ಹಬೋಹಳ್ಳಿ : ಜಿಲ್ಲಾಧಿಕಾರಿಗಳಿಂದ  ಜನಸ್ಪಂದನ ಕಾರ್ಯಕ್ರಮ : 186 ಅರ್ಜಿ ಸಲ್ಲಿಕೆ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜೂ.30 ಪಟ್ಟಣದ ತಾಲೂಕ ಆಡಳಿತ ಸೌಧದಲ್ಲಿ ಶನಿವಾರ ಜಿಲ್ಲಾಧಿಕಾರಿಗಳಿಂದ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
 ಕಾರ್ಯಕ್ರಮವನ್ನು ಶಾಸಕ ಕೆ ನೇಮಿರಾಜ್ ನಾಯ್ಕ್ ಉದ್ಘಾಟಿಸಿ ಮಾತನಾಡಿದರು. ನಿಮ್ಮ ಸಮಸ್ಯೆ ಹೇಳಲು ಬಂದಾಗ ನೀವು ಕೈ ಕಟ್ಟಿ ನಿಲ್ಲಬಾರದು. ನೀವು ಯಾವುದೇ ಅಪರಾಧ ಮಾಡಿರುವುದಿಲ್ಲ. ನಿಮ್ಮ ಸಮಸ್ಯೆಯನ್ನು ಧೈರ್ಯವಾಗಿ ಕೇಳಿ ಹೆದರುವ ಅವಶ್ಯಕತೆ ಇಲ್ಲ
  ಬಡವರ ಮತ್ತು ದೀನದಲಿತರ ಸಮಸ್ಯೆಗಳಿಗೆ ಸ್ಪಂದಿಸಲು  ನಾನು ಯಾವಾಗಲೂ ಸಿದ್ದನಾಗಿದ್ದೇನೆ. ನೀವು ನನ್ನನ್ನು ಯಾವಾಗ ಬೇಕಾದರೂ ಬಂದು ಕಾಣಬಹುದು. ಎಂದರು.
 ಜಿಲ್ಲಾಧಿಕಾರಿಗಳಿಗೆ ಆಹವಾಲು ನೀಡಲು ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ನೂರಾರು ಜನರು ಅರ್ಜಿ ಸಲ್ಲಿಸಿದರು. ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ತೆಲುಗು ವಾದ್ಯಗಳನ್ನು ಸ್ಥಳದಲ್ಲಿಯೇ ಪರಿಹರಿಸಿದರು. ಕೆಲವು ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಿ ಕಾಲಾವಕಾಶ ನೀಡಲಾಯಿತು. ಒಟ್ಟು 186 ಅರ್ಜಿಗಳು ಸಲ್ಲಿಕೆಯಾಗಿದ್ದು 24 ಅರ್ಜಿಗಳು ಸ್ಥಳದಲ್ಲಿ ವಿಲೇವಾರಿ ಮಾಡಲಾಯಿತು. ಜೊತೆಗೆ ಅಹಿಂದ ವೇದಿಕೆಯ ಬುಡ್ಡಿ ಬಸವರಾಜ್ ನೇತೃತ್ವದಲ್ಲಿ ತಾಲೂಕ ಕೇಂದ್ರದಿಂದ ಸುತ್ತ 10 ಕಿ.ಮೀ ಹಸಿರು ವಲಯವಾಗಿ ಘೋಷಿಸಲು ಮನವಿ ಸಲ್ಲಿಸಲಾಯಿತು. ಸರ್ಕಾರಿ ಶಾಲೆಯ ನಿರ್ಮಾಣ ಕಟ್ಟಡ, ಚಿಲವಾರ ಬಂಡಿ ಏತ  ನೀರಾವರಿ ಯೋಜನೆ, ಅರಣ್ಯ ಇಲಾಖೆ ಕಚೇರಿ ಸ್ಥಾಪಿಸುವುದು, ರೈಲ್ವೆ ಗೇಟ್ ನಲ್ಲಿ ಪ್ಲೇ ಓವರ್ ನಿರ್ಮಿಸುವುದು, ಪುರಸಭೆ ವ್ಯಾಪ್ತಿಯಲ್ಲಿ ಡಬಲ್ ಟ್ಯಾಕ್ಸ್ ತೆಗೆದುಕೊಳ್ಳುವುದನ್ನು ತಡೆಯುವಂತೆ ಮನವಿ ಸಲ್ಲಿಸಿದರು ಹೀಗೆ ಹತ್ತಾರು ಸಮಸ್ಯೆಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.
 ಈ ಸಂದರ್ಭದಲ್ಲಿಜಿ ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು, ಉಪಯುಗ ಅಧಿಕಾರಿ ಅಲಿ ಅಕ್ರಮ್, ತಾ ಪಂ ಇ ಒ ಪರಮೇಶ್ವರಪ್ಪ, ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಇತರರಿದ್ದರು.