಕ ಬಿಆರ್ ಪಾಟೀಲ್ ಅವರು ತಮ್ಮ ಹಿಂದಿನ ಅವಧಿಯಲ್ಲಿ ಪ್ರಾರಂಭಿಸಿದ ಭಿಮಾ ನದಿಯಿಂದ ಅಮರ್ಜಾ ಅಣೆಕಟ್ಟೆ ಸೇರಿ ಮಾರ್ಗದ ಮಧ್ಯದ ಗ್ರಾಮಗಳ ಕೆರೆಗಳಿಗೆ ನೀರು ತುಂಬುವ ಬಹುಕೋಟಿ ಯೋಜನೆ, ನಿರೀಕ್ಷಿತ ರೀತಿಯಲ್ಲಿ ಪೂರ್ಣಗೊಳ್ಳುವಲ್ಲಿ ಹಿಂದೇಟಾದರು ಸಹ ಬರುವ ಬೇಸಿಗೆಯೊಳಗೆ ಪೂರ್ಣಗೊಳ್ಳಲಿದೆ ಎಂದು ಕಾಮಗಾರಿ ಗುತ್ತಿದಾರ ಮೂಲಗಳು ದೃಢಪಡಿಸಿವೆ.
ಸದ್ಯ ಮಳೆಯಾಗುತ್ತಿದ್ದರಿಂದ ಕಾಮಗಾರಿ ಕೈಗೊಳ್ಳಲಾಗದೆ 6ರಿಂದ8 ತಿಂಗಳಾದರು ವಿಳಂಬವಾಗಲಿದೆ ಎಂದು ಹೇಳಲಾಗಿದೆ. ಬರುವ ಬೇಸಿಗೆವರೆಗೆಯಾದರು ಅಣೆಕಟ್ಟೆಗೆ ನೀರು ಸಂಗ್ರಹಗೊಂಡರೆ ಕೃಷಿಕರಿಗೆ ಅನುಕೂಲವಾಗಿದೆ ಎಂದು ಈ ಭಾಗದ ರೈತ ಸಮುದಾಯ ಆಶಾಭಾವನೆ ಹೊಂದಿದೆ.
ಈ ಯೋಜನೆ ಜೂನ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಪಾಟೀಲ್ ಅವರು ಹಿಮ್ಮೆಟ್ಟಿದ್ದರು. ಆದರೆ, ಇಂದಿನ ದಿನದವರೆಗೂ ಈ ಯೋಜನೆಗೆ ಪೂರ್ಣಗೊಳ್ಳಲು ಹಿಂದೇಟಾಗಿದೆ. ಆರು ವರ್ಷಗಳ ಹಿಂದೆ ಅಂದಿನ ಸಿಎಂ ಸಿದ್ರಾಮಯ್ಯನವರ ಅವಧಿಯಲ್ಲಿ ಮಂಜೂರಾಗಿದ್ದ ಅಮರ್ಜಾ ಅಣೆಕಟ್ಟೆಗೆ ಭೀಮಾನದಿ ನೀರು ತರುವ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಎದುರಾದ ಚುನಾವಣೆಯಲ್ಲಿ ಬಿ.ಆರ್. ಪಾಟೀಲರ ಸೋಲಾಗಿ ಸುಭಾಷ ಗುತ್ತೇದಾರ ಶಾಸಕರಾಗಿ ಆಯ್ಕೆಯಾಗಿದ್ದರು. ಈ ವೇಳೆ ಕೈಬಿಟ್ಟು ಹೋಗಿದ್ದ ಮಧ್ಯದ ಕೆಲವು ಗ್ರಾಮಗಳ ಕೆರೆ ನೀರು ತುಂಬಿಸುವ ಯೋಜನೆಗೆ ಗುತ್ತೇದರ ಸೇರಿಸಿದ್ದರು ಆದರೆ ಕಾಮಗಾರಿ ಪೂರ್ಣಗೊಳ್ಳುವಲ್ಲೂ ಗುತ್ತೇದಾರ ಅವಧಿಯಲ್ಲಿ ಹಿಂದೇಟಾಗಿದೆ.
ಈಗ ಮತ್ತೆ ಶಾಸಕ ಬಿ.ಆರ್. ಪಾಟೀಲ ಅವರು ತಮ್ಮ ಹಿಂದಿನ ಅವಧಿಯಲ್ಲಿ ಕೈಗೆತ್ತಿಕೊಂಡಿದ್ದ ಅಣೆಕಟ್ಟೆಗೆ ನೀರು ತರುವ ಯೋಜನೆ ಪೂರ್ಣಗೊಳಿಸುವಂತೆ ತಮ್ಮ ರಾಜ್ಯ ಸರ್ಕಾರದ ಮೇಲೆ ಅಫಜಲಪೂರ ಶಾಸಕ ಎಂ.ವೈ.ಪಾಟೀಲರೊಂದಿಗೆ ಒತ್ತಡ ಹೇರಿ ಬೆಂಗಳೂರಿನಲ್ಲಿ ಮಧ್ಯಮ ನೀರಾವರಿ ಯೋಜನೆಯ ಸಂಬಂಧಿತ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಕಾಮಗಾರಿ ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದ್ದರು. ಈ ವೇಳೆ ಬರುವ ಜೂನ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದರಾದರು ಕಾಮಗಾರಿ ಇನ್ನೂ ಪೂರ್ಣಳ್ಳದೆ ಹಿಂದೇಟಾಗಿ ಚರ್ಚೆಗೆ ಗ್ರಾಹಸವಾಗಿದೆ.
ಅಮರ್ಜಾ ಅಣೆಕಟ್ಟೆಗೆ ಭಿಮಾ ನದಿಯಿಂದ ನೀರು ತರುವ ಮಹತ್ವಾಕಾಂಕ್ಷಿಯ ಯೋಜನೆಗೆ ಬಿಆರ್ ಪಾಟೀಲ್ ಅವರು ತಮ್ಮ ಹಿಂದಿನ ಅವಧಿಯಲ್ಲಿ ಚಾಲನೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಯೋಜನೆಯು ಮಧ್ಯಂತರ ನಿರಾವರಿ ಯೋಜನೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿತ್ತು. ಆದಾಗ್ಯೂ, ಅನುದಾನದ ಕೊರತೆ, ಪ್ರಕೃತಿಯ ಅಡಚಣೆಗಳು ಮತ್ತು ಆಡಳಿತಾತ್ಮಕ ವಿಳಂಬದಿಂದ ಈ ಯೋಜನೆ ಕುಂಟುತ್ತಾ ಸಾಗುತ್ತಿದೆ. ಈ ಯೋಜನೆ ಕಾರ್ಯಗತಗೊಳಿಸುವಲ್ಲಿ ಶಾಸಕ ಬಿ.ಆರ್. ಪಾಟೀಲರು ಇನ್ನಷ್ಟು ಒತ್ತುಕೊಡಬೇಕಿದೆ.
ಕೆರೆಗಳ ನಿರ್ಮಾಣ: ಮಾತು ಮತ್ತು ಕಾರ್ಯ:
ಪಾಟೀಲ್ ಅವರು ಮುಂಬರುವ ರಾಜಬಜೇಟ್ ಅಧಿವೇಶನದಲ್ಲಿ ಸಿರಪೂರ ಮಾದರಿಯಲ್ಲಿ ಅಂತಜರ್ಲ ಕಾಮಗಾರಿಗೆ 200 ಕೋಟಿ ರೂಪಾಯಿ ಪ್ರಸ್ತಾಪ ಸಲ್ಲಿಸುವುದಾಗಿ ಘೋಷಿಸಿದರು. ಆದರೆ, ವಿರೋಧ ಪಕ್ಷಗಳು ಈ ಹಿಂದಿನ ಅವಧಿಯಲ್ಲಿ 400 ಕೆರೆಗಳು ತರಲಾಗುವುದು ಎಂದು ಹೇಳಿದರೂ, ಒಂದು ಕೆರೆ ಸಹ ನಿರ್ಮಾರ್ಣಗೊಳ್ಳದಿರುವುದಾಗಿ ಆರೋಪಿಸುತ್ತಿವೆ. ಇದು ಸ್ಥಳೀಯ ಜನತೆಯಲ್ಲಿ ಅಸಮಾಧಾನವನ್ನು ಉಂಟುಮಾಡಿದೆ.
ಶಾಸಕ ಬಿ.ಆರ್. ಪಾಟೀಲ್ ಅವರ ಮಹತ್ವಾಕಾಂಕ್ಷಿಯ ನೀರಾವರಿ ಯೋಜನೆಗಳು ಮತ್ತು ಕೆರೆಗಳ ನಿರ್ಮಾಣದ ಪ್ರಯತ್ನಗಳು ಸ್ಥಳೀಯ ಜನತೆಗೆ ಉಪಯುಕ್ತವಾಗುವಂತೆ ಮಾಡಬೇಕಾದ ಅಗತ್ಯತೆಯಿದೆ. ಸರಿಯಾದ ನಿರ್ವಹಣೆ, ಸಮಾಲೋಚನೆ ಮತ್ತು ಅನುದಾನಾತ್ಮಕ ಬಲವರ್ಧನೆ ಮೂಲಕ ಈ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರಿ ಅನುಷ್ಠಾನಕ್ಕೆ ಶಾಸಕರು ಮುಂದಾಗಬೇಕಾಗಿದೆ.
ನೀರಾವರಿ ಯೋಜನೆಗಳು ಮತ್ತು ಕೆರೆಗಳ ನಿರ್ಮಾಣಕ್ಕೆ ಸರಿಯಾದ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ, ನೆಲದ ನೀರಿನ ಸಂಪತ್ತನ್ನು ಹೆಚ್ಚಿಸಲು, ಕೃಷಿಕರ ಜೀವನಮಟ್ಟವನ್ನು ಸುಧಾರಿಸಲು, ಮತ್ತು ಆರ್ಥಿಕ ಪ್ರಗತಿಯನ್ನು ತ್ವರಿತಗೊಳಿಸಲು ಸಾಧ್ಯವಾಗುತ್ತದೆ. ಬಿಆರ್ ಪಾಟೀಲ್ ಮತ್ತು ಅವರ ಸರ್ಕಾರವು ಈ ನಿಟ್ಟಿನಲ್ಲಿ ತ್ವರಿತ ಕ್ರಮಗಳನ್ನು ಕೈಗೆತ್ತಿಕೊಂಡಲ್ಲಿ, ಸ್ಥಳೀಯ ಜನಾಂಗದ ಆಸ್ಥೆ ಮತ್ತೆ ಗಳಿಸುವುದರಲ್ಲಿ ಯಶಸ್ವಿಯಾಗಬಹುದು.
ಬಿಆರ್ ಪಾಟೀಲ್ ಅವರ ಅಮರ್ಜಾ ಅಣೆಕಟ್ಟೆ ಯೋಜನೆ ಮತ್ತು ಕೆರೆಗಳ ನಿರ್ಮಾಣದ ಪ್ರಯತ್ನಗಳು ಪ್ರತಿಷ್ಟಿತವಾದವು. ಆದರೆ, ಈ ಯೋಜನೆಗಳಲ್ಲಿ ಹಿನ್ನಡೆಯಾಗಿರುವುದು ಒಂದು ಆತಂಕಕಾರಿಯ ಸಂಗತಿ. ಸರಿಯಾದ ನಿರ್ವಹಣೆ, ಸಮಾಲೋಚನೆ ಮತ್ತು ಅನುದಾನಾತ್ಮಕ ಬಲವರ್ಧನೆ ಮೂಲಕ ಈ ಯೋಜನೆಗಳು ಯಶಸ್ವಿಯಾಗುವ ನಿರೀಕ್ಷೆಯಿದೆ. ಮುಂಬರುವ ದಿನಗಳಲ್ಲಿ, ಈ ಯೋಜನೆಗಳು ಸಮರ್ಪಕವಾಗಿ ಮುನ್ನಡೆಸುವ ಮೂಲಕ, ಸ್ಥಳೀಯ ಪ್ರದೇಶದ ಕೃಷಿಕರಿಗೆ ಹಾಗೂ ಸಮುದಾಯಕ್ಕೆ ಉತ್ತಮ ಫಲಿತಾಂಶಗಳನ್ನು ತರುವಂತೆ ಮಾಡಲಿ ಎಂದು ರೈತಾಪಿ ಜನರು ಆಗ್ರಹವಾಗಿದೆ.
ಅಂರ್ತಜಲ ವೃದ್ಧಿಗೆ 200 ಕೋಟಿ ಪ್ರಸ್ತಾಪಿಸುವೆ:
ಕೆರೆಗಳ ನಿರ್ಮಾಣಕ್ಕೆ ರೈತರಿಂದ ನಿರೀಕ್ಷಿತ ಒಪ್ಪಿಗೆ ಸಿಗುತ್ತಿಲ್ಲ. ಹೀಗಾಗಿ ನೀರಿನ ಹಳ್ಳಗಳಿಗೆ ಅಗತ್ಯವಿರುವ ಕಡೆ ಸಿರಪೂರ ಮಾದರಿಯಲ್ಲಿ ಅಂತಜರ್ಲ ವೃದ್ಧಿಗೆ ಹಳ್ಳಗಳಿಗೆ ಗೋಕಟ್ಟೆ, ಚೆಕ್‍ಡ್ಯಾಂ ಹೂಳೆತ್ತುವ ಕಾಮಗಾರಿಗೆ 200 ಕೋಟಿ ಹಣ ನೀಡುವಂತೆ ಬರುವ ಬಜೆಟ್ ಅಧೀವೇಶನದಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಭೀಮಾನದಿಯಿಂದ ಅಮರ್ಜಾ ಅಣೆಕಟ್ಟೆಗೆ ನೀರು ತರುವ ಕಾಮಗಾರಿ ಬರುವ ಆರು ತಿಂಗಳಲ್ಲಿ ಮುಗಿಸುವಂತೆ ಸೂಚಿಸಲಾಗಿದೆ. ಇದರಿಂದ ರೈತರಿಗೆ ಮತ್ತು ಕುಡಿಯುವ ನೀರಿನ ಅನುಕೂಲವಾಗಲಿದೆ.
ಬಿ.ಆರ್. ಪಾಟೀಲ ಸಿಎಂ ಸಲಹೆಗಾರರು, ಶಾಸಕರು ಆಳಂದ.
ಶೇ 70ರಷ್ಟು ಕಾಮಗಾರಿ ಮುಗಿದಿದೆ. ಇನ್ನೂ ಶೇ 25ರಷ್ಟು ಕಾಮಗಾರಿ ಆರು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ.
ಸಂತೋಷಕುಮಾರ ಸಜ್ಜನ್ ಎಇಇ ಮಧ್ಯಮ ನೀರಾವರಿ ನಿಗಮ ಅಫಜಲಪೂರ