ಮುಖಂಡರ ಸಮ್ಮುಖದಲ್ಲಿ ಬಿಜೆಪಿ ನಾಯಕರ ಜಟಾಪಟಿ
ಕೋಲಾರ,ಜೂ,೨೯-ಜಿಲ್ಲಾ ಆಡಳಿತಾಧಿಕಾರಿಗಳ ಕಚೇರಿಯ ಅವರಣದಲ್ಲಿ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ದ ಹಮ್ಮಿ ಕೊಂಡಿದ್ದ ಪ್ರತಿಭಟನೆಯ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಆರ್.ಆಶೋಕ್ ಸಮ್ಮುಖದಲ್ಲಿಯೇ ಬಿಜೆಪಿ ಪಕ್ಷದ ಎಸ್.ಸಿ. ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್.ಎನ್.ಹನುಮಂತಪ್ಪ ಮತ್ತು ಬಂಗಾರಪೇಟೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ನಡುವೆ ಜಟಾಪಟಿ ನಡೆಯುವ ಮೂಲಕ ಬಿಜೆಪಿ ನಾಯಕರಿಗೆ ಇರಿಸು ಮುರಿಸು ಉಂಟಾಯಿತು.
ಪ್ರತಿಭಟನೆಯಲ್ಲಿ ಮುಖಂಡರು ಬೆಲೆ ಏರಿಕೆ ಮಾಡಿರುವ ಕಾಂಗ್ರೇಸ್ ಸರ್ಕಾರದ ವಿರುದ್ದ ಮಾತನಾಡಿ ಮನವಿ ಪತ್ರವನ್ನು ಸಲ್ಲಿಸಿ ಹೊರ ಬರುವ ಸಂದರ್ಭದಲ್ಲಿ ಆರ್.ಆಶೋಕ ಅವರು ಮಾಧ್ಯಮದವರೊಂದಿಗೆ ಮಾತನಾಡಲು ಬರುವಾಗ ಅಶೋಕ್ ಅವರ ಜೂತೆಗೆ ಬರುವ ಅತುರದಲ್ಲಿ ತಳ್ಳಾಟ,ನೊಕಾಟ ನಡೆಯಿತು,
ಈ ಸಂದರ್ಭದಲ್ಲಿ ಹನುಮಂತಪ್ಪ ಅವರು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮೇಲೆ ಆಯಾ ತಪ್ಪಿ ಬಿದ್ದಾಗ ಕೆರಳಿದ ಎಂ.ನಾರಾಯಣಸ್ವಾಮಿ ಅವರು ನೇರವಾಗಿ ಹನುಮಂತಪ್ಪ ಅವರ ಎದೆಗೆ ಕೈ ಹಾಕಿ ಜೋರಾಗಿ ತಳ್ಳುವ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿದರು, ಇದರಿಂದ ಗಾಬರಿಗೊಂಡ ಹನುಮಂತಪ್ಪ ಅವರು ಗೊಂದಲಕ್ಕೆ ಒಳಗಾಗಿ ದೊರ ಸರಿದರು, ಇದನ್ನು ಗಮನಿಸುತ್ತಿದ್ದ ಹನುಮಂತಪ್ಪ ಅವರ ಗೆಳೆಯರು ಎಂ.ನಾರಾಯಣಸ್ವಾಮಿ ಅವರ ತಿರುಗಿ ಬಿದ್ದು ತರಾಟೆಗೆ ತೆಗೆದು ಕೊಂಡಾಗ ಮತ್ತೆ ನಾರಾಯಣಸ್ವಾಮಿ ಬೆಂಬಲಿಗರ ನಡುವೆ ತಳ್ಳಾಟ,ನೊಕಾಟಗಳು ನಡೆಯಿತು.
ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸಂಸದ ಎಸ್.ಮುನಿಸ್ವಾಮಿ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್ ಕೊಡಲೇ ಮಧ್ಯ ಪ್ರವೇಶಿಸಿ ಎರಡು ಗುಂಪುಗಳನ್ನು ಚೆದುರಿಸಿದ ಹಿನ್ನಲೆಯಲ್ಲಿ ಉಂಟಾಗ ಬಹುದಾಗಿದ್ದ ಘರ್ಷಣೆಯು ತಪ್ಪಿತು,
ಇದೆಲ್ಲಾ ಗಮನಿಸುತ್ತಿದ್ದ ವಿಪಕ್ಷದ ನಾಯಕ ಆರ್.ಆಶೋಕ್ ಎಲ್ಲವನ್ನು ನೋಡಿಯೂ ನೋಡದಂತೆ ಇದ್ದು ಮಾಧ್ಯಮದವರೊಂದಿಗೆ ಮಾತನಾಡಿದ ನಂತರ ಮುಖಂಡರೊಂದಿಗೆ ನಿರ್ಗಮಿಸಿದರು,