ತಹಶೀಲ್ದಾರ ತಂಡದಿಂದ ಹಠಾತ್ ದಾಳಿ ಅಕ್ರಮ ತಂಬಾಕು ಮಾರಾಟ ಪತ್ತೆ ದಂಡಾವಸೂಲಿ
ಸಂಜೆವಾಣಿ ವಾರ್ತೆ
ಸಂಡೂರು: ಜು: 30  ಬಹಳಷ್ಟು ಅಂಗಡಿಗಳಲ್ಲಿ ಅಕ್ರಮವಾಗಿ ತಂಬಾಕು ಮಾರಾಟ ಮತ್ತು ಬಾಲಕಾರ್ಮಿಕರನ್ನು ಬಳಕೆ ಮಾಡುತ್ತಿರುವುದು ಕಂಡು ಬಂದಿದ್ದು ಅದಕ್ಕಾಗಿ ಹಠಾತ್ ದಾಳಿಯನ್ನು ನಡೆಸುವ ಮೂಲಕ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಅನಿಲ್‍ಕುಮಾರ್.ಜಿ. ತಿಳಿಸಿದರು.
ಅವರು ಪಟ್ಟಣದ ಪಾನ್ ಶಾಪ್, ಹೋಟಲ್, ಗ್ಯಾರೇಜ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು, ಕಡ್ಡಾಯವಾಗಿ ಧೂಮಪಾನ ಸಾರ್ವಜನಿಕವಾಗಿ ಮಾಡಬಾರದು ಎನ್ನುವ ಬೋರ್ಡ್‍ಗಳನ್ನು ಹಾಕಿರುವುದನ್ನು, ಬಾಲಕಾರ್ಮಿಕರ ಜಾಗೃತಿಯ ಬಗ್ಗೆ ಇಲಾಖೆಯ ಅಡಿಯಲ್ಲಿ ಬರುವ ಶಿಕ್ಷೆಯ ಬಗ್ಗೆ ದಾಳಿಯ ಸಮಯದಲ್ಲಿ ಹೋಟಲ್ ಹಾಗೂ ಗ್ಯಾರೇಜ್ ಮಾಲೀಕರಿಗೆ ಎಚ್ಚರಿಕೆ ನಿಡಿದರು. ಅಲ್ಲದೆ ಬಾಲ ಮತ್ತು ಕಿಶೋರ ಕಾರ್ಮಿಕ ಕಾಯ್ದೆ ಅಡಿಯಲ್ಲಿ 1986ರ ತಿದ್ದು ಪಡಿ ಕಾಯ್ದೆ ಅನ್ವಯ 2016ರ ಅನ್ವಯ ಕಂದಾಯ ಇಲಾಖೆ, ಸಮಾಜದ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಒಟ್ಟು 11 ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಯಾವುದೇ ರೀತಿಯಲ್ಲಿ ಮಕ್ಕಳು ಕಾರ್ಮಿಕರಾಗದಂತೆ ತಡೆಯಬೇಕು ಎಂದರು, ಅಲ್ಲದೆ ದುಶ್ಚಟಗಳಿಗೆ ದಾಸರಾಗುತ್ತಿದ್ದು ಯುವ ಪೀಳಿಗೆ ದಾರಿತಪ್ಪುತ್ತಿದ್ದು ಅದನ್ನು ತಡೆಯುವ ನಿಟ್ಟಿನಲ್ಲಿ ಕಡ್ಡಾಯವಾಗಿ ಶಾಲಾ ಅವರಣಗಳಲ್ಲಿ ಸೂಚನಾ ಫಲಕ ಅಳವಡಿಕೆ ಮತ್ತು ಪೋಲಿಸ್ ಇಲಾಖೆಯಿಂದ ಜಾಗೃತಿ ಮೂಡಿಸುವ ಮೂಲಕ ಶ್ರಮಿಸಬೇಕು ಎಂದು ದಾಳಿಯ ಪೂರ್ವದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಪಟ್ಟಣದಲ್ಲಿ 14 ಅಂಗಡಿಗಳ ಮೇಲೆ ದಾಳಿಯನ್ನು ನಡೆಸಿದರು, ವಿವಿಧ ರೀತಿಯ ಕಾನೂನು ಉಲ್ಲಂಘನೆ ಮಾಡಿದ ಅಂಗಡಿಗಳ ಮೇಲೆ 3400 ರೂಪಾಯಿಗಳ ದಂಡ ವನ್ನು ವಿಧಿಸಿದರು, ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಕೆ.ಜಯಣ್ಣ, ಕಾರ್ಮಿಕ ನಿರೀಕ್ಷಕರಾದ ಮಂಜುನಾಥ, ಕಾರ್ಮಿಕ ಸೋಸೈಟಿಯ ಯೋಜನಾ ನಿರ್ದೇಶಕರಾದ ಮೌನೇಶ್. ಹಿಂದುಳಿದ ವರ್ಗಗಳ ಅಧಿಕಾರಿ ಕೊಟ್ರೇಶ್, ಮಕ್ಕಳ ರಕ್ಷಣಾ ಘಟಕದ ಇಲಾಖೆ ಅಧಿಕರಿಗಳು, ವೈದ್ಯರಾದ ಡಾ. ಭರತ ರಡ್ಡಿ ಇತರರು, ಪಟ್ಟಣದ ಕೆ.ಕೆ. ಹೋಟಲ್, ಟೀಸ್ಟಾಲ್‍ಗಳಿಗೆ, ಗ್ಯಾರೇಜ್ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು.
ಪಟ್ಟಣದ ವಿವಿದ ಅಂಗಡಿ, ಹೋಟಲ್ ಮತ್ತು ಗ್ಯಾರೇಜ್‍ಗಳ ಮೇಲೆ ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ ಅಕ್ರಮ ತಂಬಾಕು ಮಾರಟ, ನಿಯಮ ಉಲ್ಲಂಘನೆ ಕಂಡು ಬಂದು ಕೆಲವು ಅಂಗಡಿಗಳಿಗೆ ದಂಡವನ್ನು ವಿಧಿಸಿದರು.