ಶಾಸಕರಿಂದ ರೈತರಿಗೆ ಬಿತ್ತನೆ ಬೀಜ ವಿತರಣೆ
ಅಫಜಲಪುರ: ಜೂ.30:2024-25 ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ (ಮಿಷನ್) ಯೋಜನೆಯಡಿ ತಾಲೂಕಿನ ಬಿದನೂರ ಗ್ರಾಮದಲ್ಲಿ ಶಾಸಕ ಎಂ.ವೈ.ಪಾಟೀಲ ರವರು ಗ್ರಾಮದ ರೈತರಿಗೆ ಉಚಿತವಾಗಿ ಪ್ರಾತ್ಯಕ್ಷಿಕೆಗಾಗಿ ತೊಗರಿ, ಹೆಸರು ಮತ್ತು ಉದ್ದು ಬೀಜಗಳನ್ನು ವಿತರಣೆ ಮಾಡಿ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು, ಜಿಲ್ಲಾ ರೈತ ಸಂಘದ ಅಧ್ಯಕ್ಷ ಶರಣಪ್ಪ ಜಂಬಳಿ, ಮುಖಂಡ ಸಿದ್ದು ಸಿರಸಿಗಿ, ರೈತ ಫಲಾನುಭವಿಗಳು ಸೇರಿದಂತೆ ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್.ಗಡಗಿಮನಿ, ಕೃಷಿ ಅಧಿಕಾರಿ ದಿವ್ಯಾ ಕರಜಗಿ, ಸೈಫನಸಾಬ ಮುಲ್ಲಾ, ಧರ್ಮಣ್ಣಾ ಹಾಜರಿದ್ದರು.