ನಗರಸಭಾ ಸದಸ್ಯ ಟಿ.ಚಿದಾನಂದ ನಿಧನ.
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ30: ಹೊಸಪೇಟೆ ನಗರಸಭೆಯ ಮಾಜಿ ಸದಸ್ಯ ಹಾಲಿ ನಾಮನಿರ್ದೇಶನ ಸದಸ್ಯರಾಗಿದ್ದ ಟಿ.ಚಿದಾನಂದ(72) ರವರು ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ.
ಅತ್ಯಂತ ಕ್ರಿಯಾಶೀಲವಾಗಿ ನಿತ್ಯವೂ ನಗರ ಪ್ರದಕ್ಷಿಣೆಯೊಂದಿಗೆ ಜನ ಮಾನಸದಲ್ಲಿ ನೆಲೆಯೂರಿದ್ದ ಇವರು ಸತತ 5ಬಾರಿ ಸದಸ್ಯರಾಗಿ ಕಾರ್ಯನಿರ್ವಹಿದ್ದು ಈ ಭಾರಿ ನಾಮ ನಿರ್ದೇಶನ ದೊಂದಿಗೆ ಸೇವೆ ಸಲ್ಲಿಸುತ್ತಿದ್ದರು.
ಇಂದು ಬೆಳಿಗ್ಗೆ ದೀಡಿರ್ ಹೃದಯಾಘಾತದಿಂದ ಆಸ್ಪತ್ರೆಗೆ ಸಾಗಿಸುತ್ತದ್ದಂತೆ ವಿಧಿವಶವಾಗಿರುವ ಸುದ್ಧಿ ತಿಳಿದಿದೆ. ಅನೇಕ ಗಣ್ಯರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.