ಹಾಲು ಉತ್ಪಾದಕರ ಸಂಘಗಳು ಕಲ್ಪವೃಕ್ಷವಿದ್ದಂತೆ: ಶಾಸಕ ಹೆಚ್.ಟಿ.ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.30: ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರ ಪಾಲಿಗೆ ಕಾಮಧೇನು ಕಲ್ಪವೃಕ್ಷದಂತೆ ವರದಾನವಾಗಿವೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.
ಅವರು ತಾಲೂಕಿನ ಕಸಬಾ ಹೋಬಳಿಯ ತೆರ್ನೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಹಾಲು ಉತ್ಪಾದಕ ರೈತರು ಗುಣಮಟ್ಟದ ಹಾಲು ಉತ್ಪಾದನೆ ಮಾಡುವುದರ ಮೂಲಕ ಒಕ್ಕೂಟದ ಆದಾಯವನ್ನು ಹೆಚ್ಚಿಸಬೇಕು.ಇದರಿಂದ ರೈತರಿಗೆ ಲಾಭಾಂಶ ಹೆಚ್ಚಾಗಲಿದೆ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘಗಳು ಉಳಿಯಬೇಕಾದರೆ ರೈತರು ಗುಣಮಟ್ಟದ ಹಾಲನ್ನು ಸರಬರಾಜು ಮಾಡಬೇಕು ನಮ್ಮ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ಸಂತಸದ ಸಂಗತಿಯಾಗಿದೆ.ಹೈನುಗಾರಿಕೆಯನ್ನೇ ಕುಲಕಸುಬನ್ನಾಗಿ ಮಾಡಿಕೊಂಡು ಜೀವನ ಮಾಡುತ್ತಿರುವವರು ಒಕ್ಕೂಟದಲ್ಲಿ ಹಾಲು ಉತ್ಪಾದಕರಿಗೆ ಇರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ರೈತರಿಗೆ ಉತ್ತಮ ತಳಿಯ ಹಸು ಸಾಕಬೇಕು ಎಂದು ಆಸೆ ಇರುತ್ತದೆ.ಆದರೆ ಅವುಗಳ ಪೆÇೀಷಣೆ ಮಾಡುವುದು ಅಷ್ಟೇ ಮುಖ್ಯವಾಗಿರುತ್ತದೆ.ಹೆಚ್ಚು ಹಾಲು ನೀಡುವ ಹಸುಗಳನ್ನು ಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷರಾದ ಶ್ರೀಮತಿ ಎ,ಎಸ್.ಕಲ್ಪನಬಲದೇವ್ ರವರು 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿಮಾರ್ಗ ವಿಸ್ತರಣಾಧೀಕಾರಿ ಮಧು ಟಿಎಪಿಸಿಎಂಎಸ್ ನಿರ್ದೇಶಕ ತೆರ್ನೇನಹಳ್ಳಿ ಬಲದೇವ್ ಉಪಾಧ್ಯಕ್ಷೆ ಪದ್ಮಮ್ಮ,ನಿರ್ದೇಶಕರಾದ ವಿಜಿಯಮ್ಮ,ಚಂದ್ರಕಲಾ,ಲಕ್ಷ್ಮಮ್ಮ, ಸವಿತ,ಪ್ರಮೀಳ,ಇಂದ್ರ,ಲಲಿತಮ್ಮ,ಪಾರ್ವತಮ್ಮ,ಸುಬ್ಬಮ್ಮ, ಕಾರ್ಯದರ್ಶಿ ಜ್ಯೋತಿ,ಹಾಲು ಪರೀಕ್ಷಕಿ ಆಶಾ ಸೇರಿದಂತೆ ಹಾಲು ಉತ್ಪಾದಕರು ಗ್ರಾಮಸ್ಥರು ಉಪಸ್ಥಿತರಿದ್ದರು