ಟಾಸ್ಕ್ ಫೋರ್ಸ್ ಸೇವೆಗೆ ಧನ್ಯವಾದ
ಕೆ.ಆರ್.ಪುರ,ಜೂ.೩೦- ಕಳೆದ ೪ ವರ್ಷಗಳ ಅವಧಿಯಲ್ಲಿ ಟಾಸ್ಕ್ ಫೋರ್ಸ್‌ನ ಸದಸ್ಯರಾಗಿ, ಉಪ ಸಮಿತಿಗಳ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಎಲ್ಲಾ ಸ್ವಯಂಸೇವಕರಿಗೆ, ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ವೈಯುಕ್ತಿಕವಾಗಿ ಮತ್ತು ಟಾಸ್ಕ್ ಫೋರ್ಸ್ ಪರವಾಗಿ ಮಾಜಿ ಸಚಿವ ಅರವಿಂದಲಿಂಬಾವಳಿ ಅವರು ಧನ್ಯವಾದಗಳನ್ನು ಸಲ್ಲಿಸಿದರು.
ಮಹದೇವಪುರ ಕ್ಷೇತ್ರದ ಕಾಡುಬೀಸನಹಳ್ಳಿಯ ನ್ಯೂ ಹಾರಿಜನ್ ಕಾಲೇಜಿನಲ್ಲಿ ನಡೆದ ಮಹದೇವಪುರ ಟಾಸ್ಕ್ ಫೋರ್ಸ್ ಸಾರ್ವಜನಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,
ತಮ್ಮೆಲ್ಲರ ಶ್ರಮದಿಂದಾಗಿ ಮಹದೇವಪುರ ಬದಲಾಗುತ್ತಿದೆ. ಯೋಚನೆ ನನ್ನದಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ತಮ್ಮೆಲ್ಲರ ಸಹಕಾರ ದೊರೆತಿದ್ದು, ಆ ಕಾರಣಕ್ಕೆ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದರು.
ಎಲ್ಲಾ ಸ್ವಯಂಸೇವಕರು ಮಹದೇವಪುರ ವಿಧಾನಸಭಾ ಕ್ಷೇತ್ರದಾದ್ಯಂತ ಯಾವುದಾದರೂ ಒಂದು ಟಾಸ್ಕ್ ಫೋರ್ಸ್‌ನಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ನೂತನವಾಗಿ ಸೇರ್ಪಡೆಗೊಂಡ ಸ್ವಯಂಸೇವಕರಿಗೆ ತಿಳಿಸಿದರು. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ೧೫ ವರ್ಷದಿಂದ ಹಾಗೂ ನನ್ನ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಕಳೆದ ೧ ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷಗಳಿಂದ ಟಾಸ್ಕ್ ಫೋರ್ಸ್ ನ ಅನೇಕ ಕೆಲಸಗಳು ಬಾಕಿ ಉಳಿದಿತ್ತು, ಹಾಗಾಗಿ ನೂತನ ಸಮಿತಿಯನ್ನು ರಚಿಸಿರಲಿಲ್ಲ ಇನ್ನೂ ಅನೇಕಾರು ಕೆಲಸಗಳು ಬಾಕಿ ಉಳಿದಿದ್ದು, ಅವುಗಳ ಕೆಲಸಗಳು ಭರದಿಂದ ಸಾಗುತ್ತಿದೆ. ಸ್ವಯಂಸೇವಕರು ತಮ್ಮ ಟಾಸ್ಕ್ ಫೋರ್ಸ್‌ನಲ್ಲಿ ಏನೇ ಸಮಸ್ಯೆಗಳು ಬಂದರೂ ಅದನ್ನು ಆಯಾ ಟಾಸ್ಕ್ ಫೋರ್ಸ್ ಅಧ್ಯಕ್ಷರು ಅಥವಾ ಉಪಾಧ್ಯಕ್ಷರ ಮೂಲಕ ಅಧಿಕಾರಿಗಳ ಗಮನಕ್ಕೆ ತರಬೇಕು, ಶಕ್ತಿಕೇಂದ್ರದ, ಖWಂ ಮೂಲಕ ವಾರ್ಡ್‌ಗೆ ಮತ್ತು ಅಲ್ಲಿಂದ ಟಾಸ್ಕ್ ಫೋರ್ಸ್ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಅಧಿಕಾರಿಗಳು ನಮ್ಮ ಅಡಿಯಾಳಲ್ಲ, ನಾವು ಅಧಿಕಾರಿಗಳಿಗೆ ಸಹಾಯಕವಾಗಿ ಕೆಲಸ ಮಾಡಬೇಕು. ನಾವೆಲ್ಲರೂ ಸೇರಿ ಯಶಸ್ವಿಯಾಗಿ ಕೆಲಸ ಮಾಡೋಣ ಎಂದರು
ಈ ಸಂದರ್ಭದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಕೆ. ಸಿ. ರಾಮಮೂರ್ತಿ, ಕುಪೇಂದ್ರ ರೆಡ್ಡಿ, ಮಂಡಲ ಅಧ್ಯಕ್ಷರಾದ ಮನೋಹರರೆಡ್ಡಿ,ನಟರಾಜ್,ಮಾಜಿ ಅಧ್ಯಕ್ಷ ವೆಂಕಟಸ್ವಾಮಿ ರೆಡ್ಡಿ,
ಮಾಜಿ ಪಾಲಿಕೆ ಸದಸ್ಯ ಶ್ರೀಧರ ರೆಡ್ಡಿ,ನಗರಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಮೋದಿ,ಮಂಡಲ
ಪ್ರಧಾನ ಕಾರ್ಯದರ್ಶಿ ಎಲ್.ರಾಜೇಶ್,ಕೆ.ವಿ.ನಾಗರಾಜ್ ಇದ್ದರು.