ಹಾವು ಕಚ್ಚಿ ಕೃಷಿ ಮಹಿಳೆ ಸಾವು
ವಾಡಿ:ಜೂ.30: ಚಿತ್ತಾಪುರ ತಾಲ್ಲೂಕಿನ ಸೂಗೂರ (ಎನ್) ಗ್ರಾಮದ ಮಹಿಳೆಯೊಬ್ಬರು ಶುಕ್ರವಾರ ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿದ ಪರಿಣಾಮ ಮಹಿಳೆ ಮೃತಪಟ್ಟಿದ್ದಾರೆ.
ಗ್ರಾಮದ ನಿವಾಸಿ ವಿಜಯಲಕ್ಷ್ಮಿ ಗಂಡ ವೀರಭದ್ರ ತೆಳಗೇರಿ (44) ಮೃತ ಮಹಿಳೆಯಾಗಿದ್ದು, ಕೆಲಸ ಮುಗಿಸಿಕೊಂಡು ಬರುವಾಗ ಹೊಲದಲ್ಲಿ ಹಾವು ಕಚ್ಚಿದೆ.
ವಾಡಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತ ಮಹಿಳೆಗೆ ಪತಿ, ಮೂರು ಜನ ಪುತ್ರರು ಹಾಗ ಓರ್ವ ಪುತ್ರಿ ಇದ್ದಾರೆ. ಈ ಕುರಿತು ವಾಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.