ಉಪವಿಭಾಗಾಧಿಕಾರಿಗೆ ಸ್ವಾಗತ
ಕೋಲಾರ,ಜೂ,೩೦- ಜಿಲ್ಲೆಯ ನೂತನ ಉಪವಿಭಾಗಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಡಾ.ಮೈತ್ರಿ.ಹೆಚ್.ಪಿಎಸ್ ಅವರನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಅಭಿನಂದಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಅಜಯ್‌ಕುಮಾರ್, ರಾಜ್ಯಪರಿಷತ್ ಸದಸ್ಯ ಗೌತಮ್, ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ, ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಎನ್.ಮಂಜುನಾಥ್, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಕೆಜಿಎಫ್ ತಾಲ್ಲೂಕುಅಧ್ಯಕ್ಷ ನರಸಿಂಹಮೂರ್ತಿ, ಜಂಟಿ ಕಾರ್ಯದರ್ಶಿ ಅಂಕಿಅಂಶಗಳ ಇಲಾಖೆಯ ರವಿ, ಬಂಗಾರಪೇಟೆ ತಹಸೀಲ್ದಾರ್ ರಶ್ಮಿ, ಸರ್ವೇ ಇಲಾಖೆಯ ರವಿ, ಮಲ್ಲೇಶ್, ಸುಭಾಷ್, ಕೆಜಿಎಫ್‌ನ ಉಮೇಶ್ ಮತ್ತಿತರರಿದ್ದರು.