ವೀರಬೀರೇಶ್ವರ ಅಂಕಿತದಲ್ಲಿ ಸಾಹಿತ್ಯವನ್ನು ಬರೆದವರು ವೀರಗೊಲ್ಲಾಳರು
ಸಂಜೆವಾಣಿ ವಾರ್ತೆ
ಸಂಡೂರು: ಜೂ: 30 ವೀರಬೀರೇಸ್ವರ ಅಂಕಿತದಲ್ಲಿ 10 ವಚನಗಳಿಂದ ಸಾಹಿತ್ಯವನ್ನು ಬರೆದವರು ವೀರಗೊಲ್ಲಾರು, ಕುರುಬ ಸಮಾಜದವರಾದ ಶರಣರು ಕುರುಬ ಕಾಯಕದ ವಿವರಗಳನ್ನು ದಟ್ಟವಾಗಿ ತಿಳಿಸಿದ್ದಾರೆ. ಇವರ ವಚನಗಳಲ್ಲಿ ಆಡು, ಕುರಿ, ಹೋತಗಳ ಉಲ್ಲೇಖಗಳನ್ನು ಮೇಲಿಂದ ಮೇಲೆ ವಿವರಿಸಿದ್ದಾರೆ, ವೀರಗೊಲ್ಲಾಳರದು ಅಲ್ಲಮ ಪ್ರಭುಗಳ ವಚನದಂತೆ ಬೆಡಗಿನ ವಚನಗಳಾಗಿವೆ. ಮುಗ್ದ ಭಕ್ತರಾದವರು ತಮ್ಮ ಸರಳ ನಡೆ ನುಡಿಗಳಿಂದ ಜನಸಾಮಾನ್ಯರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಕಾವ್ಯ ಸ್ಥಳ ಪುರಾಣ ಇತಿಹಾಸದ ಪ್ರಕಾರ 12ನೇ ಶತಮಾನದಲ್ಲಿ ಆರಂಭಗೊಂಡ ಬಸವಣ್ಣನವರ ಸಾಮಾಜಿಕ ಚಳುವಳಿಯಿಂದ ಪ್ರೇರಣೆಗೊಂಡ ಹಲವಾರು ಶರಣರು ಪಟ್ಟಣದ, ಗ್ರಾಮೀಣಭಾಗದ ಹಲವಾರು ಕಡೆ ಸಂಚರಿಸಿ ಪ್ರಚಾರ ಮಾಡುತ್ತಾ ಗೊಲ್ಲಗೇರಿಗೆ ಬಂದಾಗ ಕುರಿ ಮೇಯಿಸುತ್ತಿರುವಾಗ ಮಾರ್ಗಮಧ್ಯದಲ್ಲಿ ಶರಣರನ್ನು ಭೇಟಿ ಮಾಡಿ ಬಸವಣ್ಣನವರ ಬಗ್ಗೆ ಇಷ್ಠಲಿಂಗ ಕುತೂಹಲದಿಂದ ತಿಳಿದುಕೊಂಡು ತಮಗೆ ಇಷ್ಠಲಿಂಗ ದೀಕ್ಷೆಗೆ ಒತ್ತಾಯಿಸಿದರು ಎಂದು ಸಂಡೂರು ತಾಲೂಕು ಘಟಕದ ಕದಳಿವೇದಿಕೆಯ ಅಧ್ಯಕ್ಷೆ ಕುಸುಮಾ ಹಿರೇಮಠರವರು ತಿಳಿಸಿದರು.
ಅವರು ಮುಖ್ಯ ಬೀದಿಯಲ್ಲಿನ ಶಿಕ್ಷಕಿ ಅಯಿಕಲ್ ಸಾವಿತ್ರಮ್ಮನವರ ಮನೆಯಲ್ಲಿ ಕದಳಿ ಮಹಿಳಾ ವೇದಿಕೆಯಿಂದ ಪ್ರಥಮ ಮಹಾಮನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಅವರು ಮುಂದುವರೆದು ವೀರಗೊಲ್ಲಾಳ ಶರಣರ ನಿಷ್ಠೆಯನ್ನು ಪರೀಕ್ಷಿಸಲು ಶ್ರೀಶೈಲಕ್ಕೆ ಹೋಗುತ್ತಿರುವುದಾಗಿ ಅಲ್ಲಿಂದ ಹಿಂದುರುಗಿ ಬರುವಾಗ ಇಷ್ಟಲಿಂಗ ನೀಡುತ್ತೇವೆ ಎಂದು ವೀರಗೊಲ್ಲಾಳನಿಗೆ ತಿಳಿಸಿಹೋದರು. ಶರಣರು ಬರುವ ದಾರಿಯನ್ನೇ ಬರುವವರೆಗೆ ಕಾಯ್ದು ಶರಣರು ಬಂದನಂತರ ಕುರಿಯ ಹಿಕ್ಕಿಯನ್ನೇ ಲಿಂಗವೆಂದು ನೀಡಿ ಹೋದರು. ಅದನ್ನೇ ಇಷ್ಠಲಿಂಗವೆಂದು ಪೂಜಿಸಿದ ಮಹತ್ವವನ್ನು ಅರಿತರೆಂದು ತಿಳಿದು ಬರುತ್ತದೆ, ಅಲ್ಲಿನ ಜನರು ಅದಕ್ಕೆ ಗುಡಿ ನಿರ್ಮಿಸಿ ಪೂಜೆ ಸಲ್ಲಿಸುತ್ತಾ ಬಂದಿದ್ದು ಪ್ರತಿ ವರ್ಷ ಜಾತ್ರೆ ನಡೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಮಿತ್ರಾ ಮತ್ತು ಸೌಮ್ಯ ವಚನ ಪಠಣ ಮಾಡಿದರು, ನಳೀನಿ ಪ್ರದೀಪ್ ಕುಮಾರ ಕದಳಿವೇದಿಕೆ ಮಹಿಳಾ ಘಟಕದ ಕಾರ್ಯದರ್ಶಿ ನಿರೂಪಿಸಿದರು, ವಿ.ಎಂ. ವಿಜಯಲಕ್ಷ್ಮೀ ಸ್ವಾಗತಿಸಿದರು, ಅಯಕಲ್ ಸಾವಿತ್ರಮ್ಮ ವಂದಿಸಿದರು, ಕದಳಿವೇದಿಕೆ ಜಿಲ್ಲಾಧಯಕ್ಷೆ ನೀಲಾಂಬಿಕೆ ಹೊಸಪೇಟೆ ತಾಲೂಕು ಅಧ್ಯಕ್ಷೆ ಹಚ್.ಸೌಭಾಗ್ಯಲಕ್ಷ್ಮೀ ಹೊಸಪೇಟೆ ಸದಸ್ಯೆ ನಾಗವೇಣಿ ಶಿವಲೀಲಾ ಪುಷ್ಟಾ, ಮಂಜುಳಾ ಅಯಿಕಲ್, ಸೂಜಾತ, ಶಾಂತಮ್ಮ ಹಿರೇಮಠ, ಎಸ್.ಡಿ. ಪ್ರೇಮಲೀಲಾ ಅಲ್ಲದೆ ನೂರಾರು ಮಹಿಲೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹೊಸಪೇಟೆ ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೆಚ್. ಸೌಭಾಗ್ಯಲಕ್ಷ್ಮೀ ಕದಳಿವೇದಿಕೆಯ ಯೋಜನೆಗಳ ರೂಪರೇಷಗಳನ್ನು ವಿವರಿಸಿದರು.