ವಂಚಿತ ಮಕ್ಕಳಿಗೆ ಅವಕಾಶ ನೀಡಿ – ಅಶ್ವಿನಿ
ಕೋಲಾರ,ಜೂ.೩೦- ಕುಟುಂಬದಿಂದ ಮತ್ತು ಅವಕಾಶಗಳಿಂದ ವಂಚಿತರಾಗಿರುವ ಮಕ್ಕಳಿಗೆ ಕುಟುಂಬದ ಅವಕಾಶಗಳನ್ನು ಕೊಡಿ ಎಂದು ಅಶ್ವಿನಿ ಸಿಎಂ ಕರೆ ನೀಡಿದರು.
ಪೋಷಕತ್ವ ಕಾರ್ಯಕ್ರಮದ ಕುರಿತು ಬುದ್ಧ ರೂರಲ್ ಡೆವಲಪ್ಮೆಂಟ್ ಸೊಸೈಟಿ ಕೋಲಾರ ಮತ್ತು ಬಾಸ್ಕೋ ಬೆಂಗಳೂರು ಇವರ ಸಹಯೋಗದೊಂದಿಗೆ ಕೋಲಾರ ತಾಲೂಕು ಊರಿಗಿಲಿ ಗ್ರಾಮ ಪಂಚಾಯತಿಯ ಗ್ರಾಮ ಪಂಚಾಯತಿ ಸದಸ್ಯರಿಗೆ ಮತ್ತು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಏರ್ಪಡಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ಅನೇಕ ಮಕ್ಕಳು ಪರಿವಾರದಿಂದ ಅಂದರೆ ಕುಟುಂಬದಿಂದ ವಂಚಿತರಾಗಿದ್ದಾರೆ ಅನಾಥ ಮಕ್ಕಳಾಗಿದ್ದಾರೆ ಅವರಿಗೆ ಕುಟುಂಬದ ಆಸರೆ ಅವಶ್ಯಕತೆ ಇದೆ. ಕುಟುಂಬದಿಂದ ದೂರ ಉಳಿದಿದ್ದಾರೆ. ಆ ಮಕ್ಕಳನ್ನು ಪ್ರೀತಿಸಿ ಅವರಿಗೆ ಕಾಳಜಿಯನ್ನು ಕೊಟ್ಟು ಕುಟುಂಬದಲ್ಲಿ ನಮ್ಮವರು ಎಂಬ ಭಾವನೆಯನ್ನು ಮಗುವಿನಲ್ಲಿ ಮೂಡಿಸಲು ಮತ್ತು ತಾತ್ಕಾಲಿಕ ವಾಸ್ತವ್ಯ ನಮ್ಮ ಕುಟುಂಬದಲ್ಲಿ ನೀಡಬೇಕಾಗಿದೆ.
ಈ ರೀತಿಯಾಗಿ ಮುಖವನ್ನು ನಮ್ಮ ಮನೆಯಲ್ಲಿ ಇರಿಸಿಕೊಂಡರೆ ಮಕ್ಕಳು ಹಾಗೂ ಪರಿವಾರದ ಹಾರೈಕೆಯಿಂದ ವಂಚಿತವಾಗಿರುವ ಮಕ್ಕಳಿಗೆ ತಾತ್ಕಾಲಿಕ ಕುಟುಂಬ ದಿಂದ ಸಿಗುವ ಕಾಳಜಿಯನ್ನು ಪೋಷಕತ್ವ ಎಂದು ಕರೆಯುತ್ತಾರೆ ಇದರಿಂದ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಅಭಿವೃದ್ಧಿ ಯಾಗಲು ಸಾಧ್ಯವಾಗುತ್ತದೆ.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಬುದ್ಧ ರೂರಲ್ ಡೆವಲಪ್ಮೆಂಟ್ ಸೊಸೈಟಿ ಯೋಜನಾ ಕಚೇರಿ ಕೋಟೆ ಎರಡನೇ ಮುಖ್ಯ ರಸ್ತೆ ಕೋಲಾರ ಮತ್ತು ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.