ಕೆ.ಕಲ್ಲಹಳ್ಳಿಯಲ್ಲಿ ನೂತನ ಭಾರತ್ ಸೇವಾ ಕೇಂದ್ರ ಉದ್ಘಾಟನೆ
ಸಂಜೆವಾಣಿ ವಾರ್ತೆ
ಹರಪನಹಳ್ಳಿಸ ಜೂ.30: ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ 2022-23 ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾದ ನೂತನ ಭಾರತ್ ನಿರ್ಮಾಣ ಸೇವಾ ಕೇಂದ್ರ(ಗ್ರಾ.ಪಂ) ಕಟ್ಟಡವನ್ನು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಶನಿವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ನರೇಗಾ ಯೋಜನೆಯಡಿ 35.50 ಲಕ್ಷ.ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಗ್ರಾ.ಪಂ ಕಟ್ಟಡವನ್ನು ನಿಮ್ಮ ಮನೆಯಂತೆ ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಸಿಬ್ಬಂದಿಗೆ ಸಲಹೆ ನೀಡಿದರು.
ಕೆಲಸ ನಿಮಿತ್ತ ಗ್ರಾ.ಪಂಗೆ ಬರುವ ಸಾರ್ವಜನಿಕರನ್ನು ಅನಗತ್ಯ ಕಾಯಿಸದೇ ಸಮಾಧಾನದಿಂದ ಮಾತನಾಡಿಸಿ ಅವರ ಕೆಲಸವನ್ನು ತಕ್ಷಣ ಮಾಡಿಕೊಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ತಿಪ್ಪಿಗುಂಡಿ ಹೊನ್ನಮ್ಮ ಕರಿಯಪ್ಪ, ಉಪಾಧ್ಯಕ್ಷೆ ದುರುಗಮ್ಮ ಭೋವಿ ಹನುಮಂತಪ್ಪ, ಸದಸ್ಯರಾದ ಕಟ್ಟಾಣಿ ಪುಷ್ಪಾವತಿ ರಾಜಪ್ಪ, ಎಂ.ನಾಗೇಂದ್ರಪ್ಪ, ದಾಸರ ದ್ಯಾಮಪ್ಪ, ಆಶಾ ಕರಿಬಸಪ್ಪ, ಅರಸನಾಳು ನಿಂಗಪ್ಪ, ಬಿ.ಸುಗಂಧಮ್ಮ ರೇವಣಸಿದ್ದಪ್ಪ, ಕೆ.ಬಿ.ಯಲ್ಲಪ್ಪ, ನೇತ್ರಾವತಿ ವಿರೂಪಾಕ್ಷಪ್ಪ, ಹರಪನಹಳ್ಳಿ ಚೌಡಮ್ಮ ನಾಗಪ್ಪ, ನೀಲಮ್ಮ ಕಮ್ಮತ್ ನಿಂಗಪ್ಪ, ಡೊಂಬಳ ಬಸವರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ತಾ.ಪಂ.ಇಒ ಚಂದ್ರಶೇಖರ್ ವೈ.ಎಚ್., ಎಇಇ ನಾಗಪ್ಪ, ತಾ.ಪಂ ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ, ಪಿಡಿಒ ಕೆ.ಆನಂದನಾಯ್ಕ್, ತಾಂತ್ರಿಕ ಸಹಾಯಕ ಅಭಿಯಂತರ ಮಲ್ಲೇಶನಾಯ್ಕ್, ನಾಗರಾಜ್‍ನಾಯ್ಕ್, ಹೊಸಗೆರಪ್ಪ ಸೇರಿದಂತೆ ಗ್ರಾ.ಪಂ ಸಿಬ್ಬಂದಿ, ಮುಖಂಡರು, ಗ್ರಾಮಸ್ಥರು ಇದ್ದರು.