ಹೊಣೆಗಾರಿಕೆ ಹೊರೆಯಲ್ಲ ಜವಾಬ್ದಾರಿ: ಸುಭಾಷ್ ಗುತ್ತೇದಾರ
ಆಳಂದ:ಜೂ.30:ಹೊಣೆಗಾರಿಕೆ ಎನ್ನವುದು ಅತ್ಯಂತ ಮಹತ್ವದ ಜವಾಬ್ದಾರಿಯಾಗಿದ್ದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ನಾಯಕರಾಗಿ ಹೊರಹೊಮ್ಮಬೇಕು ಎಂದು ಆಳಂದ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶನಿವಾರ ಆಳಂದ ಪಟ್ಟಣದ ಎಸ್‍ಆರ್‍ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ಎಸ್‍ಆರ್‍ಜಿ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹೊಣೆಗಾರಿಕೆ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ಮಕ್ಕಳಿಗೆ ಕೇವಲ ಪುಸ್ತಕ ಓದು ನೀಡುವುದμÉ್ಟೀ ನಮ್ಮ ಕರ್ತವ್ಯವಾಗಬಾರದು. ಅವರಿಗೆ ಹೊಣೆಗಾರಿಕೆ ನಿಭಾಯಿಸುವ ಮತ್ತು ನಾಯಕತ್ವದ ಗುಣ ಪರಿಚಯಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಪ್ರಾಮಾಣಿಕತೆ, ಅಧಿಕಾರ ನೀಡುವ ಸಾಮಥ್ರ್ಯ, ಸಂವಹನ, ದೃಢ ವಿಶ್ವಾಸ, ನಂಬಿಕೆ ಧೈರ್ಯ ಮತ್ತು ತಾಳ್ಮೆ, ಔದಾರ್ಯತೆ ನಿರ್ವಹಣಾ ಕಲೆ, ಸಕಾರಾತ್ಮಕ ಭಾವನೆ ಉತ್ತಮ ನಾಯಕತ್ವದ ಗುಣಗಳಾಗಿವೆ ಅವುಗಳನ್ನು ಬೆಳಸಿಕೊಳ್ಳಲು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು.
ಮಕ್ಕಳಿಗೆ ಯಾರೂ ಮಾರ್ಗದರ್ಶಿಯರು ಎನ್ನುವುದು ಈಗ ತುಂಬಾ ಮುಖ್ಯವಾಗಿದೆ. ಬಹುತೇಕ ಸಿನೆಮಾ ಹೀರೋಗಳು, ಸ್ಪೋರ್ಟ್ ಸೇರಿದಂತೆ ಇತರೆ ವಲಯದಲ್ಲಿನ ಸಾಧಕರು ಹೀರೋಗಳಾಗುತ್ತಿದ್ದಾರೆ. ಅವರನ್ನು ದೊಡ್ಡ ಮಟ್ಟದಲ್ಲಿ ಫಾಲೋ ಮಾಡಲಾಗುತ್ತಿದೆ. ಆದರೆ, ವಾಸ್ತವದಲ್ಲಿನಮ್ಮ ಜೀವನ ಸದೃಢವಾಗಿರಲಿ, ಶಿಕ್ಷಣವಂತರಾಗಲಿ, ದೊಡ್ಡ ನೌಕರಿಗಳನ್ನು ಸಂಪಾದಿಸಿ ಸುಖವಾಗಿರಲಿ ಎಂದು ಅನುದಿನ ಹಾರೈಸುವ ಅಪ್ಪ ಅಮ್ಮ ನಮಗೆ ನಿಜವಾದ ಹೀರೋ, ಅವರನ್ನೇ ನಾವು ಫಾಲೋ ಮಾಡಬೇಕಿದೆ. ಉಳಿದೆಲ್ಲರೂ ನಮ್ಮ ಮನೋರಂಜಕರು ಎಂದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ ಮಾತನಾಡಿ, ಇಂದಿನ ಮಕ್ಕಳಲ್ಲಿ ನಾಯಕತ್ವ ಗುಣ ಹುಟ್ಟಿನಿಂದಲೇ ಬರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ನಡೆದು ಹೋಗಲು ಶಿಕ್ಷಕರು ಮತ್ತು ಪಾಲಕರು ಮಾರ್ಗದರ್ಶನ ಮಾಡಬೇಕು ಎಂದರು.
ಯೋಗ ತರಬೇತುದಾರ ದತ್ತಾತ್ರೇಯ ಬಿರಾದಾರ ಯೋಗ ಮತ್ತು ಪ್ರಾಣಾಯಾಮದ ಮಹತ್ವ ಬಗ್ಗೆ ತಿಳಿ ಹೇಳಿ ಯೋಗ ಪ್ರಸ್ತುತ ಪಡಿಸಿದರು.
ವೇದಿಕೆಯ ಮೇಲೆ ಶಾಲೆಯ ಪ್ರಾಚಾರ್ಯೆ ಜ್ಯೋತಿ ವಿಶಾಖ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.