ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೆÇೀನ್ ವಿತರಣೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.30: ಶಿಕ್ಷಣದ ಪ್ರಾರಂಭಿಕ ಹಂತವಾದ ಅಂಗನವಾಡಿಗಳಲ್ಲಿ ಸಮುದಾಯಧಾರಿತ ಚಟುವಟಿಕೆಗಳನ್ನು ತಂತ್ರಾಂಶದ ಮೂಲಕ ದಾಖಲಿಸಲು ಸ್ಮಾರ್ಟ್ ಫೆÇೀನ್ ಗಳ ಅಗತ್ಯವಿದೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ಪಟ್ಟಣದ ಯಶಸ್ವಿನಿ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೆÇೀನ್ ಗಳನ್ನು ವಿತರಿಸಿ ಮಾತನಾಡಿದರು.
ಪೆÇೀಷಣ್ ಅಭಿಯಾನ್ ಅಡಿಯಲ್ಲಿ ಭಾರತ ಸರ್ಕಾರದ ಮಾರ್ಗಸೂಚಿಯಂತೆ ಅಂಗನವಾಡಿ ಕೇಂದ್ರದಲ್ಲಿ ಪ್ರತಿನಿತ್ಯ ನಡೆಯುವ ಚಟುವಟಿಕೆಗಳನ್ನು ಟ್ರ?ಯಾಕರ್‍ನಲ್ಲಿ ಅಳವಡಿಸಿ ಹಾಗೂ ಅಗತ್ಯ ಮಾಹಿತಿಗಳನ್ನು ಸುಲಭವಾಗಿ ಸಂಗ್ರಹಿಸಲು ಅನುಕೂಲವಾಗುವಂತೆ ಈ ಹಿಂದೆಯೇ ಮಾರ್ಗಸೂಚಿ ಹೊರಡಿಸಲಾಗಿತ್ತು. ಅದರಂತೆ ಇಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾಟ್ರ್ಫೋನ್ ವಿತರಿಸಲಾಗುತ್ತಿದೆ. ತಾಲೂಕಿನಲ್ಲಿ 400 ಅಂಗನವಾಡಿ ಕೇಂದ್ರಗಳು ಹಾಗೂ 14 ಮೇಲ್ವಿಚಾರಕಿಯರಿಗೆ ಸ್ಯಾಮ್ಸಂಗ್ ಸ್ಮಾರ್ಟ್ ಫೆÇೀನನ್ನು ನೀಡಲಾಗುತ್ತಿದೆ. ಮೊಬೈಲ್ ಫೆÇೀನ್‍ಗಳಲ್ಲಿ ಆರು ವರ್ಷದ ಒಳಗಿನ ಮಕ್ಕಳ ಮಾಹಿತಿ, ಗರ್ಭಿಣಿ ಮತ್ತು ಬಾಣಂತಿಯರ ಅಪೌಷ್ಟಿಕತೆ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಕೈಗೊಂಡ ಕ್ರಮಗಳು ಸೇರಿದಂತೆ ಅಗತ್ಯ ಮಾಹಿತಿಗಳನ್ನು ಕ್ರೂಢೀಕರಿಸುವುದು, ನೋಂದಣಿ, ಸೀಮಂತ, ಅನ್ನಪ್ರಾಶನ, ಸುಪೆÇೀಷಣೆ ದಿನ ಅರ್ಹ ಮಕ್ಕಳನ್ನು ಅಂಗನವಾಡಿಗೆ ದಾಖಲಿಸುವುದು ಮುಂತಾದ ಸಮುದಾಯ ಆಧಾರಿತ ಚಟುವಟಿಕೆಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಈ ಸ್ಮಾರ್ಟ್ ಫೆÇೀನ್‍ಗಳನ್ನು ಉಪಯೋಗಿಸಿ ಮಾಹಿತಿಗಳನ್ನು ದಾಖಲಿಸಬೇಕಿರುತ್ತದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಪೆÇೀಷಣ್ ಪಕ್ವಾಡ್ ಹಾಗೂ ಸೆಪ್ಟೆಂಬರ್ ಮಾಹೆಯಲ್ಲಿ ಪೆÇೀಷಣ್ ಮಾಸಾಚರಣೆಯನ್ನು ಇತರೆ ಇಲಾಖೆಗಳ ಸಹಯೋಗದೊಂದಿಗೆ ಮಾಡಬೇಕಾಗಿರುತ್ತದೆ ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ಎದೆಗುಂದದೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕು ಆ ಮೂಲಕ ಇಲಾಖೆಗೆ ಹಾಗೂ ತಾಲೂಕಿಗೆ ಗೌರವ ತರುವ ಕೆಲಸವನ್ನು ಮಾಡಬೇಕು. ತುಂಬಾ ಕಷ್ಟಪಡುತ್ತಿರುವ ನಿಮಗೆ ನೀಡುತ್ತಿರುವ ಗೌರವಧನ ಕಡಿಮೆ ಇದ್ದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯೊಂದಿಗೆ ವೇತನ ಹೆಚ್ಚಳ ಸಂಬಂಧ ಮಾತನಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ಕೆಎಂಎಫ್ ಜಂಟಿ ನಿರ್ದೇಶಕ ಅರವಿಂದ್, ತಹಸಿಲ್ದಾರ್ ನಿಸರ್ಗಪ್ರಿಯ, ತಾಲ್ಲೂಕು ಪಂಚಾಯಿತಿ ಇಓ ಸತೀಶ್, ಸಿಡಿಪಿಓ ಅರುಣ್‍ಕುಮಾರ್, ವೃತ್ತ ಮೇಲ್ವಿಚಾರಕಿ ಪದ್ಮಮ್ಮ ಸೇರಿದಂತೆ ಹಲವು ಮೇಲ್ವಿಚಾರಕಿಯರು, ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.