ಕನ್ನಡ ಸಾಹಿತ್ಯಲೋಕಕ್ಕೆ ರಾಗಂ ಅವರ ಕೊಡುಗೆ ಅಪಾರ: ವೀರೇಶ್ವರ ದೇವರು
ಅಥಣಿ :ಜೂ.30: ಕನ್ನಡ ಸಾಹಿತ್ಯಲೋಕಕ್ಕೆ ರಾಗಂ ಅವರ ಕೊಡುಗೆ ಅಪಾರವಾಗಿದ್ದು, ಅವರ ಕೃತಿಗಳಲ್ಲಿ ಪ್ರಸ್ತುತ ಬದುಕಿಗೆ ಬೇಕಿರುವ ಮೌಲ್ಯಯುತ ಸಂದೇಶ, ಸಾಮಾಜಿಕ ನ್ಯಾಯ, ಪ್ರೀತಿ, ಪ್ರೇಮ, ಪ್ರಾಕೃತಿಕ ಕಾಳಜಿ ಎದ್ದು ಕಾಣಿಸುತ್ತವೆ ಎಂದು ತೆಲಸಂಗ ಹಿರೇಮಠದ ವೀರೇಶ್ವರ ದೇವರು ಹೇಳಿದರು.
ಅವರು ಶನಿವಾರ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಡಾ.ರಾಜಶೇಖರ ಮಠಪತಿ (ರಾಗಂ) ಅವರ 101 ನೇಯ ವಿಜಯಪೂರ ಜ್ಞಾನಯೋಗಾಶ್ರಮದ ಪ.ಪೂ.ಶ್ರೀ.ಶಿದ್ಧೇಶ್ವರ ಶ್ರೀಗಳ ಜೀವನಾಧಾರಿತ ಕೃತಿ ಯೋಗಸ್ಥ ಸಂತೆಯಿಂದ ಸಂತ ನೆಡೆಗೆ ಗ್ರಂಥ ಬಿಡುಗಡೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು. ಸಂಸಾರದ ಜಂಜಾಟಗಳನ್ನು ತ್ಯಜಿಸಿ ಲೋಕ ಕಲ್ಯಾಣದಲ್ಲಿ ಮುಳಿಗಿದವನೇ ಯೋಗಸ್ಥನಾಗುತ್ತಾನೆ. ಕೈಯಲ್ಲಿ ಮೋಬೈಲ್ ಹಿಡಿಯುವುದೇ ಫ್ಯಾಷನ್ ಆಗಿರುವ ಇಂದಿನ ಆಧುನಿಕ ಯುಗದಲ್ಲಿ ಪುಸ್ತಕ ಯಾರಿಗೂ ಬೇಡವಾಗಿದೆ. ಮೌಲ್ಯಯುತವಾದ ಪುಸ್ತಕ ಓದಿದರೆ ಜೀವನ ಏನೆಂಬುದು ತಿಳಿಯುತ್ತದೆ. ಮಕ್ಕಳಿಗೆ ಓದುವ ಅಭಿರುಚಿ ಮೂಡಿಸಿ ಬೆಳಸಬೇಕಿರುವುದು ಇಂದಿನ ಅಗತ್ಯತೆಯಲ್ಲಿ ಒಂದಾಗಿದೆ ಎಂದರು.
ಬೆಂಗಳೂರಿನ ಅಥ್ಯಾತ್ಮಿಕ ಚಿಂತಕ ಜಂಬುನಾಥ ಮಳಿಮಠ ಮಾತನಾಡಿ, ಯೋಗಸ್ಥ ಕೃತಿಯಲ್ಲಿ ಬದುಕು ಮತ್ತು ಕೃತಿ ಒಂದಾಗಿ. ಕೆಲಸ ಮಾಡಿದೆ. ಈ ಮಣ್ಣಿನ ಗುಣದಲ್ಲಿ. ಸಂಸ್ಕøತಿ, ಸಾಹಿತ್ಯದ ಸತ್ವವಿದೆ. ಧರ್ಮ ಮತ್ತು ಗುರು ಪರಂಪರೆಯಲ್ಲಿ ಚಿಂತಿಸಿದಾಗ ಮಾತ್ರ ಯೋಗಸ್ಥದಂತಹ ಮೌಲ್ಯಯುತವಾದ ಕೃತಿ ಹೊರಹೊಮ್ಮಲು ಸಾಧ್ಯ. ಭಾರತದ ನಾಗರಿಕತೆಗೆ ಧರ್ಮವೇ ಪ್ರಧಾನವಾಗಿದೆ. ಈ ಧರ್ಮವು ವೇದ ಉಪನಿಷತ್‍ಗಳ ಮೇಲೆ ನಿಂತಿದೆ. ದೈವ ಮತ್ತು ಧರ್ಮಕ್ಕೆ ತಲೆ ಬಾಗಿದರೆ ಯಾವ ರಾಹುಕೇತಗಳು ಏನೂ ಮಾಡಲು ಸಾಧ್ಯವಿಲ್ಲ. ಬರಲಿರುವ 2048 ರೊಳಗಾಗಿ ಭಾರತ ದೇಶವು ಆರ್ಥಿಕ ಭದ್ರತೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಶಕ್ತ ಭಾರತವಾಗಲಿದೆ ಎಂದರು.
ಲೇಖಕ ಡಾ. ರಾಜಶೇಖರ ಮಠಪತಿ(ರಾಗಂ) ಮಾತನಾಡಿ, ಈ ತೆಲಸಂಗದ ಮಣ್ಣೀನ ವಾಸನೆಯ ಗುಣ ಅನ್ನದ ಫಲದಿಂದ 101 ಕೃತಿಗಳನ್ನು ರಚಿಸಲು ಸಾಧ್ಯವಾಯಿತು. ನನ್ನ ಹುಟ್ಟೂರಿನ ವೇದಿಕಗಳ ಉಪನ್ಯಾಸ ಹಾಗೂ ಸಾಹಸಗಳ ಮೊದಲ ಹೆಜ್ಜೆ ಆಗಿದ್ದು. ಯೋಗಸ್ಥ ಕೃತಿ ಹೊರಬರಲು ಕವಿ ಶಿವಪ್ರಕಾಶ ಅವರ ಮಾತುಗಳೇ ಮಾರ್ಗದರ್ಶಿಯಾದವು ಎಂದರು.
ರಾಜ್ಯ ವಿಷ್ಣೂ ಸೇನೆ ಹಾಗೂ ವೀರ ಲೋಕ ಪ್ರಕಾಶನದ ರಾಜ್ಯಾಧ್ಯಕ್ಷ ವಿ.ಶ್ರೀನಿವಾಸ ಮಾತನಾಡಿ, ರಾಜ್ಯದಲ್ಲಿ 8 ಸಾವೀರ ಪುಸ್ತಕಗಳು ಪ್ರತಿವರ್ಷ ಪ್ರಕಟವಾಗುತ್ತವೆ. ಐದು ನೂರು ಮಾತ್ರ ಮಾರಾಟವಾಗುತ್ತವೆ. ಪುಸ್ತಕದ ಪ್ರೀತಿಯನ್ನು ಬೆಳೆಸಿಕೊಂಡು, ನಮ್ಮಲ್ಲಿ ಆಳವಾಗಿ ಅದನ್ನು ಇಳಿಸಿಕೊಂಡಾಗ ಮಾತ್ರ ಸಾಹಿತ್ಯದ ಅರಿವಾಗಲು ಸಾಧ್ಯ ಎಂದರು.
ಬಾಗಲಕೋಟೆಯ ಕೃಷ್ಣಾನಂದ ಶರಣರು ಕೃತಿ ಪರಿಚಯಿಸಿ ಮಾತನಾಡಿ, ಶ್ರಾವಣ ಮಾಸದಲ್ಲಿ ಕೇವಲ ಪ್ರವಚನ ಪ್ರಾರಂಬಿಸವುದು ಮಾತ್ರ ನೋಡುತ್ತೇವೆ. ಬದಲಾಗಿ ಒಳ್ಳೋಳ್ಳೆಯ ಕೃತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಓದುವ ಮಾಸ ಅಂತ ಆಚರಣೆ ಮಾಡುವ ಮೂಲಕ ಓದಲು ಪ್ರೇರೆಪಿಸಿ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿರಿ. ಒಂದು ಲೇಖನ ಕೃತಿ ಮೇರು ಗ್ರಂಥವಾಗಲು ಬರಹಗಾರನಿಗೆ ಇಚ್ಚಾಶಕ್ತಿಬೇಕು. ಅಂತಹ ಇಚ್ಚಾಶಕ್ತಿ ರಾಗಂ ಅವರ ಕೃತಿಯಲ್ಲಿ ಕಂಡು ಬಂದಿದೆ.
ನ್ಯಾಯವಾದಿ ಅಮೋಘ ಖೊಬ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಶರಾಜ್ ಪರಣ್ಣವರ, ಆರ್.ಕೆ.ಕುಲಕರ್ಣಿ, ಎಮ್.ಎಸ್.ಮಧಭಾವಿ, ಬಸವರಾಜ ಭಗವತಿ. ನ್ಯಾಯವಾದಿ ದಾನೇಶ ಅವಟಿ, ಸಂತೋಷ ಹತ್ತಿ, ಶೇಖರ ರೋಡಗಿ ಸೇರಿದಂತೆ ಇತರರು ಇದ್ದರು. ಅಶೋಕ ಪರುಶೆಟ್ಟಿ ನಿರೂಪಿಸಿದರು. ಡಾ.ಬಿ.ಎಸ್.ಕಾಮನ್ ಸ್ವಾಗತಿಸಿ ವಂದಿಸಿದರು.