ಬಡವರ ಅನುಕೂಲಕ್ಕೆ 100 ಕಿ.ಮೀ ಆಂಬುಲೆನ್ಸ್ ಉಚಿತ ನೀಡಲು ಮನವಿ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜೂ.30 ಪಟ್ಟಣದ ಆಡಳಿತ ಸೌಧದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ಡಿಸಿ ಎಂ ಎಸ್ ದಿವಾಕರ್ ಇವರಿಗೆ  ಸರ್ಕಾರಿ ಆಂಬುಲೆನ್ಸ್ ಗಳನ್ನು ಬಡವರಿಗೆ 100 ಕಿಲೋಮಿಟರ್ ವ್ಯಾಪ್ತಿಯೊಳಗೆ ಸಂಪೂರ್ಣ ಉಚಿತ ನೀಡಲು ಮನವಿಯನ್ನು ನೀಡಲಾಯಿತು ಈ ಸಂದರ್ಭದಲ್ಲಿ ನಾಣಿಕೇರಿ ಭರಮಜ್ಜ ನಯಕ ಅಧ್ಯಕ್ಷರು. ಮತ್ತು ಗೌರವಾಧ್ಯಕ್ಷರು ಕನ್ನಳ್ಳಿ ಚಂದ್ರಶೇಖರ್. ಹಾಗೂ ಈಶ ಬೋವಿ. ನಸ್ರುಲ್ಲಾ ಕರಾಟೆ. ಹಾಗೂ ರಕ್ಷಣಾ ವೇದಿಕೆಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು