ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ 17 ರೈತಸಂಪರ್ಕ ಕೆಂದ್ರ ಪ್ರಾರಂಭ:ಎನ್.ಚಲುವರಾಯಸ್ವಾಮಿ
ಬೀದರ. ಜೂ.30: ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸ್ವಂತ ಕಟ್ಟಡ ಇಲ್ಲದ 17 ರೈತ ಸಂಪರ್ಕ ಕೇಂದ್ರಗಳಿಗೆ 49 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಅವರು ಶನಿವಾರ ಕೃಷಿ ಇಲಾಖೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಬೀದರ ಇವರ ಸಹಯೋಗದಲ್ಲಿ ಬೀದರ ಜಿಲ್ಲಾ ಪಂಚಾಯತ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಕಲಬುರಗಿ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ 14.50 ಕೋಟಿ ರೂಪಾಯಿ ವೆಚ್ಚದಲ್ಲಿ 58 ಗೋದಾಮುಗಳನ್ನು ನಿರ್ಮಿಸಲಾಗುವುದು ಮತ್ತು ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ 42 ಕೃಷಿ ಅಧಿಕಾರಿಗಳು, 231 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ತುಂಬಲು ಕೆ.ಪಿ.ಎಸ್. ಸಿ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಒಟ್ಟಾರೆ ರಾಜ್ಯಾದ್ಯಂತ ಕೃಷಿ ಇಲಾಖೆಯಲ್ಲಿ 979 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು.
ಬೀದರ್ ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಗೆ ತರಲಾಗುವುದು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗುವುದು. ಅರಣ್ಯ ಸಚಿವರ ಮನವಿಯಂತೆ ಸೂಕ್ಷ್ಮ ನೀರಾವರಿ, ಹನಿ ನೀರಾವರಿ ಸೇರಿದಂತೆ ಬೀದರ್ ಜಿಲ್ಲೆಗೆ ಯಂತ್ರೋಪಕರಣಗಳ ವಿತರಣೆಗೆ ಹೆಚ್ಚುವರಿ ಅನುದಾನವನ್ನು ಬೀದರ್ ಜಿಲ್ಲೆಗೆ ನೀಡಲಾಗುವುದು ಎಂದು ಚಲುವರಾಯಸ್ವಾಮಿ ಭರವಸೆ ನೀಡಿದರು.
ರಾಜ್ಯದಲ್ಲಿ 4600 ಕೋಟಿ ರೂ ಬರ ಪರಿಹಾರ ರೈತರಿಗೆ ನೀಡಲಾಗಿದೆ 1700 ಕೋಟಿ ರೂ ಮುಂಗಾರು ಹಂಗಾಮಿನ ವಿಮೆ ಪರಿಹಾರ ಇತ್ಯರ್ಥ ಮಾಡಲಾಗಿದೆ. ಈ ಬಾರಿ ಬೆಳೆ ವಿಮಾ ಕಂಪನಿಗಳಿಗೆ ವಿಧಿಸಿದ್ದ ಷರತ್ತುಗಳನ್ನು ಬದಲಾವಣೆ ಮಾಡಿದ್ದು ಶೇ. 20 ಪ್ರತಿಶತಕ್ಕಿಂತ ಅಧಿಕ ಲಾಭ ಅವರು ಪಡೆಯುವಂತಿಲ್ಲ. ಹೆಚ್ಚು ರೈತಪರ ನಿಯಮ ಅಳವಡಿಸಲಾಗಿದ. ರಾಜ್ಯದಲ್ಲಿ 1000 ಕೋಟಿ ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ ಜೊತೆಗೆ ರಾಜ್ಯ ಸರ್ಕಾರ ಈ ಬಜೆಟ್ ನಲ್ಲಿಯೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದೆ ಇದು ರೈತರ ಬಗ್ಗೆ ನಮಗೆ ಇರುವ ಬದ್ದತೆಗೆ ಸಾಕ್ಷಿ ಎಂದರು.
ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು 84 ಲಕ್ಷ ಹೆಕ್ಟೇರ್ ನಲ್ಲಿ ಈಗಾಗಲೇ ಶೇ 51 ರಷ್ಟು ಬಿತ್ತನೆಯಾಗಿದೆ. ರಸಗೊಬ್ಬರ ಬಿತ್ತನೆ ಬೀಜಕ್ಕೆ ಯಾವುದೇ ಕೊರತೆಯಾಗದಂತೆ ಪೂರೈಕೆ ಮಾಡಿದ್ದು ಲೋಪ ರಹಿತ ವಿತರಣೆಗೆ ನಿರ್ದೇಶನ ನೀಡಲಾಗಿದೆ.
ಈ ವರ್ಷ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ ಮಾಡಲಾಗುವುದು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಕೃಷಿ ಭಾಗ್ಯ ಯೋಜನೆಗೆ 200 ಕೋಟಿ ರೂಪಾಯಿ ಮೀಸಲು ಇರಿಸಲಾಗಿದೆ ಎಂದು ಹೇಳಿದರು.
ಆಹಾರ ಸಂಸ್ಕರಣೆ ಮತ್ತು ರಫ್ತು ಉತ್ತೇಜನಕ್ಕೆ ಪ್ರತ್ಯೇಕ ಆಯುಕ್ತಾಲಯ ಸ್ಥಾಪನೆ ಮಾಡಲಾಗುತ್ತಿದೆ. ಇದೇ ರೀತಿ e-sಚಿಠಿ ತಂತ್ರಾಂಶ ವಿಸ್ತರಣೆ ಮಾಡಲಾಗುವುದು ಜೊತೆಗೆ ಕೃಷಿಯಲ್ಲಿ ತಂತ್ರಜ್ಞಾನ ಆಧಾರಿತ ಮುನ್ಸೂಚನೆ ಮತ್ತು ದತ್ತಾಂಶ ಅಭಿವೃದ್ಧಿಗೆ ಒತ್ತು ನೀಡಲಾಗುವುದು. sಣಚಿಡಿಣuಠಿ ಗಳಿಗೆ ಉತ್ತೇಜನ ನೀಡಲಾಗುವುದು ಎಂದರು.
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಅಧಿಕಾರಿಗಳ ಸಭೆ ನಡೆಸಿದ ಕೃಷಿ ಸಚಿವರು ರೈತರಿಗೆ ಯಾವುದೇ ತರಹದ ಬೀಜ. ಗೊಬ್ಬರ ಸೇರಿದಂತೆ ಇತರೆ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು ಮತ್ತು ಅವರಿಗೆ ಸಕಾಲದಲ್ಲಿ ಬೀಜ ಗೊಬ್ಬರಗಳ ವಿತರಣೆ ಮಾಡಬೇಕು ಎಂದು ಹೇಳಿದ ಅವರು ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಾದ ಕಲಬುರಗಿ. ಬೀದರ. ಯಾದಗಿರಿ. ರಾಯಚೂರು. ಬಳ್ಳಾರಿ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಗಳ ಮಾಹಿತಿಯನ್ನು ಆಯಾ ಜಿಲ್ಲಾ ಕೃಷಿ ಅಧಿಕಾರಿಗಳಿಂದ ಪಡೆದರು.
ಅರಣ್ಯ. ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ಮಾತನಾಡಿ ಬೀದರ, ಕಲಬುರಗಿ ನಮ್ಮ ಭಾಗದಲ್ಲಿ ಒಣ ಭೂಮಿ ಪ್ರದೇಶ ಇದ್ದು ಇಲ್ಲಿ ನೀರಾವರಿ ಕಡಿಮೆ ಇದೆ ಹಾಗಾಗಿ ಬೀದರ ಜಿಲ್ಲೆಗೆ ಕೃಷಿ ಭಾಗ್ಯ ಯೋಜನೆಯನ್ನು ವಿಸ್ತರಿಸಬೇಕು ಮತ್ತು ಸ್ಪಿಂಕ್ಲರಗಳ ಹಾಗೂ ಟಾರಪಲಗಳ ಬೇಡಿಕೆ ಹತ್ತು ಸಾವಿರಕ್ಕಿಂತ ಹೆಚ್ಚು ನಮ್ಮ ಗಡಿ ಜಿಲ್ಲೆಗೆ ಬೇಡಿಕೆ ಇದ್ದು ಹೆಚ್ಚುವರಿಯಾಗಿ ನೀಡಬೇಕೆಂದು ಕೃಷಿ ಸಚಿವರಿಗೆ ಹೇಳಿದರು.
ಇದೇ ಸಂದರ್ಭದಲ್ಲಿ ಸಚಿವರು ಕೃಷಿ ಇಲಾಖೆಯ ಭಿತ್ತಿ ಪತ್ರ. ಕರಪತ್ರ ಮತ್ತಿತರ ಪ್ರಚಾರ ಸಾಮಗ್ರಿಗಳನ್ನು ಅನಾವರಣಗೊಳಿಸಿದರು. ಕೃಷಿ ನವೋದ್ಯಮದಡಿ ಪ್ರಾರಂಭಿಸಿರುವ ರುಚಿತ್ ಬಿ. ಉತ್ಪನ್ನಗಳು ಹಾಗೂ ಸಿರಿಧಾನ್ಯಗಳಿಂದ ಮಾಡಿದ ಕೆಕಗಳನ್ನು ಕಟ್ ಮಾಡಿದರು. ಸಭೆಯ ನಂತರ ಬೆಳೆ ಸಮೀಕ್ಷೆ ಪ್ರಚಾರ ವಾಹನಗಳಿಗೆ ಜಿಲ್ಲಾ ಪಂಚಾಯತ ಕಛೇರಿ ಆವರಣದಲ್ಲಿ ಚಾಲನೆ ನೀಡಿದರು.
ಈ ಸಭೆಯಲ್ಲಿ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂಖಾನ್. ಕೃಷಿ ಇಲಾಖೆಯ ಆಯುಕ್ತರಾದ ವೈ.ಎಸ್.ಪಾಟೀಲ, ಜಲಾನಯನ ಇಲಾಖೆಯ ಆಯುಕ್ತರಾದ ಗಿರೀಶ್, ಕೃಷಿ ಇಲಾಖೆಯ ನಿರ್ದೆಶಕರಾದ ಡಾ. ಪುತ್ರ. ಬೀದರ ನಗರಸಭೆ ಅಧ್ಯಕ್ಷರಾದ ಮಹ್ಮದ ಗೌಸ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ ಹಾಗೂ ಕಲಬುರಗಿ ವಿಭಾಗದ 7 ಜಿಲ್ಲೆಗಳ ಕೃಷಿ ಇಲಾಖೆಯ ಜಂಟಿ ನಿರ್ದೆಶಕರು ಹಾಗೂ ಉಪನಿರ್ದೆಶಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.